ಆ್ಯಪ್ನಗರ

ಸಿಬಿಎಸ್‌ಇ ಬೋರ್ಡ್‌ 10th, 12th ಪರೀಕ್ಷೆ ರಿಸಲ್ಟ್‌ ಚೆಕ್‌ ಮಾಡುವ ವಿಧಾನಗಳಿವು..

Ways To Check CBSE Board Exa​m Results 2024 : 2023-24ನೇ ಸಾಲಿನ ಸಿಬಿಎಸ್‌ಇ 10ನೇ ತರಗತಿ ಹಾಗೂ 12ನೇ ತರಗತಿ ಬೋರ್ಡ್‌ ಪರೀಕ್ಷೆಗಳ ರಿಸಲ್ಟ್‌ ಇಂದು. ಈ ರಿಸಲ್ಟ್‌ಗಳನ್ನು ಚೆಕ್‌ ಮಾಡಲು ಇರುವ ಹಲವು ವಿಧಾನಗಳನ್ನು ಇಲ್ಲಿ ವಿದ್ಯಾರ್ಥಿಗಳು, ಪೋಷಕರ ಮಾಹಿತಿಗಾಗಿ ನೀಡಲಾಗಿದೆ.

Authored byಸುನೀಲ್ ಬಿ ಎನ್ | Vijaya Karnataka Web 13 May 2024, 12:38 pm
ಸೆಂಟ್ರಲ್ ಬೋರ್ಡ್‌ ಆಫ್‌ ಸೆಕೆಂಡರಿ ಎಜುಕೇಷನ್ 10ನೇ ತರಗತಿ ಬೋರ್ಡ್‌ ಪರೀಕ್ಷೆ ಮಾರ್ಚ್‌ 13 ರಂದು ಕೊನೆಗೊಂಡಿತು. ಈ ಪರೀಕ್ಷೆಯನ್ನು ಸುಮಾರು 20 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ದೇಶದಾದ್ಯಂತ ಬರೆದಿದ್ದಾರೆ. ಹಾಗೆಯೇ 12ನೇ ತರಗತಿ ಬೋರ್ಡ್‌ ಪರೀಕ್ಷೆಗಳು ಏಪ್ರಿಲ್ 2 ರಂದು ಅಂತ್ಯಗೊಂಡಿತು. ಈಗ ಈ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಚಿತ್ತ ತಮ್ಮ ಫಲಿತಾಂಶ ದತ್ತ ಇದೆ. ತಮ್ಮ ಯಶಸ್ಸಿನ ಅಂಕಗಳನ್ನು ನೋಡಲು ತುದಿಗಾಲಲ್ಲಿ ವಿದ್ಯಾರ್ಥಿಗಳು ಕಾದು ಕುಳಿತಿದ್ದಾರೆ. ಅಂದಹಾಗೆ ಈ ತರಗತಿಗಳ ಫಲಿತಾಂಶವನ್ನು ಇಂದು ಮಂಡಳಿ ಬಿಡುಗಡೆ ಮಾಡುತ್ತಿದೆ. ಫಲಿತಾಂಶವನ್ನು ಚೆಕ್‌ ಮಾಡಬಹುದಾದ ವಿವಿಧ 6 ವಿಧಾನಗಳನ್ನು ಇಂದಿನ ಲೇಖನದಲ್ಲಿ ತಿಳಿಸಲಾಗಿದೆ.
Vijaya Karnataka Web cbse board result 2024 for class 10 and 12 where to check know here
ಸಿಬಿಎಸ್‌ಇ ಬೋರ್ಡ್‌ 10th, 12th ಪರೀಕ್ಷೆ ರಿಸಲ್ಟ್‌ ಚೆಕ್‌ ಮಾಡುವ ವಿಧಾನಗಳಿವು..


ನೀವು ಸಹ ಸಿಬಿಎಸ್‌ಇ ರಿಸಲ್ಟ್‌ ನೋಡಲು ಕಾತುರರಾಗಿರುವ ವಿದ್ಯಾರ್ಥಿಗಳಾಗಿದ್ದಲ್ಲಿ, ಯಾವೆಲ್ಲ ವಿಧಾನಗಳಿಂದ ತಮ್ಮ ಫಲಿತಾಂಶ ಪಡೆಯಬಹುದು ಎಂದು ಈ ಕೆಳಗಿನಂತೆ ಒಮ್ಮೆ ಓದಿಕೊಳ್ಳಿ.

​ಸಿಬಿಎಸ್‌ಇ ಅಧಿಕೃತ ವೆಬ್‌ಸೈಟ್‌ಗಳ ಮೂಲಕ

​ಸಿಬಿಎಸ್‌ಇ 10ನೇ ತರಗತಿ, 12ನೇ ತರಗತಿ ರಿಸಲ್ಟ್‌ ಅನ್ನು ವಿದ್ಯಾರ್ಥಿಗಳು ಈ ಕೆಳಗಿನ ಪ್ರಮುಖ ಮೂರು ವೆಬ್‌ಸೈಟ್‌ಗಳ ಮೂಲಕ ಚೆಕ್‌ ಮಾಡಬಹುದಾಗಿದೆ.
​- cbse.nic.in
​- cbseresults.nic.in
​- results.nic.in

ಸಿಬಿಎಸ್‌ಇ 10th, 12th ಬೋರ್ಡ್‌ ಎಕ್ಸಾಮ್‌ 2024 ಫಲಿತಾಂಶ ಯಾವಾಗ?., ಇಲ್ಲಿದೆ ನೋಡಿ ಉತ್ತರ

ವೆಬ್‌ಸೈಟ್‌ಗಳಲ್ಲಿ ರಿಸಲ್ಟ್‌ ಚೆಕ್‌ ಮಾಡುವ ಹಂತಗಳು​

ಮೇಲಿನ ಯಾವುದೇ ವೆಬ್‌ಸೈಟ್‌ಗೆ ಭೇಟಿ ನೀಡಿ. ಮೊದಲಿಗೆ ಸಿಬಿಎಸ್‌ಇ ಪರೀಕ್ಷೆ ಬರೆದ ತರಗತಿ ರಿಸಲ್ಟ್‌ ಲಿಂಕ್ ಆಯ್ಕೆ ಮಾಡಿ. ನಂತರ ಮುಂದಿನ ಹಂತಗಳನ್ನು ಫಾಲೋ ಮಾಡಿ.
- ಶಾಲಾ ಕೋಡ್‌, ರಿಜಿಸ್ಟರ್‌ ನಂಬರ್‌, ಸೆಂಟರ್‌ ಕೋಡ್‌, ಅಡ್ಮಿಟ್‌ ಕಾರ್ಡ್‌ ಐಡಿ ನಂಬರ್ ಎಂಟರ್ ಮಾಡಿ.
- ಅಗತ್ಯ ಮಾಹಿತಿಗಳನ್ನು ನೀಡಿದ ನಂತರ 'Submit' ಬಟನ್‌ ಮೇಲೆ ಕ್ಲಿಕ್ ಮಾಡಿ.
- ರಿಸಲ್ಟ್‌ ಪೇಜ್ ಓಪನ್‌ ಆಗುತ್ತದೆ.
- ಡೌನ್‌ಲೋಡ್‌ ಮಾಡಿ, ಮುಂದಿನ ರೆಫರೆನ್ಸ್‌ಗಾಗಿ ಪ್ರಿಂಟ್‌ ತೆಗೆದುಕೊಳ್ಳಿ.

ನೆನಪಿರಲಿ: ಸಿಇಟಿ ಫಲಿತಾಂಶದ ನಂತರ Engineering, ಇತರೆ ಕೋರ್ಸ್‌ ಪ್ರವೇಶಕ್ಕೆ ಸರ್ಕಾರದಿಂದ ಈ ಸಾಲ ಸಿಗಲಿದೆ!

​ ಶಾಲೆಗಳಿಗೆ ಭೇಟಿ ನೀಡಿ ರಿಸಲ್ಟ್‌ ಪಡೆಯಬಹುದು

ಸಿಬಿಎಸ್‌ಇ ಯು ಶಾಲೆಗಳಿಗೂ ಸಹ ಹೊಸದಾಗಿ ಕ್ರಿಯೇಟ್‌ ಮಾಡಲಾದ ಇ-ಮೇಲ್‌ ಮೂಲಕ ಫಲಿತಾಂಶವನ್ನು ಕಳುಹಿಸುವ ವ್ಯವಸ್ಥೆ ಮಾಡುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಶಾಲೆಯ ಶಿಕ್ಷಕರು ಹಾಗೂ ಪ್ರಾಂಶುಪಾಲರನ್ನು ಸಹ ಸಂಪರ್ಕಿಸಿ ಫಲಿತಾಂಶ ಮಾಹಿತಿ ತಿಳಿಯಬಹುದು. ನೀವು ಓದಿದ ಶಾಲೆಗೆ ಹೋಗಿ, ಅಲ್ಲಿ ನಿಮ್ಮ ರಿಜಿಸ್ಟರ್ ನಂಬರ್ ನೀಡುವ ಮೂಲಕ ರಿಸಲ್ಟ್‌ ಪಡೆಯಬಹುದು.

ಸೀತಾರಾಮ್ ಜಿಂದಾಲ್ ಸ್ಕಾಲರ್‌ಶಿಪ್: ಪಿಯು ಇಂದ ಪಿಜಿ ವರೆಗೆ ಪ್ರತಿ ತಿಂಗಳು ರೂ.500 ರಿಂದ 3200 ವಿದ್ಯಾರ್ಥಿವೇತನ

​ಡಿಜಿಲಾಕರ್‌ನಲ್ಲಿ ಫಲಿತಾಂಶ

ಸಿಬಿಎಸ್‌ಇ ಬೋರ್ಡ್‌ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಡಿಜಿಲಾಕರ್ ಮೊಬೈಲ್ ಅಪ್ಲಿಕೇಶನ್‌ ಮೂಲಕ ಸಹ ತಮ್ಮ ರಿಸಲ್ಟ್‌ ಚೆಕ್‌ ಮಾಡಬಹುದು. ಅಲ್ಲದೇ ತಮ್ಮ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಅಲ್ಲದೇ ಸ್ಕಿಲ್‌ ಸರ್ಟಿಫಿಕೇಟ್‌ಗಳನ್ನು ಕೂಡ ಡೌನ್‌ಲೋಡ್‌ ಮಾಡಬಹುದು. ಅದು ಹೇಗೆ ಎಂದು ಕೆಳಗಿನಂತೆ ತಿಳಿಸಲಾಗಿದೆ ನೋಡಿ.
- ಸಿಬಿಎಸ್‌ಇ'ಯು ವಿದ್ಯಾರ್ಥಿಗಳು ರಿಜಿಸ್ಟರ್‌ ಮಾಡಿದ ಮೊಬೈಲ್‌ ನಂಬರ್‌ಗೆ ಡಿಜಿಲಾಕರ್‌ ಲಾಗಿನ್‌ ಮಾಹಿತಿಗಳನ್ನು ಎಸ್‌ಎಂಎಸ್‌ ಮೂಲಕ ಕಳುಹಿಸಿರುತ್ತದೆ.
- ಡಿಜಿಲಾಕರ್‌ ಮೊಬೈಲ್‌ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿ, ಇನ್‌ಸ್ಟಾಲ್‌ ಮಾಡಿಕೊಳ್ಳಿ. ನಂತರ ಓಪನ್ ಮಾಡಿರಿ.
- ವಿದ್ಯಾರ್ಥಿಗಳು ಸಿಬಿಎಸ್‌ಇ ರಿಜಿಸ್ಟರ್‌ ಮೊಬೈಲ್‌ ನಂಬರ್ ಅನ್ನು ಎಂಟರ್ ಮಾಡಿ. ನಿಮಗೆ ಸಂಖ್ಯೆಗಳಲ್ಲಿ ಓಟಿಪಿ ಬರುತ್ತದೆ.
- ನಂತರ ಓಟಿಪಿ ನೀಡಿ ಹಾಗೂ ಪಾಸ್‌ವರ್ಡ್‌ ಆಗಿ ನಿಮ್ಮ ರಿಜಿಸ್ಟರ್‌ ನಂಬರ್‌ ನ ಕೊನೆ 6 ಸಂಖ್ಯೆಗಳನ್ನು ಎಂಟರ್‌ ಮಾಡಿ.
- ನಂತರ ಫಲಿತಾಂಶ ಶೀಟ್‌, ಇತರೆ ಸರ್ಟಿಫಿಕೇಟ್‌ಗಳು ಪ್ರದರ್ಶಿತವಾಗಲಿದ್ದು, ಡೌನ್‌ಲೋಡ್‌ ಮಾಡಬಹುದು. ಪ್ರಿಂಟ್ ತೆಗೆದುಕೊಳ್ಳಬಹುದು.

​SMS ಮೂಲಕ ರಿಸಲ್ಟ್‌

- ಎಸ್‌ಎಂಎಸ್‌ ಮೂಲಕ ಸಹ ಸಿಬಿಎಸ್‌ಇ ಫಲಿತಾಂಶ ಪಡೆಯಲು ಅವಕಾಶ ಇದೆ.
- ಹತ್ತನೇ ತರಗತಿ ಪರೀಕ್ಷೆ ಬರೆದವರು 'CBSE10 ಎಂದು ಟೈಪಿಸಿ ಸ್ಪೇಸ್‌ ನೀಡಿ, ನಂತರ ರೋಲ್‌ ನಂಬರ್ ಟೈಪಿಸಿ ಸ್ಪೇಸ್‌ ನೀಡಿ, ನಂತರ ಅಡ್ಮಿಟ್‌ ಕಾರ್ಡ್‌ ಐಡಿ ಟೈಪಿಸಿ.
- ಹನ್ನೆರಡನೇ ತರಗತಿ ಪರೀಕ್ಷೆ ಬರೆದವರು 'CBSE12 ಎಂದು ಟೈಪಿಸಿ ಸ್ಪೇಸ್‌ ನೀಡಿ, ನಂತರ ರೋಲ್‌ ನಂಬರ್ ಟೈಪಿಸಿ ಸ್ಪೇಸ್‌ ನೀಡಿ, ನಂತರ ಅಡ್ಮಿಟ್‌ ಕಾರ್ಡ್‌ ಐಡಿ ಟೈಪಿಸಿ.
- ಮೇಲಿನ ಮಾಹಿತಿಯಂತೆ ಟೈಪಿಸಿದ ಮೆಸೇಜ್‌ ಅನ್ನು ನಂಬರ್ - 7738299899 ಗೆ ಕಳುಹಿಸಿ.
- ಫಲಿತಾಂಶವು ನಿಮ್ಮ ಮೊಬೈಲ್‌ಗೆ ಮೆಸೇಜ್‌ ರೂಪದಲ್ಲಿ ಬರಲಿದ್ದು ಚೆಕ್‌ ಮಾಡಿಕೊಳ್ಳಬಹುದು.

​UMANG ಅಪ್ಲಿಕೇಶನ್‌ ಮೂಲಕ ಫಲಿತಾಂಶ

- ವಿದ್ಯಾರ್ಥಿಗಳು ಸಿಬಿಎಸ್‌ಇ ಫಲಿತಾಂಶವನ್ನು UMANG ಮೊಬೈಲ್‌ ಅಪ್ಲಿಕೇಶನ್‌ ಮೂಲಕ ಸಹ ಚೆಕ್‌ ಮಾಡಬಹುದು.
- ಮೊದಲಿಗೆ ಮೊಬೈಲ್‌ ನಲ್ಲಿ UMANG ಅಪ್ಲಿಕೇಶನ್‌ ಡೌನ್‌ಲೋಡ್ ಮಾಡಿ ಇನ್‌ಸ್ಟಾಲ್‌ ಮಾಡಿ. ನಂತರ ಓಪನ್‌ ಮಾಡಿ. ಅಲ್ಲಿ ಡಿಜಿಲಾಕರ್‌ ಅಪ್ಲಿಕೇಶನ್‌ ಆಕ್ಸೆಸ್‌ಗೆ ಅವಕಾಶ ಸಿಗಲಿದೆ. ಅದರ ಮೇಲೆ ಕ್ಲಿಕ್ ಮಾಡಿ.
- ವಿದ್ಯಾರ್ಥಿಗಳು ಸಿಬಿಎಸ್‌ಇ ರಿಜಿಸ್ಟರ್‌ ಮೊಬೈಲ್‌ ನಂಬರ್ ಅನ್ನು ಎಂಟರ್ ಮಾಡಿ. ಓಟಿಪಿ ಬರುತ್ತದೆ.
- ನಂತರ ಓಟಿಪಿ ಹಾಗೂ ಪಾಸ್‌ವರ್ಡ್‌ ಆಗಿ ನಿಮ್ಮ ರಿಜಿಸ್ಟರ್‌ ನಂಬರ್‌ ನ ಕೊನೆ 6 ಸಂಖ್ಯೆಗಳನ್ನು ಎಂಟರ್‌ ಮಾಡಿ.
- ನಂತರ ಫಲಿತಾಂಶ ಶೀಟ್‌, ಇತರೆ ಸರ್ಟಿಫಿಕೇಟ್‌ಗಳನ್ನು ಪಡೆಯಬಹುದು.

​IVR ವಿಧಾನ ಮೂಲಕ ಫಲಿತಾಂಶ

ಕೇಂದ್ರ ಪ್ರೌಢಶಿಕ್ಷಣ ಮಂಡಳಿ IVR (Interactive voice response) ಪ್ರೊಸೆಸ್‌ ಮೂಲಕವು ಸಹ ವಿದ್ಯಾರ್ಥಿಗಳ ಫಲಿತಾಂಶವನ್ನು ಲಭ್ಯಗೊಳಿಸಲಿದೆ. ಈ ವಿಧಾನದ ಮೂಲಕ
ವಿದ್ಯಾರ್ಥಿಗಳು ಸಂವಾದಾತ್ಮಕ ಧ್ವನಿ ಪ್ರತಿಕ್ರಿಯೆ ಇಂದ ಸಿಬಿಎಸ್‌ಸಿ 10ನೇ, 12ನೇ ತರಗತಿ ಫಲಿತಾಂಶ ಚೆಕ್‌ ಮಾಡಬಹುದು.
ಈ ಕೆಳಗಿನ ನಂಬರ್‌ಗಳು ನ್ಯಾಷನಲ್ ಇನ್‌ಫಾರ್ಮೆಟಿಕ್ ಸೆಂಟರ್‌(ಎನ್‌ಐಸಿ) ನಂಬರ್‌ಗಳು. ನಿಮ್ಮ ಮೊಬೈಲ್‌ನಲ್ಲಿ ಈ ನಂಬರ್‌ಗಳನ್ನು ಡಯಲ್‌ ಮಾಡಿ ರಿಸಲ್ಟ್‌ ಪಡೆಯಬಹುದು.
- ದೆಹಲಿ ಸ್ಥಳೀಯ ಸಬ್‌ಸ್ಕ್ರೈಬರ್‌ಗಳು 24300699 ಮೂಲಕ ಫಲಿತಾಂಶ ತಿಳಿಯಬಹುದು.
- ದೆಹಲಿ ಹೊರತುಪಡಿಸಿ ದೇಶದ ಇತರೆ ಭಾಗದವರು 011-24300699 ಡಯಲ್‌ ಮಾಡಿ ಫಲಿತಾಂಶ ತಿಳಿಯಬಹುದು.

ಲೇಖಕರ ಬಗ್ಗೆ
ಸುನೀಲ್ ಬಿ ಎನ್
"ಸುನೀಲ್ ಬಿ ಎನ್ ರವರು ಅನುಭವಿ ಬರಹಗಾರರಾಗಿದ್ದು, ಕಳೆದ 7 ವರ್ಷಗಳಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು 2015 ರಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದರು. ನಂತರ ಹಲವು ಡೊಮೈನ್‌ಗಳಲ್ಲಿ ಕೆಲಸ ಮಾಡುವ ಮೂಲಕ ತಮ್ಮ ವೃತ್ತಿ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಂಡಿದ್ದಾರೆ. ಸುನೀಲ್ ರವರು ವೈವಿಧ್ಯಮಯ ಪರಿಣತಿಯನ್ನು ಹೊಂದಿದ್ದು, ತಂತ್ರಜ್ಞಾನ, ಸಿನಿಮಾ, ಉದ್ಯೋಗ, ಶಿಕ್ಷಣ, ಜೀವನಶೈಲಿ ಸೇರಿದಂತೆ ಸುದ್ದಿ ವಿಭಾಗದಲ್ಲೂ ಕೆಲಸದ ಅನುಭವ ಹೊಂದಿದ್ದಾರೆ. ಕಳೆದ 3.6 ವರ್ಷಗಳಿಂದ ಸುನೀಲ್‌ ರವರು ಉದ್ಯೋಗ ಮತ್ತು ಶಿಕ್ಷಣ ವಿಭಾಗದಲ್ಲಿ ತಮ್ಮ ಬರವಣಿಗೆ ಕೃಷಿಯನ್ನು ಕೇಂದ್ರೀಕರಿಸಿದ್ದು, ಈ ವಿಷಯಗಳಲ್ಲಿ ಉದ್ಯಮದ ಸೂಕ್ಷ್ಮ ವ್ಯತ್ಯಾಸಗಳ ಬಗ್ಗೆ ಆಳವಾದ ತಿಳುವಳಿಕೆಯನ್ನು ಬೆಳೆಸಿಕೊಂಡಿದ್ದಾರೆ. ಈ ಎರಡು ಡೊಮೇನ್‌ಗಳಲ್ಲಿನ ಬೆಳವಣಿಗೆ ಹಾಗೂ ಬದಲಾವಣೆ ಕುರಿತು ಲೇಟೆಸ್ಟ್‌ ಮಾಹಿತಿಗಳನ್ನು ರಚಿಸುವ ಮೂಲಕ ಓದುಗರಿಗೆ ಸಹಾಯ ಮಾಡುವ ಹಾಗೂ ಅವರಿಗೆ ಉಪಯುಕ್ತ ಮಾಹಿತಿ ನೀಡುವಲ್ಲಿ ಸದಾ ಉತ್ಸುಕರಾಗಿ ಕೆಲಸ ಮಾಡುತ್ತಿದ್ದಾರೆ. ಬರವಣಿಗೆ ಹೊರತಾಗಿ, ಸುನೀಲ್‌ ಬಿ ಎನ್‌ ರವರು ಹಲವು ಉತ್ತಮ ಹವ್ಯಾಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಬಿಡುವಿನ ವೇಳೆ ಪ್ರಯಾಣಿಸಲು ಹಾಗೂ ಹೊಸ ಸ್ಥಳಗಳನ್ನು ಅನ್ವೇಷಿಸಲು ಇಷ್ಟಪಡುತ್ತಾರೆ. ಪ್ರಯಾಣವನ್ನು ಶಿಕ್ಷಣದ ಒಂದು ಭಾಗ ಎಂದುಕೊಂಡಿರುವ ಇವರು, ತಮ್ಮ ಈ ಹವ್ಯಾಸದಿಂದ ಅವರ ದೃಷ್ಟಿಕೋನವನ್ನು ವಿಸ್ತರಿಸಲು ಮತ್ತು ವಿಭಿನ್ನ ಸಂಸ್ಕೃತಿಗಳ ಉತ್ತಮ ತಿಳುವಳಿಕೆಯನ್ನು ಪಡೆಯಲು ಸಹಾಯ ಮಾಡುತ್ತದೆ ಎಂದು ಭಾವಿಸಿದ್ದಾರೆ. ಅತ್ಯಾಸಕ್ತಿಯ ಓದುಗರು ಆಗಿದ್ದು ಕಥೆ, ಕಾದಂಬರಿ, ನಾಟಕಗಳ ಪುಸ್ತಕಗಳನ್ನು ಓದುವುದನ್ನು ಇಷ್ಟಪಡುತ್ತಾರೆ. ಬಿಡುವಿನ ವೇಳೆ ಚೆಸ್‌ ಆಡುವುದು ಮತ್ತು ಕೃಷಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಮೂಲಕವು ವಿಶ್ರಾಂತಿ ಪಡೆಯುತ್ತಾರೆ. "... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌