ಆ್ಯಪ್ನಗರ

ಪೂರ್ವ ಮೆಟ್ರಿಕ್ ಬಾಲಕಿಯರ ವಸತಿನಿಲಯಗಳಿಗೆ ಹೆಚ್ಚುವರಿ ಮಹಿಳಾ ಸೂಪರಿಂಟೆಂಡೆಂಟ್ ಪಟ್ಟಿ ಪ್ರಕಟ

Karnataka Hostel Superintendent Result 2019: ಪೂರ್ವ ಮೆಟ್ರಿಕ್ ಬಾಲಕಿಯರ ವಸತಿನಿಲಯಗಳಿಗೆ ಮಹಿಳಾ ಸೂಪರಿಂಟೆಂಡೆಂಟ್‌ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಹೆಚ್ಚುವರಿ ಸೆಲೆಕ್ಷನ್‌ ಲಿಸ್ಟ್‌ ಬಿಡುಗಡೆ ಮಾಡಿದೆ.

Vijaya Karnataka Web 20 Nov 2019, 5:55 pm
ಕರ್ನಾಟಕ ಲೋಕಸೇವಾ ಆಯೋಗವು, ರಾಜ್ಯದ ಪೂರ್ವ ಮೆಟ್ರಿಕ್ ಬಾಲಕಿಯರ ವಸತಿನಿಲಯಗಳಿಗೆ ಮಹಿಳಾ ಸೂಪರಿಂಟೆಂಡೆಂಟ್‌ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಹೆಚ್ಚುವರಿ ಸೆಲೆಕ್ಷನ್‌ ಲಿಸ್ಟ್‌ ಬಿಡುಗಡೆ ಮಾಡಿದೆ. ಈ ಹುದ್ದೆಗಳ ನೇಮಕಾತಿಯ ವಿವಿಧ ಹಂತಗಳಲ್ಲಿ ಪಾಲ್ಗೊಂಡವರು ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವೆಬ್‌ನಲ್ಲಿ ಇತ್ತೀಚೆಗೆ ಪ್ರಕಟಿಸಲಾದ ಅಂತಿಮ ಆಯ್ಕೆಪಟ್ಟಿಯಲ್ಲಿ ಹೆಸರು ಪಡೆಯಲು ವಂಚಿತರಾದ ಅಭ್ಯರ್ಥಿಗಳು ಪ್ರಸ್ತುತ ಹೆಚ್ಚುವರಿ ಆಯ್ಕೆಪಟ್ಟಿಯಲ್ಲಿ ತಮ್ಮ ಹೆಸರನ್ನು ಚೆಕ್‌ ಮಾಡಿಕೊಳ್ಳಬಹುದು.
Vijaya Karnataka Web Karnataka Hostel Superintendent Result 2019
kpsc hostel superintendents selection list 2019


ಮಹಿಳಾ ಅಧೀಕ್ಷಕರ ನೇಮಕಾತಿ ಅಧಿಸೂಚನೆ ಸಂಖ್ಯೆ PSC 1 RT(4)B-1/2016 ಕ್ಕೆ ಸಂಬಂಧಿಸಿದಂತೆ, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಪೂರ್ವ ಮೆಟ್ರಿಕ್ ಬಾಲಕಿಯರ ವಸತಿನಿಲಯಗಳಿಗೆ ಅಂತಿಮ ಆಯ್ಕೆಪಟ್ಟಿಯನ್ನು ಕಳೆದ ಜನವರಿ 1 ರಂದು ಕೆಪಿಎಸ್‌ಸಿ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಾಗಿತ್ತು.

ಪ್ರಸ್ತುತ ಕರ್ನಾಟಕ ನಾಗರೀಕ ಸೇವೆ ನೇರ ನೇಮಕಾತಿ ನಿಯಮಗಳನ್ವಯ ಅಗತ್ಯ ಹುದ್ದೆಗಳಿಗೆ ಹೆಚ್ಚುವರಿ ಮಹಿಳಾ ಅಧೀಕ್ಷಕರ ಪಟ್ಟಿಯನ್ನು ಸಿದ್ಧಪಡಿಸಿ ಬಿಡುಗಡೆ ಮಾಡಲಾಗಿದೆ.

ಮೆಟ್ರಿಕ್ ನಂತರದ ಹಾಸ್ಟೆಲ್‌ಗಳ ಪುರುಷ ವಾರ್ಡನ್ ಹುದ್ದೆಗಳಿಗೆ ಹೆಚ್ಚುವರಿ ಆಯ್ಕೆಪಟ್ಟಿ ಬಿಡುಗಡೆ

ಅಭ್ಯರ್ಥಿಗಳು ಕರ್ನಾಟಕ ಪಬ್ಲಿಕ್ ಸರ್ವಿಸ್ ಕಮಿಷನ್ ವೆಬ್‌ಸೈಟ್‌ www.kpsc.kar.nic.in ನಲ್ಲಿ ಅಡಿಷನಲ್ ಸೆಲೆಕ್ಷನ್‌ ಲಿಸ್ಟ್‌ ಚೆಕ್‌ ಮಾಡಬಹುದು. ಅಥವಾ ಕೆಳಗೆ ನೀಡಲಾದ ಡೈರೆಕ್ಟ್‌ ಲಿಂಕ್‌ ಕ್ಲಿಕ್ ಮಾಡಿ ಪಿಡಿಎಫ್‌ ಫೈಲ್‌ ಡೌನ್‌ಲೋಡ್‌ ಮಾಡಬಹುದು.

ಪೂರ್ವ ಮೆಟ್ರಿಕ್‌ ಬಾಲಕಿಯರ ವಸತಿನಿಲಯಗಳಿಗೆ ಮಹಿಳಾ ಸೂಪರಿಂಟೆಂಡೆಂಟ್‌ ಹೆಚ್ಚುವರಿ ಆಯ್ಕೆ ಪಟ್ಟಿ

ಹೆಚ್ಚುವರಿ ಆಯ್ಕೆಪಟ್ಟಿಯಲ್ಲಿ ಒಟ್ಟು 8 (5+3HK) ಅಭ್ಯರ್ಥಿಗಳ ಹೆಸರನ್ನು ನೀಡಲಾಗಿದೆ. ರಿಜಿಸ್ಟರ್‌ ನಂಬರ್, ಗಳಿಸಿದ ಅಂಕಗಳು ಮತ್ತು ಶೇಕಡ ಅಂಕಗಳನ್ನು ನೀಡಲಾಗಿದೆ.

ಪೋಸ್ಟ್‌ ಮೆಟ್ರಿಕ್ ಹಾಸ್ಟೆಲ್‌ಗಳ ಮಹಿಳಾ ವಾರ್ಡನ್ ಹುದ್ದೆಗಳಿಗೆ ಹೆಚ್ಚುವರಿ ಆಯ್ಕೆಪಟ್ಟಿ ಪ್ರಕಟ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌