ಆ್ಯಪ್ನಗರ

ಕರ್ನಾಟಕ ವಸತಿ ಶಾಲೆಗಳ ವಾರ್ಡನ್ ಹುದ್ದೆಗಳಿಗೆ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

407+110HK ಕೆಆರ್‌ಇಐಎಸ್ ವಾರ್ಡನ್‌ ಹುದ್ದೆಗಳ ಪೈಕಿ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ, 404 ನಾನ್‌ ಹೈದೆರಾಬಾದ್ ಕರ್ನಾಟಕ ಹುದ್ದೆಗಳಿಗೆ, 109 ಹೈದೆರಾಬಾದ್‌ ಕರ್ನಾಟಕ ಹುದ್ದೆಗಳಿಗೆ ಹೆಸರನ್ನು ಪ್ರಕಟಿಸಲಾಗಿದೆ.

Vijaya Karnataka Web 28 Nov 2019, 11:50 am

ಕರ್ನಾಟಕ ಲೋಕಸೇವಾ ಆಯೋಗವು ನೋಟಿಫಿಕೇಶನ್ ನಂಬರ್ R(2) 1084/17-18/PSC ದಿನಾಂಕ 23-06-2017 ರ ಪ್ರಕಟಣೆಗೆ ಸಂಬಂಧಿಸಿದಂತೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವಾರ್ಡನ್ ಹುದ್ದೆಗಳಿಗೆ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿದೆ.
Vijaya Karnataka Web kreis wardens provisional selection list
kreis wardens selection list of 2017 recruitment


407+110HK ಕೆಆರ್‌ಇಐಎಸ್ ವಾರ್ಡನ್‌ ಹುದ್ದೆಗಳ ಪೈಕಿ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ, 404 ನಾನ್‌ ಹೈದೆರಾಬಾದ್ ಕರ್ನಾಟಕ ಹುದ್ದೆಗಳಿಗೆ, 109 ಹೈದೆರಾಬಾದ್‌ ಕರ್ನಾಟಕ ಹುದ್ದೆಗಳಿಗೆ ಹೆಸರನ್ನು ಪ್ರಕಟಿಸಲಾಗಿದೆ.

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವಾರ್ಡನ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ, ಎಲ್ಲಾ ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡು, ಮೂಲ ದಾಖಲೆಗಳ ಪರಿಶೀಲನೆಗೆ ಪಾಲ್ಗೊಂಡವರು ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ತಮ್ಮ ಹೆಸರು ಇರುವ ಬಗ್ಗೆ ಚೆಕ್‌ ಮಾಡಿಕೊಳ್ಳಬಹುದು. ತಾತ್ಕಾಲಿಕ ಆಯ್ಕೆ ಪಟ್ಟಿ ಚೆಕ್‌ ಮಾಡಲು ಅಭ್ಯರ್ಥಿಗಳು ಕೆಪಿಎಸ್‌ಸಿ ಅಧಿಕೃತ ವೆಬ್‌ಸೈಟ್‌ www.kpsc.kar.nic.in ಗೆ ಭೇಟಿ ನೀಡಿ. ಅಥವಾ ಈ ಕೆಳಗಿನ ಡೈರೆಕ್ಟ್‌ ಲಿಂಕ್‌ ಅನ್ನು ಕ್ಲಿಕ್ ಮಾಡಿ ರಿಸಲ್ಟ್‌ ನೋಡಬಹುದು.

KREIS ವಾರ್ಡನ್‌ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ

ಕೆಪಿಎಸ್‌ಸಿ ಪ್ರಸ್ತುತ ಪ್ರಕಟಿಸಲಾಗಿರುವ ತಾತ್ಕಾಲಿಕ ಆಯ್ಕೆ ಪಟ್ಟಿಗೆ, ಯಾವುದೇ ಆಕ್ಷೇಪಣೆ ಇದ್ದಲ್ಲಿ ಸಲ್ಲಿಸಬಹುದು. ಅಗತ್ಯ ದಾಖಲೆಗಳೊಂದಿಗೆ ಆಕ್ಷೇಪಣೆ ಅರ್ಜಿಯನ್ನು ವಿಳಾಸ 'ನಿರ್ದೇಶಕರು, ಕರ್ನಾಟಕ ಲೋಕಸೇವಾ ಆಯೋಗ, ಉದ್ಯೋಗ ಸೌಧ, ಬೆಂಗಳೂರು-560001' ಗೆ, ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟಗೊಂಡ 7 ದಿನಗಳ ಒಳಗಾಗಿ ಸಲ್ಲಿಸಲು ಸೂಚಿಸಲಾಗಿದೆ.

SAIL Jobs: ಸೈಲ್‌ನಲ್ಲಿ 399 ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗಳು

ಅಭ್ಯರ್ಥಿಗಳು ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ, ರಿಜಿಸ್ಟರ್ ನಂಬರ್, ಹೆಸರು, ಆಯ್ಕೆಯಾದ ಮೀಸಲಾತಿ ಮಾಹಿತಿ, ಅಂಕಗಳು ಮತ್ತು ಇತ್ಯಾದಿ ಮಾಹಿತಿಯನ್ನು ಚೆಕ್‌ ಮಾಡಿಕೊಳ್ಳಬಹುದು.

ವಿಶಾಖಪಟ್ಟಣಂ ನೌಕಾ ನೆಲೆಯಲ್ಲಿ ಅಪ್ರೆಂಟಿಸ್ ಉದ್ಯೋಗಾವಕಾಶ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌