ಆ್ಯಪ್ನಗರ

SSC CGL 2017 ಅಂತಿಮ ಫಲಿತಾಂಶ ಯಾವಾಗ?

SSC CGL 2017 Final Result : ಎಸ್‌ಎಸ್‌ಸಿ 2017 ನೇ ನೇಮಕಾತಿಗೆ ಅರ್ಜಿ ಸಲ್ಲಿಸಿ, ಎಲ್ಲಾ ಹಂತಗಳ ಪರೀಕ್ಷೆಯಲ್ಲಿ ಪಾಲ್ಗೊಂಡಿರುವ ಅಭ್ಯರ್ಥಿಗಳು ಎಸ್‌ಎಸ್‌ಸಿ ಅಧಿಕೃತ ವೆಬ್‌ಸೈಟ್‌ನಲ್ಲಿ ಇಂದು ತಮ್ಮ ಅಂತಿಮ ಫಲಿತಾಂಶ ಚೆಕ್‌ ಮಾಡಬಹುದಾಗಿದೆ.

Vijaya Karnataka Web 15 Nov 2019, 11:13 am
ಸಿಬ್ಬಂದಿ ನೇಮಕಾತಿ ಆಯೋಗವು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಿಗೆ ಕಂಬೈನ್ಡ್‌ ಗ್ರಾಜುಯೇಟ್ ಲೆವೆಲ್‌ ಹುದ್ದೆಗಳ ನೇಮಕಾತಿಗೆ 2017 ರಲ್ಲಿ ಪರೀಕ್ಷೆ ನಡೆಸಿತ್ತು. ಎಸ್‌ಎಸ್‌ಸಿ ಸಿಜಿಎಲ್‌ 2017 ಟೈಯರ್-1, ಟೈಯರ್-2, ಟೈಯರ್-3 ಫಲಿತಾಂಶವನ್ನು 2019 ರ ಮೇ 9 ರಂದು ಬಿಡುಗಡೆ ಮಾಡಲಾಗಿತ್ತು. ಒಟ್ಟು 35,990 ಅಭ್ಯರ್ಥಿಗಳು ಸ್ಕಿಲ್ ಟೆಸ್ಟ್‌ ಮತ್ತು ದಾಖಲೆಗಳ ಪರಿಶೀಲನೆಗೆ ಆಯ್ಕೆ ಆಗಿದ್ದರು. ಪ್ರಸ್ತುತ ಎಸ್‌ಎಸ್‌ಸಿ ಸಿಜಿಎಲ್‌ 2017 ನೇಮಕಾತಿ ಅಧಿಸೂಚನೆಯ ಅಂತಿಮ ಫಲಿತಾಂಶ ಪ್ರಕಟಣೆ ಒಂದೇ ಬಾಕಿ ಇರುವುದು. ಈ ರಿಸಲ್ಟ್‌ ಇಂದು(ನವೆಂಬರ್ 15, 2019) ರಂದು ಪ್ರಕಟವಾಗುವ ಸಾಧ್ಯತೆ ಇದೆ.
Vijaya Karnataka Web SSC CGL 2017 Final Result
SSC CGL Result 2017


SSC CGL 2017 ನೇಮಕಾತಿಗೆ ಅರ್ಜಿ ಸಲ್ಲಿಸಿ, ಎಲ್ಲಾ ಹಂತಗಳ ಪರೀಕ್ಷೆಯಲ್ಲಿ ಪಾಲ್ಗೊಂಡಿರುವ ಅಭ್ಯರ್ಥಿಗಳು ಎಸ್‌ಎಸ್‌ಸಿ ಅಧಿಕೃತ ವೆಬ್‌ಸೈಟ್‌ನಲ್ಲಿ ಇಂದು ತಮ್ಮ ಫಲಿತಾಂಶ ಚೆಕ್‌ ಮಾಡಬಹುದಾಗಿದೆ. ಈ ಫಲಿತಾಂಶ ಬಂದ ನಂತರ ಅಭ್ಯರ್ಥಿಗಳಿಗೆ ಅಪಾಯಿಂಟ್‌ಮೆಂಟ್‌ ಲೆಟರ್ ಅನ್ನು ನೀಡಲಾಗುತ್ತದೆ.

SSC CGL 2017 Final Result - Check Here

SSC CGL 2017 ಅಂತಿಮ ಫಲಿತಾಂಶ ಚೆಕ್‌ ಮಾಡುವುದು ಹೇಗೆ?

- ಸಿಬ್ಬಂದಿ ನೇಮಕಾತಿ ಆಯೋಗದ ಅಧಿಕೃತ ವೆಬ್‌ಸೈಟ್‌ https://ssc.nic.in ಗೆ ಭೇಟಿ ನೀಡಿ.

- ಓಪನ್ ಆದ ಹೋಮ್‌ಪೇಜ್‌ನಲ್ಲಿ SSC CGL 2017 ನೇಮಕಾತಿಗೆ ಸಂಬಂಧಿಸಿದ ಲಿಂಕ್‌ ಮೇಲೆ ಕ್ಲಿಕ್ ಮಾಡಿ.

- ವಿವಿಧ ಪೋಸ್ಟ್‌ಗಳಿಗೆ ಪ್ರತ್ಯೇಕ ಫಲಿತಾಂಶ ಲಿಂಕ್‌ ನೀಡಿದ್ದರೆ, ಸಂಬಂಧಪಟ್ಟ ಲಿಂಕ್‌ ಮೇಲೆ ಕ್ಲಿಕ್ ಮಾಡಿ.

- ಓಪನ್‌ ಆದ ಪಿಡಿಎಫ್‌ ಲಿಂಕ್‌ನಲ್ಲಿ, ಅಭ್ಯರ್ಥಿಗಳು ತಮ್ಮ ರಿಜಿಸ್ಟರ್ ನಂಬರ್ ಚೆಕ್‌ ಮಾಡುವ ಮೂಲಕ ಫಲಿತಾಂಶ ತಿಳಿಯಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌