ಆ್ಯಪ್ನಗರ

ಬಿ.ಕಾಂ ಡಿಗ್ರಿ ನಂತರ ಕರಿಯರ್‌ ಆಯ್ಕೆಗಳೇನು?

ಬಿ.ಕಾಂ ಗ್ರಾಜುಯೇಟ್‌ಗಳು ಯಾವೆಲ್ಲಾ ಉನ್ನತ ಶಿಕ್ಷಣಕ್ಕೆ ಸೇರಬಹುದು ಮತ್ತು ಅವರಿಗೆ ಕರಿಯರ್‌ ಆಯ್ಕೆಗಳು ಏನೆಲ್ಲಾ ಇವೆ ಎಂಬುದನ್ನು ಈ ಕೆಳಗಿನಂತೆ ತಿಳಿಯಿರಿ.

Vijaya Karnataka Web 17 Apr 2020, 8:27 am
ಬ್ಯಾಚುಲರ್ ಆಫ್‌ ಕಾಮರ್ಸ್‌, ಪದವಿ ಕೋರ್ಸ್‌ಗಳ ಪೈಕಿ ಹೆಚ್ಚು ಆಕರ್ಷಕ ಹಾಗೂ ಹೆಚ್ಚು ವಿದ್ಯಾರ್ಥಿಗಳು ಈ ಕೋರ್ಸ್‌ಗೆ ಪ್ರವೇಶ ಪಡೆಯಲು ಬಯಸುತ್ತಾರೆ. ಹಾಗೆ ಈ ಕೋರ್ಸ್‌ ಅನ್ನು ಉತ್ತಮ ಅಂಕಗಳೊಂದಿಗೆ ಮತ್ತು ಸ್ಕಿಲ್‌ನೊಂದಿಗೆ ಪಾಸ್‌ ಮಾಡಿದವರಿಗೆ ಉತ್ತಮ ಉದ್ಯೋಗಾವಕಾಶಗಳು ಬ್ಯುಸಿನೆಸ್‌, ಅಕೌಂಟಿಂಗ್ ಫೀಲ್ಡ್‌ನಲ್ಲಿ ಇವೆ. ಬಿ.ಕಾಂ ಗ್ರಾಜುಯೇಟ್‌ಗಳು ಯಾವೆಲ್ಲಾ ಉನ್ನತ ಶಿಕ್ಷಣಕ್ಕೆ ಸೇರಬಹುದು ಮತ್ತು ಅವರಿಗೆ ಕರಿಯರ್‌ ಆಯ್ಕೆಗಳು ಏನೆಲ್ಲಾ ಇವೆ ಎಂಬುದನ್ನು ಈ ಕೆಳಗಿನಂತೆ ತಿಳಿಯಿರಿ.
Vijaya Karnataka Web career options after b com degree in kannada check here
ಬಿ.ಕಾಂ ಡಿಗ್ರಿ ನಂತರ ಕರಿಯರ್‌ ಆಯ್ಕೆಗಳೇನು?



ಮಾಸ್ಟರ್ ಆಫ್‌ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್(ಎಂಬಿಎ)

ಎಂಬಿಎ ಕೋರ್ಸ್‌, ಬಿ.ಕಾಂ ನಂತರ ಆಯ್ಕೆ ಮಾಡಿಕೊಳ್ಳಬಹುದಾದ ಮೋಸ್ಟ್‌ ಪಾಪ್ಯುಲರ್ ಮ್ಯಾನೇಜ್ಮೆಂಟ್ ಕೋರ್ಸ್‌. ಇದನ್ನು ಅಧ್ಯಯನ ಮಾಡುವುದರಿಂದ ವಿದ್ಯಾರ್ಥಿಗಳು ಮ್ಯಾನೇಜ್ಮೆಂಟ್ ಮತ್ತು ಬ್ಯುಸಿನೆಸ್ ಸ್ಕಿಲ್‌ಗಳನ್ನು ಕಲಿಯಬಹುದು. ಎಂಬಿಎ ನಲ್ಲಿ.. ಫೈನಾನ್ಸ್‌, ಹೆಚ್‌ಆರ್‌, ಮಾರ್ಕೆಟಿಂಗ್, ಇಂಟರ್‌ನ್ಯಾಷನಲ್ ಬ್ಯುಸಿನೆಸ್, ಇನ್ಫಾರ್ಮೇಷನ್ ಟೆಕ್ನಾಲಜಿ ಮತ್ತು ಇತರೆ ಸ್ಪೆಷಿಯಲೈಜೇಷನ್‌ಗಳನ್ನು ಆಫರ್‌ ಮಾಡುತ್ತದೆ.

ಚಾರ್ಟರ್ಡ್‌ ಅಕೌಂಟ್ (ಸಿಎ)

ಬಿ.ಕಾಂ ಪದವೀಧರರ ಪೈಕಿ ಹೆಚ್ಚು ಅಭ್ಯರ್ಥಿಗಳು ಅಧ್ಯಯನ ಮಾಡಲು ಬಯಸುವ ಕೋರ್ಸ್‌ ಚಾರ್ಟರ್ಡ್‌ ಅಕೌಂಟ್. ಇದು CPT, IPCC, CA Finals ಎಂದು ಮೂರು ಹಂತಗಳನ್ನು ಒಳಗೊಂಡಿರುತ್ತದೆ. 2.5 ವರ್ಷದ ಇಂಟರ್ನ್‌ಶಿಪ್‌ನೊಂದಿಗೆ ಯಾವ ಅಭ್ಯರ್ಥಿ ಮೂರು ಹಂತದ ಪರೀಕ್ಷೆಗಳನ್ನು ಪಾಸ್‌ ಮಾಡುತ್ತಾರೋ ಅವರು ಚಾರ್ಟರ್ಡ್‌ ಅಕೌಂಟಂಟ್ ಆಗಿ ಪ್ರಮಾಣ ಪತ್ರ ಪಡೆಯುತ್ತಾರೆ.

ಮಾಸ್ಟರ್ ಆಫ್ ಕಾಮರ್ಸ್‌ (ಎಂ.ಕಾಂ)

ಭಾರತದಲ್ಲಿ ಎಂ.ಕಾಂ ಮೋಸ್ಟ್‌ ಪಾಪ್ಯುಲರ್ ಪೋಸ್ಟ್‌ ಗ್ರಾಜುಯೇಟ್‌ ಕೋರ್ಸ್‌. ಕಾಮರ್ಸ್‌ ಓದಿ ಕರಿಯರ್‌ ರೂಪಿಸಿಕೊಳ್ಳಬೇಕು ಎಂಬ ಕನಸು ಇರುವವರು ಎಂ.ಕಾಂ ಮಾಸ್ಟರ್‌ ಆಯ್ಕೆ ಮಾಡಿಕೊಳ್ಳಬಹುದು. ಎಂ.ಕಾಂ ನಲ್ಲಿ ಕಾಮರ್ಸ್‌, ಅಕೌಂಟಿಂಗ್, ಮ್ಯಾನೇಜ್ಮೆಂಟ್ ಮತ್ತು ಆರ್ಥಶಾಸ್ತ್ರದಂತಹ ಕೋರ್ಸ್‌ಗಳ ಮೇಲೆ ಫೋಕಸ್ ಮಾಡಲಾಗುತ್ತದೆ.

ಕಂಪನಿ ಸೆಕ್ರೆಟರಿ (ಸಿಎಸ್‌)

ಸಿಎಸ್‌ ಅಥವಾ ಕಂಪನಿ ಸೆಕ್ರೆಟರಿ ಕೋರ್ಸ್‌ - ಫೌಂಡೇಶನ್, ಇಂಟರ್‌ಮೀಡಿಯೇಟ್ ಮತ್ತು ಫೈನಲ್ಸ್‌ ಎಂದು ಮೂರು ಹಂತಗಳನ್ನು ಒಳಗೊಂಡಿರುತ್ತದೆ. ಕಾರ್ಪೋರೇಟ್‌ ಫೀಲ್ಡ್‌ನ ಕಾನೂನು ಅಧ್ಯಯನ ಇಲ್ಲಿ ಸಾಧ್ಯ. ಕಂಪನಿಯ ಪ್ರಮುಖ ನಿರ್ಧಾರಗಳು ಮತ್ತು ನಿರ್ವಹಣೆ ವಿಷಯದಲ್ಲಿ ಕಾನೂನಾತ್ಮಕ ಅಂಶಗಳನ್ನು ಉದ್ಯೋಗಿ ನಿರ್ವಹಿಸಬೇಕಾಗುತ್ತದೆ.

ಫೈನಾನ್ಷಿಯಲ್ ರಿಸ್ಕ್‌ ಮ್ಯಾನೇಜರ್ (ಎಫ್‌ಆರ್‌ಎಂ)

ಫೈನಾನ್ಷಿಯಲ್ ರಿಸ್ಕ್‌ ಮ್ಯಾನೇಜರ್ ಕೋರ್ಸ್‌ ಹೆಚ್ಚು ಲಾಭದಾಯಕ ಕರಿಯರ್‌ಗಳನ್ನು ಮನೆ ಬಾಗಿಲಿಗೆ ತರುತ್ತವೆ. ಈ ಕೋರ್ಸ್‌ ಅವಧಿ 9 ತಿಂಗಳು. ಫೈನಾನ್ಷಿಯಲ್ ರಿಸ್ಕ್‌ ಮ್ಯಾನೇಜರ್ ಆದವರು ಸ್ವತ್ತುಗಳು, ಸಂಪಾದನೆ ಮತ್ತು ಬ್ಯುಸಿನೆಸ್‌ ಚಟುವಟಿಕೆಗಳ ಮೇಲೆ ಕಣ್ಣಾಯಿಸುವ ಮತ್ತು ಯಾವುದೇ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳುವ ಕೆಲಸ ಇವರದ್ದಾಗಿರುತ್ತದೆ.

ಡಿಜಿಟಲ್ ಮಾರ್ಕೆಟಿಂಗ್ ಕರಿಯರ್ ಆರಂಭಿಸುವುದು ಹೇಗೆ?

ACCA

ಅಸೋಸಿಯೇಶನ್ ಆಫ್ ಚಾರ್ಟರ್ಡ್‌ ಸರ್ಟಿಫೈಡ್ ಅಕೌಂಟಂಟ್ಸ್‌(ಎಸಿಸಿಎ) ಒಂದು ಪಾಪ್ಯುಲರ್ ಕೋರ್ಸ್‌ ಆಗಿದ್ದು, ಪ್ರಪಂಚದಾದ್ಯಂತ ಸಾವಿರಾರು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. 14 ಪೇಪರ್‌ಗಳನ್ನು ಹೊಂದಿದ್ದು, ಪಾಸ್‌ ಮಾಡಿದರೆ ಎಸಿಸಿಎ ಪ್ರಮಾಣಪತ್ರ ಪಡೆಯಬಹುದು. ಕನಿಷ್ಠ ಎರಡು ವರ್ಷದೊಳಗೆ ಈ ಕೋರ್ಸ್‌ ಮುಗಿಸಬಹುದು. ಆದರೆ ಬಹುಸಂಖ್ಯಾತ ವಿದ್ಯಾರ್ಥಿಗಳು ಮೂರು ವರ್ಷ ತೆಗೆದುಕೊಳ್ಳುತ್ತಾರೆ.

ಬಯೋಟೆಕ್ನಾಲಜಿ ಓದಿದವರಿಗೆ ಕರಿಯರ್‌ ಟಿಪ್ಸ್‌; ಉದ್ಯೋಗ, ವ್ಯಾಪ್ತಿ ಬಗ್ಗೆ ಇಲ್ಲಿದೆ ಮಾಹಿತಿ

ಇತರೆ ಕೋರ್ಸ್‌ಗಳು

ಬಿ.ಕಾಂ ಪದವೀಧರರು ಈ ಮೇಲಿನ ಎಲ್ಲಾ ಕೋರ್ಸ್‌ಗಳನ್ನು ಪಡೆಯಬಹುದು. ಅವುಗಳನ್ನು ಹೊರತುಪಡಿಸಿ ಡಿಜಿಟಲ್ ಮಾರ್ಕೆಟಿಂಗ್, ಬ್ಯಾಚುಲರ್ ಆಫ್ ಎಜುಕೇಷನ್, ಸರ್ಟಿಫಿಕೇಟ್ ಇನ್‌ ಇನ್ವೆಸ್ಟ್‌ಮೆಂಟ್‌ ಬ್ಯಾಂಕಿಂಗ್ (ಸಿಐಬಿ) ಮತ್ತು ಇತರೆ ಹಲವು ಕೋರ್ಸ್‌ಗಳು ಭಾರತ ಮತ್ತು ಅಬ್ರಾಡ್‌ ನಲ್ಲಿ ಲಭ್ಯ.

ಉತ್ತಮ ಸ್ಟಡಿ ಟೈಮ್‌ಟೇಬಲ್‌ ರಚನೆಗೆ ಈ ಟಿಪ್ಸ್‌ ಫಾಲೋ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌