ಆ್ಯಪ್ನಗರ

Janardhan Reddy: ಜನಾರ್ದನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಚುನಾವಣಾ ಚಿಹ್ನೆ ಪುಟ್ಬಾಲ್: ಪ್ರಣಾಳಿಕೆಯಲ್ಲಿ ಹತ್ತಾರು ಭರವಸೆ

ಜನಾರ್ಧನ್ ರೆಡ್ಡಿ ಸ್ಥಾಪಿಸಿರುವ ಹೊಸ ಪಕ್ಷಕ್ಕೆ ಚುನಾವಣಾ ಆಯೋಗ ಫುಟ್ಬಾಲ್ ಅನ್ನು ಚುನಾವಣಾ ಚಿಹ್ನೆಯಾಗಿ ನೀಡಿದೆ. ಕಲಯಾಣ ಕರ್ನಾಟಕದ ಅಭಿವೃದ್ಧಿ ಹೆಸರಲ್ಲಿ ಪಕ್ಷ ಸ್ಥಾಪಿಸಿ ಪ್ರಚಾರ ನಡೆಸಲಾಗುತ್ತಿದೆ. ಪ್ರಣಾಳಿಕೆಯನ್ನೂ ಬಿಡುಗಡೆ ಮಾಡಲಾಗಿದೆ.

Authored byಇರ್ಷಾದ್ ಉಪ್ಪಿನಂಗಡಿ | Vijaya Karnataka Web 27 Mar 2023, 1:26 pm

ಹೈಲೈಟ್ಸ್‌:

  • ಮಾಜಿ ಸಚಿವ ಜನಾರ್ದನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಪುಟ್ಬಾಲ್ ನ್ನು ಚುನಾವಣಾ ಚಿಹ್ನೆಯಾಗಿ ಚುನಾವಣಾ ಆಯೋಗ ನೀಡಿದೆ.
  • ಡಿಸೆಂಬರ್ 25 ರಂದು ನಾನು ನಮ್ಮ ಪಕ್ಷ ಘೋಷಣೆ ಮಾಡಿದೆ. ಈಗಾಗಲೇ ನಾನು ಪಕ್ಷದ ಕನಸುಗಳನ್ನು ಜನರ ಮುಂದೆ ಇಡುತ್ತಿದ್ದೇನೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಜನರಿಗೆ ಒಳ್ಳೆಯದು ಆಗಬೇಕು. ನನ್ನ ಚಿಂತನೆಗೆ ಜನರು ಸಹ ನನಗೆ ಸ್ಪಂದಿಸಿದ್ದಾರೆ ಎಂದರು‌.
  • ಪ್ರತಿಮನೆಗೆ 250 ಯೂನಿಟ್ ವಿದ್ಯುತ್ ಉಚಿತ, ಪ.ಜಾ/ಪ.ಪಂ ಜನರಿಗೆ ಉಚಿತ ನಿವೇಶನ, ಸಫಾಯಿ ಕರ್ಮಚಾರಿಗಳಿಗೆ/ಪೌರ ಕಾರ್ಮಿಕರಿಗೆ ಮನೆ ನಿರ್ಮಾಣ, ಕೆ.ಆರ್.ಐ.ಈ.ಎಸ್. ಶಾಲೆಗಳಲ್ಲಿ ಆಟದ ಸೌಲಭ್ಯ ಪ್ರಮುಖ ಪ್ರಣಾಳಿಕೆಗಳು
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Janardhan reddy
ಬೀದರ್‌ನಲ್ಲಿ ಜನಾರ್ದನ ರೆಡ್ಡಿ
ಬೆಂಗಳೂರು: ಮಾಜಿ ಸಚಿವ ಜನಾರ್ದನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಪುಟ್ಬಾಲ್ ನ್ನು ಚುನಾವಣಾ ಚಿಹ್ನೆಯಾಗಿ ಚುನಾವಣಾ ಆಯೋಗ ನೀಡಿದೆ. ಬೆಂಗಳೂರಿನಲ್ಲಿ ಸೋಮವಾರ ಪತ್ರಿಕಾಗೋಷ್ಠಿಯನ್ನು ನಡೆಸಿದ ಜನಾರ್ದನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.
ಡಿಸೆಂಬರ್ 25 ರಂದು ನಾನು ನಮ್ಮ ಪಕ್ಷ ಘೋಷಣೆ ಮಾಡಿದೆ. ಈಗಾಗಲೇ ನಾನು ಪಕ್ಷದ ಕನಸುಗಳನ್ನು ಜನರ ಮುಂದೆ ಇಡುತ್ತಿದ್ದೇನೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಜನರಿಗೆ ಒಳ್ಳೆಯದು ಆಗಬೇಕು. ನನ್ನ ಚಿಂತನೆಗೆ ಜನರು ಸಹ ನನಗೆ ಸ್ಪಂದಿಸಿದ್ದಾರೆ ಎಂದರು‌.


2008ರಲ್ಲಿ ಜನಾರ್ಧನ ರೆಡ್ಡಿ ನನಗೆ ಟಿಕೆಟ್ ತಪ್ಪಿಸಿದ್ದರು: ಅನಿಲ್ ಲಾಡ್ ಆರೋಪ

ಬಳಿಕ, ಪಕ್ಷದಿಂದ ಸ್ಪರ್ಧೆ ಮಾಡಲು 12 ಅಭ್ಯರ್ಥಿಗಳ ಘೋಷಣೆ ಮಾಡಿದ್ದೇನೆ. 50 ಕ್ಷೇತ್ರಗಳಲ್ಲಿ ಪಕ್ಷದ ಚಟುವಟಿಕೆಗಳು ನಡೆಯುತ್ತಿವೆ.
30 ಕ್ಷೇತ್ರಗಳಲ್ಲಿ ನಮ್ಮ ಪಕ್ಷ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹಿಂದೆ ರಾಜಕೀಯ ಮಾಡುವಾಗ ಏನೆಲ್ಲಾ ಸಮಸ್ಯೆ ಇತ್ತು ಅಂತ ಗೊತ್ತಿತ್ತು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ.‌ಈ ಹಿಂದೆ ಪಾವಗಡಕ್ಕೆ ಹೇಗಿತ್ತು ಇಂದು ಸಹ ಹಾಗೇ ಇದೆ. ನಾನು ಹೋದ ಕಡೆ ಜನರು ನನ್ನ ಬಳಿ ಬಂದು ನಿಮ್ಮ ಗೆಲಿಸ್ತಿನಿ ಅಂತ ಹೇಳ್ತಾ ಇದ್ದಾರೆ ಎಂದರು‌.

Bellary City Assembly Constituency: ಬಳ್ಳಾರಿ ನಗರದಲ್ಲಿ ಸೊಸೆ - ಬಾವ ನಡುವೆ ಫೈಟ್‌; ಅಣ್ಣನ ವಿರುದ್ಧ ಪತ್ನಿಯನ್ನ ಕಣಕ್ಕಿಳಿಸಿದ ಜನಾರ್ದನ ರೆಡ್ಡಿ!
ಪ್ರಣಾಳಿಕೆ ಭರವಸೆಗಳು
*ಪ್ರತಿಮನೆಗೆ 250 ಯೂನಿಟ್ ವಿದ್ಯುತ್ ಉಚಿತ.
*ಪ.ಜಾ/ಪ.ಪಂ ಜನರಿಗೆ ಉಚಿತ ನಿವೇಶನ.
*ಸಫಾಯಿ ಕರ್ಮಚಾರಿಗಳಿಗೆ/ಪೌರ ಕಾರ್ಮಿಕರಿಗೆ ಮನೆ ನಿರ್ಮಾಣ.
*ಕೆ.ಆರ್.ಐ.ಈ.ಎಸ್. ಶಾಲೆಗಳಲ್ಲಿ ಆಟದ ಸೌಲಭ್ಯ
*ಪ. ಜಾ, ಪ. ಪಂಗಡ ಜನರ ಭೂಮಿಗಳಿಗೆ ಪಿಟಿಸಿಎಲ್ ಕಾಯ್ದೆ ಅಡಿ ರಕ್ಷಣೆ.
*ಎಲ್ಲಾ ಜಿಲ್ಲೆಗಳಲ್ಲಿ ಪ.ಜಾ/ಪ.ಪಂ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರ ವಸತಿ ನಿಲಯಗಳಿಗೆ ಅನುದಾನ.
*ಗೃಹಿಣಿಯರಿಗೆ ತಿಂಗಳಿಗೆ 2500 ಆರ್ಥಿಕ ನೆರವು.
*ಒಂಟಿಯಾಗಿ ಜೀವಿಸುವ ಮಹಿಳೆಯರಿಗೆ ರೂ.2,500 ಉಚಿತ.
*ಶೂನ್ಯ ದರದಲ್ಲಿ ಸ್ವಸಹಾಯ ಗುಂಪುಗಳಿಗೆ ರೂ.10 ಲಕ್ಷ ದವರೆಗೆ ಸಾಲ.
*ರೂ.1000 ಗಿಂತ ವೆಚ್ಚದಲ್ಲಿ ಆರೋಗ್ಯಶ್ರೀ ಯೋಜನೆ ಅಡಿಯಲ್ಲಿ ವೈದ್ಯಕೀಯ ಚಿಕಿತ್ಸೆ
*ಉತ್ತಮ ಆರೋಗ್ಯ ಚಿಕಿತ್ಸೆಗಾಗಿ ಎಲ್ಲಾ ಆಸ್ಪತ್ರೆಗಳನ್ನು ಕಾರ್ಪೊರೇಟ್ ಆಸ್ಪತ್ರೆಗಳಿಗೆ ಸರಿಸಮಾನಾಗಿ ಆಧುನೀಕರಣ. ಹಾಗೂ ವೈದ್ಯರ ಸಂಖ್ಯೆಯನ್ನು ಹೆಚ್ಚಳ.
ಲೇಖಕರ ಬಗ್ಗೆ
ಇರ್ಷಾದ್ ಉಪ್ಪಿನಂಗಡಿ
ವಿಜಯ ಕರ್ನಾಟಕ ಡಿಜಿಟಲ್ ವಿಭಾಗದಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ದೃಶ್ಯ ಹಾಗೂ ಡಿಜಿಟಲ್ ಮಾಧ್ಯಮ ವರದಿಗಾರಿಕೆಯಲ್ಲಿ 12 ವರ್ಷಗಳ ಅನುಭವ ಹೊಂದಿದ್ದಾರೆ. ಸಿನಿಮಾ ನೋಡುವುದು, ಪುಸ್ತಕ ಓದುವುದು, ಸಮಯ ಸಿಕ್ಕಾಗ ಸುತ್ತಾಟ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ