ಆ್ಯಪ್ನಗರ

ಪ್ರಶಸ್ತಿಗಳ ಶತಕ ಬಾರಿಸಿದ ಫೆಡರರ್‌

ಸಾರ್ವಕಾಲಿಕ ಶ್ರೇಷ್ಠ ಟೆನಿಸ್‌ ಆಟಗಾರ ಸ್ವಿಸ್‌ ಮಾಸ್ಟರ್‌ ರೋಜರ್‌ ಫೆಡರರ್‌ ಎಟಿಪಿ ಮಿಯಾಮಿ ಮಾಸ್ಟರ್ಸ್‌ ಟೆನಿಸ್‌ ಟೂರ್ನಿ ಗೆಲ್ಲುವ ಮೂಲಕ ವೃತ್ತಿ ಬದುಕಿನ 101ನೇ ಸಿಂಗಲ್ಸ್‌ ಪ್ರಶಸ್ತಿ ಮುಡಿಗೇರಿಕೊಂಡಿದ್ದಾರೆ.

Vijaya Karnataka 5 Apr 2019, 5:00 am
ಸಾರ್ವಕಾಲಿಕ ಶ್ರೇಷ್ಠ ಟೆನಿಸ್‌ ಆಟಗಾರ ಸ್ವಿಸ್‌ ಮಾಸ್ಟರ್‌ ರೋಜರ್‌ ಫೆಡರರ್‌ ಕೆಲವು ದಿನಗಳ ಹಿಂದೆ ಎಟಿಪಿ ಮಿಯಾಮಿ ಮಾಸ್ಟರ್ಸ್‌ ಟೆನಿಸ್‌ ಟೂರ್ನಿ ಗೆಲ್ಲುವ ಮೂಲಕ ವೃತ್ತಿ ಬದುಕಿನ 101ನೇ ಸಿಂಗಲ್ಸ್‌ ಪ್ರಶಸ್ತಿ ಮುಡಿಗೇರಿಕೊಂಡಿದ್ದಾರೆ.ಈ ಮೂಲಕ ಫೆಡರರ್‌ ಅತಿಹೆಚ್ಚು ಎಟಿಪಿ ಟ್ರೋಫಿ ಗೆದ್ದ ಆಟಗಾರರಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಕಳೆದ ತಿಂಗಳು ದುಬೈ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದು 100ನೇ ಕಿರೀಟ ತೊಟ್ಟ 37 ವರ್ಷದ ಅನುಭವಿ ಆಟಗಾರ ಫೆಡರರ್‌, ಮಿಯಾಮಿ ಮಾಸ್ಟರ್ಸ್‌ ಫೈನಲ್‌ನಲ್ಲಿ ಕಳೆದ ವರ್ಷದ ಚಾಂಪಿಯನ್‌ ಅಮೆರಿಕದ ಜಾನ್‌ ಇಸ್ನರ್‌ ಅವರನ್ನು ಮಣಿಸಿ ಟ್ರೋಫಿ ಎತ್ತಿ ಹಿಡಿದರು. ಮಿಯಾಮಿ ಅಂಗಣದಲ್ಲಿ ಫೆಡರರ್‌ ಗೆದ್ದ 4ನೇ ಟ್ರೋಫಿ ಇದಾಗಿದೆ.
Vijaya Karnataka Web roger federer profile
ಪ್ರಶಸ್ತಿಗಳ ಶತಕ ಬಾರಿಸಿದ ಫೆಡರರ್‌

ಫೆಡರರ್‌ ಗೆದ್ದಿರುವ 101 ಪ್ರಶಸ್ತಿಗಳು: ವಿಂಬಲ್ಡನ್‌ 08, ಆಸ್ಪ್ರೇಲಿಯನ್‌ ಓಪನ್‌ 06,ಅಮೆರಿಕನ್‌ ಓಪನ್‌ 05, ಫ್ರೆಂಚ್‌ ಓಪನ್‌ 01, ಎಟಿಪಿ ವಿಶ್ವ ಟೂರ್‌ ಫೈನಲ್ಸ್‌ 06, ಎಟಿಪಿ 1000 ಮಾಸ್ಟರ್ಸ್‌ 28,ಎಟಿಪಿ ಟೂರ್‌ 500 - 22 ಹಾಗೂ ಎಟಿಪಿ ಟೂರ್‌ 250ರಲ್ಲಿ 25 ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಫೆಡರರ್‌, 2008ರ ಬೀಜಿಂಗ್‌ ಒಲಿಂಪಿಕ್ಸ್‌ನಲ್ಲಿ ಚಿನ್ನ ಹಾಗೂ 2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಕೂಡ ತಮ್ಮದಾಗಿಸಿಕೊಂಡಿದ್ದಾರೆ. ಐದು ಬಾರಿ ಐಟಿಎಫ್‌ ವಿಶ್ವ ಚಾಂಪಿಯನ್‌ಷಿಪ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌