ಆ್ಯಪ್ನಗರ

SSC MTS ಫಲಿತಾಂಶ ಪ್ರಕಟ.. ಚೆಕ್‌ ಮಾಡಲು ಲಿಂಕ್‌ ಇಲ್ಲಿದೆ

SSC MTS Result 2019 : ಸ್ಟಾಫ್‌ ಸೆಲೆಕ್ಷನ್ ಕಮಿಷನ್ ಮಲ್ಟಿಟಾಸ್ಕಿಂಗ್ ಹುದ್ದೆಗಳ ಆಯ್ಕೆಗಾಗಿ ನಡೆಸಿರುವ ಮೊದಲ ಹಂತದ ಪರೀಕ್ಷೆ ಫಲಿತಾಂಶವನ್ನು ಇಂದು ಪ್ರಕಟಿಸಿದೆ. ಪರೀಕ್ಷೆ ಬರೆದ ಅಭ್ಯರ್ಥಿಗಳು ಫಲಿತಾಂಶ ಇಲ್ಲಿ ಚೆಕ್‌ ಮಾಡಿ.

Vijaya Karnataka Web 5 Nov 2019, 8:49 pm
ಸಿಬ್ಬಂದಿ ನೇಮಕಾತಿ ಆಯೋಗವು ಎಸ್‌ಎಸ್‌ಸಿ ಮಲ್ಟಿ-ಟಾಸ್ಕಿಂಗ್ ಸ್ಟಾಫ್ ಟೈಯರ್ 1 ಪರೀಕ್ಷೆ ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. SSC MTS ಟೈಯರ್ 1 ಪರೀಕ್ಷೆ ಬರೆದವರು ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ನ ವೆಬ್‌ಸೈಟ್‌ ssc.nic.in ಗೆ ಭೇಟಿ ನೀಡಿ ರಿಸಲ್ಟ್‌ ಚೆಕ್‌ ಮಾಡಬಹುದು. ಫಲಿತಾಂಶದ ಜೊತೆಗೆ ಎಸ್‌ಎಸ್‌ಸಿ ಕೀ ಉತ್ತರಗಳನ್ನು ಪ್ರಕಟಿಸಿದೆ.
Vijaya Karnataka Web SSC MTS Result 2019
ssc mts result 2019 tier 1


ಸ್ಟಾಫ್‌ ಸೆಲೆಕ್ಷನ್ ಕಮಿಷನ್ ಎಸ್‌ಎಸ್‌ಸಿ ಎಂಟಿಎಸ್ ಟೈಯರ್ 1 ಪರೀಕ್ಷೆಯನ್ನು ಆಗಸ್ಟ್‌ 2 ರಿಂದ ಆಗಸ್ಟ್‌ 22, 2019 ವರೆಗೆ ವಿವಿಧ ಕೇಂದ್ರಗಳಲ್ಲಿ ನಡೆಸಿತ್ತು. ಎಸ್‌ಎಸ್‌ಸಿ ಎಂಟಿಎಸ್ ಹುದ್ದೆಗಳಿಗೆ ನಡೆಸಿದ ಮೊದಲ ಹಂತದ ಪರೀಕ್ಷೆಯು ಕಂಪ್ಯೂಟರ್ ಆಧಾರಿತ ಪರೀಕ್ಷೆ(CBT) ಆಗಿದೆ. ಈ ಪರೀಕ್ಷೆಯಲ್ಲಿ ಪಾಸ್‌ ಆದವರು, ಮುಂದಿನ ಹಂತದ ಪರೀಕ್ಷೆಗೆ ಕೂರಲು ಅರ್ಹತೆ ಪಡೆಯುತ್ತಾರೆ.

SSC MTS ಫಲಿತಾಂಶ ಚೆಕ್‌ ಮಾಡಲು ಕ್ಲಿಕ್ ಮಾಡಿ

SSC MTS ಟೈಯರ್ 1 ಪ್ರಶ್ನೆ ಪತ್ರಿಕೆಯ ಕೀ ಉತ್ತರಗಳನ್ನು ಚೆಕ್‌ ಮಾಡಲು ಕ್ಲಿಕ್ ಮಾಡಿ

SSC MTS ರಿಸಲ್ಟ್‌ ಚೆಕ್‌ ಮಾಡುವುದು ಹೇಗೆ?

- ಸಿಬ್ಬಂದಿ ನೇಮಕಾತಿ ಆಯೋಗದ ಅಧಿಕೃತ ವೆಬ್‌ಸೈಟ್ ssc.nic.in ಗೆ ಭೇಟಿ ನೀಡಿ.

- ಎಸ್‌ಎಸ್‌ಸಿ ಎಂಟಿಎಸ್‌ ಟೈಯರ್ 1 ಫಲಿತಾಂಶಕ್ಕೆ ಸಂಬಂಧಪಟ್ಟ ಲಿಂಕ್ ಮೇಲೆ ಕ್ಲಿಕ್ ಮಾಡಿ.

- ನಂತರ ರಿಸಲ್ಟ್‌ ಪಿಡಿಎಫ್‌ ಪೇಜ್‌ ಒಪನ್ ಆಗುತ್ತದೆ.

- ರಿಸಲ್ಟ್‌ ಸೀಟ್‌ ಅನ್ನು ಮುಂದಿನ ರೆಫರೆನ್ಸ್‌ಗಾಗಿ ಪ್ರಿಂಟ್‌ ತೆಗೆದುಕೊಳ್ಳಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌