ಆ್ಯಪ್ನಗರ

ದಿಲ್ಲಿ ಕೇವಲ ಟ್ರೇಲರ್‌, ಬಿಜೆಪಿಗೆ ಮುಂದಿದೆ ಭಾರಿ ಸವಾಲು

​​ಆದರೆ 2021ರ ಏಪ್ರಿಲ್‌ - ಮೇ ತಿಂಗಳಿನಲ್ಲಿಅಸ್ಸಾಂ, ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ಮತ್ತು ಪಾಂಡಿಚೇರಿ ವಿಧಾನಸಭೆಗಳಿಗೆ ಚುನಾವಣೆ ನಡೆಯಲಿದೆ. ಅಸ್ಸಾಂಗಿಂತಲೂ ಉಳಿದ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಸಾಮರ್ಥ್ಯಕ್ಕೆ ಸವಾಲು ಎದುರಾಗುವುದು ಖಚಿತ.

Vijaya Karnataka 11 Feb 2020, 8:34 pm

ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ 'ಕಮಲ'ವನ್ನು 'ಪೊರಕೆ' ಗುಡಿಸಿ ಹಾಕಿದೆ. ಆದರೆ ಇದಕ್ಕಿಂತ ದೊಡ್ಡ ದೊಡ್ಡ ಸವಾಲುಗಳು ಬಿಜೆಪಿಯನ್ನು ಕಾಯುತ್ತಿವೆ. ಕಮಲ ಪಕ್ಷಕ್ಕೆ ನಿಜವಾದ ಸವಾಲು ಇರುವುದು 2021ರಲ್ಲಿ ಇದೆ.
Vijaya Karnataka Web BJP


ಈ ವರ್ಷಾಂತ್ಯದಲ್ಲಿ ಬಿಹಾರ ವಿಧಾನಸಭೆ ಚುನಾವಣೆ ನಡೆಯಲಿದೆ. ಅಲ್ಲಿ ಜೆಡಿಯು ಜತೆ ಮೈತ್ರಿ ಮುಂದುವರಿಸುವುದರ ಜತೆಗೆ ನಿತೀಶ್‌ಕುಮಾರ್‌ ಅವರ ನೇತೃತ್ವದಲ್ಲೇ ಚುನಾವಣೆ ನಡೆಯಲಿದೆ ಎಂದು ಬಿಜೆಪಿ ಘೋಷಿಸಿದೆ. ಇತ್ತೀಚಿನ ಫಲಿತಾಂಶಗಳನ್ನು ನೋಡಿದಾಗ ಸ್ಥಳೀಯ ನಾಯಕತ್ವವನ್ನು ಜನ ಬೆಂಬಲಿಸಿದ್ದಾರೆ. ಹೀಗಾಗಿ ಬಿಹಾರದಲ್ಲಿ ನಿತೀಶ್‌ ಅವರೇ ಮುಂದಿನ ಸಿಎಂ ಎಂದು ಘೋಷಿಸಿರುವುದರಿಂದ ಅಷ್ಟು ಸಮಸ್ಯೆಯಾಗದು.

ಆದರೆ 2021ರ ಏಪ್ರಿಲ್‌ - ಮೇ ತಿಂಗಳಿನಲ್ಲಿ ಅಸ್ಸಾಂ, ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ಮತ್ತು ಪಾಂಡಿಚೇರಿ ವಿಧಾನಸಭೆಗಳಿಗೆ ಚುನಾವಣೆ ನಡೆಯಲಿದೆ. ಅಸ್ಸಾಂಗಿಂತಲೂ ಉಳಿದ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಸಾಮರ್ಥ್ಯಕ್ಕೆ ಸವಾಲು ಎದುರಾಗುವುದು ಖಚಿತ.

ಎಎಪಿಗೆ ಗೆಲುವಿಗೆ ಮೋದಿ ಅಭಿನಂದನೆ, 'ಧನ್ಯವಾದಗಳು ಸರ್‌' ಎಂದ ಕೇಜ್ರಿವಾಲ್‌

ತ್ರಿಕೋನ ಸ್ಪರ್ಧೆಗಿಂತ ನೇರ ಸ್ಪರ್ಧೆಯಲ್ಲಿ ಬಿಜೆಪಿಯನ್ನು ಸೋಲಿಸುವುದು ಸುಲಭ ಎನ್ನುವುದು ಕಾಂಗ್ರೆಸ್‌ ಸೇರಿದಂತೆ ಬಿಜೆಪಿಯನ್ನು ವಿರೋಧಿಸುವ ಬಹುತೇಕ ಪಕ್ಷಗಳಿಗೆ ಮನದಟ್ಟಾಗಿದೆ. ಹೀಗಾಗಿ ಈ ರಾಜ್ಯಗಳಲ್ಲಿ ಪ್ರತಿಪಕ್ಷಗಳು ಅದೇ ತಂತ್ರವನ್ನು ಹೆಣೆಯಬಹುದು. ಆಗ ಬಿಜೆಪಿ ಏನು ಮಾಡುತ್ತದೆ ಎಂಬುದು ಕುತೂಹಲ ಮೂಡಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ