ಆ್ಯಪ್ನಗರ

NIOS 12ನೇ ತರಗತಿ ಫಲಿತಾಂಶ ಪ್ರಕಟ; ಚೆಕ್‌ ಮಾಡಲು ಲಿಂಕ್‌ ಇಲ್ಲಿದೆ..

NIOS Result 2020: ರಾಷ್ಟ್ರೀಯ ಮುಕ್ತ ಶಾಲೆಯು 12ನೇ ತರಗತಿ ರಿಸಲ್ಟ್‌ ಅನ್ನು ಇಂದು ಪ್ರಕಟಿಸಿದೆ. ಫಲಿತಾಂಶ ಚೆಕ್‌ ಮಾಡುವುದು ಹೇಗೆ ಎಂದು ಈ ಕೆಳಗಿನಂತೆ ತಿಳಿಯಿರಿ.

Vijaya Karnataka 5 Aug 2020, 4:53 pm
ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಆಫ್‌ ಓಪನ್ ಸ್ಕೂಲಿಂಗ್ (NIOS) ಬುಧವಾರ 12ನೇ ತರಗತಿ ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.
Vijaya Karnataka Web NIOS 12ನೇ ತರಗತಿ ಫಲಿತಾಂಶ ಪ್ರಕಟ; ಚೆಕ್‌ ಮಾಡಲು ಲಿಂಕ್‌ ಇಲ್ಲಿದೆ..


ಎನ್‌ಐಒಎಸ್‌ ಸೀನಿಯರ್ ಸೆಕೆಂಡರಿ ಪಬ್ಲಿಕ್ ಪರೀಕ್ಷೆ ಅಥವಾ 12ನೇ ತರಗತಿ ರಿಸಲ್ಟ್‌ ಅನ್ನು ವೆಬ್‌ಸೈಟ್‌ nios.ac.in ಗೆ ಭೇಟಿ ನೀಡಿ ಚೆಕ್‌ ಮಾಡಬಹುದು.

ರಾಷ್ಟ್ರೀಯ ಮುಕ್ತ ಶಾಲೆಯ 12ನೇ ತರಗತಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು, ಕ್ಯಾಂಡಿಡೇಟ್‌ ಲಾಗಿನ್ ಮೂಲಕ ಪರೀಕ್ಷೆ ಫಲಿತಾಂಶ ಚೆಕ್‌ ಮಾಡಬಹುದು.

ಕೋವಿಡ್ ಪರಿಣಾಮ ಮಾರ್ಚ್‌ ನಲ್ಲಿ ನಡೆಸಬೇಕಿದ್ದ ಸೆಕೆಂಡರಿ ಮತ್ತು ಸೀನಿಯರ್ ಸೆಕೆಂಡರಿ ಪರೀಕ್ಷೆಯನ್ನು ರದ್ದು ಮಾಡಲಾಗಿದ್ದು. ನಂತರ ಜುಲೈ 17 ರಿಂದ ಎನ್‌ಐಒಎಸ್ ಪರೀಕ್ಷೆ ಪ್ರಾರಂಭಿಸಿ ನಡೆಸಿದೆ.

ಎನ್‌ಐಒಎಸ್ 12ನೇ ತರಗತಿ ಪರೀಕ್ಷೆ ಫಲಿತಾಂಶ ಚೆಕ್‌ ಮಾಡುವುದು ಹೇಗೆ?

- ವಿದ್ಯಾರ್ಥಿಗಳು ಎನ್‌ಐಒಎಸ್‌ನ ಅಧಿಕೃತ ವೆಬ್‌ಸೈಟ್‌ https://www.nios.ac.in/ ಗೆ ಭೇಟಿ ನೀಡಿರಿ.

- ಓಪನ್ ಆದ ಹೋಮ್‌ ಪೇಜ್‌ನಲ್ಲಿ ಫಲಿತಾಂಶಕ್ಕೆ ಸಂಬಂಧಿಸಿದ ಲಿಂಕ್ ಮೇಲೆ ಕ್ಲಿಕ್ ಮಾಡಿರಿ.

- "Secondary and Senior Secondary" ಲಿಂಕ್‌ ಮೇಲೆ ಕ್ಲಿಕ್ ಮಾಡಿರಿ. ಹೊಸ ಪೇಜ್‌ ಓಪನ್‌ ಆಗುತ್ತದೆ.

- ನಂತರ ಅಗತ್ಯ ಮಾಹಿತಿಗಳಾದ ರಿಜಿಸ್ಟರ್ ನಂಬರ್ ಮತ್ತು ಕೇಳಲಾದ ಇತರೆ ಮಾಹಿತಿಗಳನ್ನು ನೀಡಿರಿ.

- 'Submit' ಬಟನ್‌ ಮೇಲೆ ಕ್ಲಿಕ್ ಮಾಡಿ.

- ಫಲಿತಾಂಶ ಪ್ರದರ್ಶನ ಆಗುತ್ತದೆ. ಡೌನ್‌ಲೋಡ್‌ ಮಾಡಿ, ಪ್ರಿಂಟ್‌ ತೆಗೆದುಕೊಳ್ಳಿ.

ರೈಲ್ವೆಯ NTPC ಹುದ್ದೆಗಳು ಯಾವುವು? ಪರೀಕ್ಷೆ ಹೇಗಿರುತ್ತದೆ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌