ಆ್ಯಪ್ನಗರ

ದಿಲ್ಲಿ ಚುನಾವಣೆ: ಕೇಜ್ರಿವಾಲ್‌ ನಾಮಪತ್ರ ಸಲ್ಲಿಕೆಯೇ ಮಿಸ್‌! , ಅಡ್ಡಿಯಾಗಿದ್ದು ರೋಡ್‌ ಶೋ

ಆಪ್‌ ಅಭ್ಯರ್ಥಿ ಅರವಿಂದ್‌ ಕೇಜ್ರಿವಾಲ್‌ ಅವರು ರೋಡ್‌ ಶೋ ಗದ್ದಲದ ಮಧ್ಯೆ ಸಿಕ್ಕಿ ಬಿದ್ದು ಸಮಯಕ್ಕೆ ಸರಿ­ಯಾಗಿ ನಾಡಕಚೇರಿ ತಲು­ಪಲು ಸಾಧ್ಯವಾಗದೇ ನಾಮ­ಪತ್ರ ಸಲ್ಲಿಕೆ ಕಾರ್ಯವನ್ನು ಮುಂದೂಡಿದ ಘಟನೆ ನಡೆದಿದೆ. ಇಂದು ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದೆ.

Vijaya Karnataka Web 21 Jan 2020, 9:54 am
ಹೊಸದಿಲ್ಲಿ: ದಿಲ್ಲಿ ಮುಖ್ಯಮಂತ್ರಿ ಹಾಗೂ ಆಪ್‌ ಅಭ್ಯರ್ಥಿ ಅರವಿಂದ್‌ ಕೇಜ್ರಿವಾಲ್‌ ಅವರು ರೋಡ್‌ ಶೋ ಗದ್ದಲದ ಮಧ್ಯೆ ಸಿಕ್ಕಿಬಿದ್ದು ಸೋಮವಾರ ನಿಗದಿಯಾಗಿದ್ದ ನಾಮಪತ್ರ ಸಲ್ಲಿಕೆ ಕಾರ್ಯವನ್ನೇ ದಿನದ ಮಟ್ಟಿಗೆ ಮುಂದೂಡಿದ ಘಟನೆ ನಡೆದಿದೆ.
Vijaya Karnataka Web Arvind Kejriwal


ಹೊಸದಿಲ್ಲಿ ಕ್ಷೇತ್ರದ ಆಪ್‌ ಅಭ್ಯರ್ಥಿಯಾಗಿ ಅವರು ಸೋಮವಾರ ನಾಮಪತ್ರ ಸಲ್ಲಿಸಬೇಕಿತ್ತು. ಅದರಂತೆ ನಾಮಪತ್ರ ಸಲ್ಲಿಸಲು ಆರ್‌ಕೆ ಆಶ್ರಮ ಮಾರ್ಗ್‌ ಮೆಟ್ರೊ ನಿಲ್ದಾಣ ಸಮೀಪದ ವಾಲ್ಮೀಕಿ ಮಂದಿರದಿಂದ ಕನಾಟ್‌ ಪ್ಲೇಸ್‌ ಸಮೀಪದ ಹನುಮಾನ್‌ ಮಂದಿರ­ವರೆಗೆ ಮೆರವಣಿಗೆ ಹೊರಟರು.

ಬೆಂಬಲಿಗರ ಡೋಲು-ನಗಾರಿ ವಾದ್ಯ, ಹಾಡು ಕೇಕೆಗಳ ನಡುವೆ 'ಅಚ್ಚೇ ಬೀಟೆ ಪಾಂಚ್‌ ಸಾಲ್‌, ಲಗೇ ರಹೊ ಕೇಜ್ರಿ­ವಾಲ್‌' ಹಾಡಿಗೆ ನರ್ತಿಸುತ್ತ ಸಾಗಿದರು. 2.2 ಕಿ.ಮೀ ಸಾಗಿ ಜಾಮ್‌ನಗರ ಹೌಸ್‌ ತಲುಪಿ ನಾಮಪತ್ರ ಸಲ್ಲಿಸಬೇಕಿತ್ತು. ಅಭಿಮಾನಿಗಳ ಅಬ್ಬರದ ನಡುವೆ ಸಮಯಕ್ಕೆ ಸರಿ­ಯಾಗಿ ನಾಡಕಚೇರಿ ತಲು­ಪಲು ಸಾಧ್ಯವಾಗದೇ ಕೈಚೆಲ್ಲಿ­ದರು. ಇವರು ಕಚೇರಿ ತಲುಪುವ ವೇಳೆಗೆ ಕೆಲಸದ ಅವಧಿ ಮುಗಿದು ಬಾಗಿಲು ಹಾಕಿತ್ತು.

ದಿಲ್ಲಿ ಚುನಾವಣೆಗೆ ಆಪ್‌ ಸಜ್ಜು; ಅಭ್ಯರ್ಥಿಗಳ ಪಟ್ಟಿ ಬಿಡುಗಡೆ, 15 ಹಾಲಿ ಶಾಸಕರಿಗೆ ಕೊಕ್‌

''ರೋಡ್‌ ಶೋ ಕಾರಣ ಈ ದಿನ ನಾಮಪತ್ರ ಸಲ್ಲಿಕೆ ಸಾಧ್ಯವಾಗಿಲ್ಲ. ಇದರಿಂದ ನಿರಾಶೆಯೂ ಆಗಿಲ್ಲ. ಮಂಗಳವಾರ ಉಮೇದುವಾರಿಕೆ ಸಲ್ಲಿ­ಸುವೆ,'' ಎಂದು ಕೇಜ್ರಿವಾಲ್‌ ನಂತರ ಸುದ್ದಿಗಾರರಿಗೆ ತಿಳಿಸಿದರು. ಫೆಬ್ರವರಿ 8ರಂದು ನಡೆಯುವ ದಿಲ್ಲಿ ವಿಧಾನಸಭೆ ಚುನಾವಣೆಗೆ ಮಂಗಳವಾರವೇ ನಾಮಪತ್ರ ಸಲ್ಲಿಕೆಗೆ ಕೊನೆ ದಿನ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌