ಆ್ಯಪ್ನಗರ

KREIS ಸ್ಟಾಫ್‌ ನರ್ಸ್‌ ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿ, ಕಟ್‌ಆಫ್‌ ಅಂಕಗಳು ರಿಲೀಸ್

179+84HK ಸ್ಟಾಫ್‌ ನರ್ಸ್‌ ಹುದ್ದೆಗಳ ಅಂತಿಮ ಆಯ್ಕೆಪಟ್ಟಿ ಮತ್ತು ಕಟ್‌ಆಫ್‌ ಅಂಕಗಳನ್ನು ನೋಡಲು ಈ ಕೆಳಗಿನ ಡೈರೆಕ್ಟ್‌ ಲಿಂಕ್‌ ಅನ್ನು ಕ್ಲಿಕ್ ಮಾಡಿ.

Vijaya Karnataka Web 28 Nov 2019, 7:17 pm

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ಸಂಘದ ಅಧೀನದಲ್ಲಿನ, ಮೊರಾರ್ಜಿ ದೇಸಾಯಿ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳ ಸ್ಟಾಫ್‌ ನರ್ಸ್‌ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಕೆಪಿಎಸ್‌ಸಿ ಅಂತಿಮ ಆಯ್ಕೆಪಟ್ಟಿ ಪ್ರಕಟಿಸಲಾಗಿದೆ. ಕರ್ನಾಟಕ ಲೋಕಸೇವಾ ಆಯೋಗದ ವೆಬ್‌ಸೈಟ್‌ನಲ್ಲಿ ನರ್ಸ್‌ ಹುದ್ದೆಗಳಿಗೆ ಆಯ್ಕೆಯಾದವರ ಫೈನಲ್‌ ಸೆಲೆಕ್ಷನ್‌ ಲಿಸ್ಟ್‌ ಅನ್ನು ಅಪ್‌ಲೋಡ್‌ ಮಾಡಲಾಗಿದ್ದು, ಅಭ್ಯರ್ಥಿಗಳು ಚೆಕ್‌ ಮಾಡಬಹುದು.
Vijaya Karnataka Web staff nurse final merit list 2017
kpsc KREIS staff nurse final selection list of 2017 recruitment


KREIS ಮೊರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗಳಿಗೆ ಒಟ್ಟು 179+84HK ಸ್ಟಾಫ್‌ ನರ್ಸ್‌ಗಳ ನೇಮಕಾತಿಗೆ (ಅಧಿಸೂಚನೆ ಸಂಖ್ಯೆ R (2)1084/17-18/PSC) ದಿನಾಂಕ 23-06-2019 ರಂದು ನೋಟಿಫಿಕೇಶನ್‌ ಹೊರಡಿಸಲಾಗಿತ್ತು.

ಈ ಹುದ್ದೆಗಳಿಗೆ ಎಲ್ಲಾ ನೇಮಕಾತಿ ಪ್ರಕ್ರಿಯೆಗಳನ್ನು ಮುಗಿಸಿ, ಇತ್ತೀಚೆಗೆ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗಿತ್ತು. ಪ್ರಾವಿಷನಲ್ ಸೆಲೆಕ್ಷನ್‌ ಲಿಸ್ಟ್‌ಗೆ ಆಕ್ಷೇಪಣೆ ಸಲ್ಲಿಸಲು ನಿಗದಿತ ಅವಕಾಶ ನೀಡಲಾಗಿತ್ತು. ಪ್ರಸ್ತುತ ಆಕ್ಷೇಪಣೆಗಳನ್ನು ಸ್ವೀಕರಿಸಿ, ಮುಂದಿನ ಪ್ರಕ್ರಿಯೆಯಂತೆ ಹುದ್ದೆಗಳಿಗೆ ಅಂತಿಮವಾಗಿ ಆಯ್ಕೆ ಮಾಡಲಾದ ಹೆಸರುಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಹಾಗೂ ಕಟ್‌ಆಫ್‌ ಅಂಕಗಳ ಲಿಸ್ಟ್‌ ಅನ್ನು ಪ್ರಕಟಿಸಲಾಗಿದೆ.

179+84HK ಸ್ಟಾಫ್‌ ನರ್ಸ್‌ಗಳ ಹುದ್ದೆಗಳ ಅಂತಿಮ ಆಯ್ಕೆಪಟ್ಟಿ ಮತ್ತು ಕಟ್‌ ಆಫ್‌ ಅಂಕಗಳನ್ನು ನೋಡಲು ಈ ಕೆಳಗಿನ ಡೈರೆಕ್ಟ್‌ ಲಿಂಕ್‌ ಅನ್ನು ಕ್ಲಿಕ್ ಮಾಡಿ.

ಸ್ಟಾಫ್‌ ನರ್ಸ್ ಹುದ್ದೆಗಳ ಅಂತಿಮ ಆಯ್ಕೆಪಟ್ಟಿಕೆ

ಸ್ಟಾಪ್‌ ನರ್ಸ್‌ ಹುದ್ದೆಗಳ ಕಟ್‌ಆಫ್‌ ಅಂಕಗಳು

ಸ್ಟಾಫ್‌ ನರ್ಸ್‌ ಒಟ್ಟು 179+84HK ಹುದ್ದೆಗಳ ಪೈಕಿ, ಅಂತಿಮ ಆಯ್ಕೆಪಟ್ಟಿಯಲ್ಲಿ 178 ನಾನ್‌-ಹೈದೆರಾಬಾದ್ ಕರ್ನಾಟಕ ಹುದ್ದೆಗಳಿಗೆ, 78 ಹೈದೆರಾಬಾದ್ ಕರ್ನಾಟಕ ಹುದ್ದೆಗಳಿಗೆ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಲಾಗಿದೆ. ಅಭ್ಯರ್ಥಿಗಳು ಫೈನಲ್‌ ಸೆಲೆಕ್ಷನ್‌ ಲಿಸ್ಟ್‌ನಲ್ಲಿ ರಿಜಿಸ್ಟರ್‌ ನಂಬರ್, ಹೆಸರು, ಗಳಿಸಿದ ಅಂಕಗಳು, ಆಯ್ಕೆಯಾದ ಮೀಸಲಾತಿ ವಿವರಗಳನ್ನು ಚೆಕ್‌ ಮಾಡಿಕೊಳ್ಳಬಹುದು.

IDBI ಬ್ಯಾಂಕ್‌ನಲ್ಲಿ ಉದ್ಯೋಗಾವಕಾಶ.. ಆನ್‌ಲೈನ್‌ ಅರ್ಜಿ ಆಹ್ವಾನ

ಪ್ರಸ್ತುತ ಬಿಡುಗಡೆ ಮಾಡಲಾಗಿರುವ ಆಯ್ಕೆಪಟ್ಟಿಗೆ ಯಾವುದೇ ಆಕ್ಷೇಪಣೆ ಸಲ್ಲಿಸಲು ಅವಕಾಶ ಇರುವುದಿಲ್ಲ.

ವಿಶಾಖಪಟ್ಟಣಂ ನೌಕಾ ನೆಲೆಯಲ್ಲಿ ಅಪ್ರೆಂಟಿಸ್ ಉದ್ಯೋಗಾವಕಾಶ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌