ಆ್ಯಪ್ನಗರ

CSIR NET 2019 ಫಲಿತಾಂಶ ಪ್ರಕಟ.. ಇಲ್ಲಿ ಚೆಕ್‌ ಮಾಡಿ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಸಿಎಸ್‌ಐಆರ್ ಎನ್‌ಇಟಿ ಫಲಿತಾಂಶವನ್ನು ಬಿಡುಗಡೆ ಮಾಡಿದೆ. ರಿಸಲ್ಟ್‌ ಚೆಕ್‌ ಮಾಡಲು ಡೈರೆಕ್ಟ್‌ ಲಿಂಕ್‌ ಇಲ್ಲಿ ನೀಡಲಾಗಿದೆ.

Vijaya Karnataka Web 16 Jan 2020, 11:38 am
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ CSIR NET 2019 ಡಿಸೆಂಬರ್ ಪರೀಕ್ಷೆ ಫಲಿತಾಂಶವನ್ನು ಬುಧವಾರ ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಾಗಿದೆ.
Vijaya Karnataka Web CSIR NET 2019 result
csir net result 2019 december


ಸಿಎಸ್‌ಐಆರ್ ಎನ್‌ಇಟಿ ಡಿಸೆಂಬರ್ 2019 ಪರೀಕ್ಷೆ ಬರೆದ ಅಭ್ಯರ್ಥಿಗಳು ತಮ್ಮ ಸ್ಕೋರ್‌ ಮತ್ತು ಫಲಿತಾಂಶವನ್ನು ಎನ್‌ಟಿಎ ವೆಬ್‌ಸೈಟ್‌ಗೆ ಭೇಟಿ ನೀಡಿ, ಅಭ್ಯರ್ಥಿಗಳು ಲಾಗಿನ್‌ ಆಗುವ ಮೂಲಕ ಚೆಕ್‌ ಮಾಡಬಹುದು.

ಅಭ್ಯರ್ಥಿಗಳು ಲಾಗಿನ್‌ ಆಗಲು ತಮ್ಮ ರಿಜಿಸ್ಟರ್ ನಂಬರ್ ಮತ್ತು ಜನ್ಮ ದಿನಾಂಕ ಮಾಹಿತಿ ನೀಡಬೇಕು.

ಅಭ್ಯರ್ಥಿಗಳು ಫಲಿತಾಂಶ ಚೆಕ್‌ ಮಾಡಲು nta.ac.in ಗೆ ಭೇಟಿ ನೀಡಿ ಅಥವಾ ಈ ಕೆಳಗಿನ ಡೈರೆಕ್ಟ್‌ ಲಿಂಕ್‌ ಅನ್ನು ಕ್ಲಿಕ್ ಮಾಡಿ.

CSIR - UGC NET December Results -2019

ಈ ಪರೀಕ್ಷೆಗೆ ಸಂಬಂಧಿಸಿದಂತೆ ತಾತ್ಕಾಲಿಕ ಕೀ ಉತ್ತರಗಳನ್ನು ಎನ್‌ಟಿಎ ವೆಬ್‌ಸೈಟ್‌ನಲ್ಲಿ ಜನವರಿ 1, 2020 ರಂದು ಬಿಡುಗಡೆ ಮಾಡಿ, ಜನವರಿ 03, 2020 ವರೆಗೆ ಆಕ್ಷೇಪಣೆಗಳನ್ನು ಸ್ವೀಕರಿಸಲಾಗಿತ್ತು.

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಈ ಹಿಂದೆ ಬಿಡುಗಡೆ ಮಾಡಲಾದ ನೋಟಿಫಿಕೇಶನ್‌ ಪ್ರಕಾರ ಡಿಸೆಂಬರ್ 31 ರೊಳಗೆ ಫಲಿತಾಂಶ ಪ್ರಕಟಿಸಬೇಕಿತ್ತು. ಆದರೆ ಆಡಳಿತ ಕಾರಣಗಳಿಂದ ಫಲಿತಾಂಶವನ್ನು ಪ್ರಸ್ತುತ ತಡವಾಗಿ ಬಿಡುಗಡೆ ಮಾಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌