Please enable javascript.Model Polling Booth: ಚುನಾವಣೆ ಮಾದರಿ ಮತಗಟ್ಟೆ ನಿರ್ಮಾಣದಿಂದ ಕಲಾವಿದರಿಗೆ ಉದ್ಯೋಗ - employment to artists by construction of model polling booths - Vijay Karnataka

Model Polling Booth: ಚುನಾವಣೆ ಮಾದರಿ ಮತಗಟ್ಟೆ ನಿರ್ಮಾಣದಿಂದ ಕಲಾವಿದರಿಗೆ ಉದ್ಯೋಗ

Vijaya Karnataka Web 5 Apr 2023, 6:13 am
Subscribe

ಕಲೆ, ಸಂಸ್ಕೃತಿ, ಪರಂಪರೆ ಸಾರಲು ಮಾದರಿ ಮತಗಟ್ಟೆಗಳನ್ನು ನಿರ್ಮಿಸಲಾಗುತ್ತಿದೆ. ಇದರಿಂದ ಚುನಾವಣೆಯಲ್ಲಿ ಕಲಾವಿದರಿಗೆ ಕೆಲಸ ದೊರೆತಂತಾಗಿದ್ದು, ಕಲೆಗೆ ಒಂದಷ್ಟು ಸಂಭಾವನೆ ನೀಡುತ್ತಿರುವುದು ಕಲಾವಿದರನ್ನು ಪ್ರೋತ್ಸಾಹಿಸಿದಂತಾಗಿದೆ.

ಹೈಲೈಟ್ಸ್‌:

  • ವಿಜಯನಗರದಲ್ಲಿ ಮತಗಟ್ಟೆಗಳಿಗೆ ವಾರ್ಲಿ ಕಲೆಯ ಸ್ಪರ್ಶ.
  • ಚುನಾವಣೆಯಲ್ಲಿ ಕಲಾವಿದರಿಗೆ ರಾಜ್ಯದೆಲ್ಲೆಡೆಯಲ್ಲೂಉದ್ಯೋಗ ಒದಗಿದಂತಾಗಿದೆ.
  • 5 ಯುವ ಮತಗಟ್ಟೆ, 5 ಮಾದರಿ ಮತಗಟ್ಟೆ ಮತ್ತು 5 ಮಹಿಳಾ ಮತ್ತು ಒಂದು ವಿಕಲಚೇತನರ ವಿಶೇಷ ಮತಗಟ್ಟೆ ಸ್ಥಾಪನೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ವಿಜಯನಗರ: ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ವಿಧಾನಸಭೆ ಚುನಾವಣೆಗೆ ಚುನಾವಣಾಧಿಕಾರಿಗಳಿಂದ ಭರದ ಸಿದ್ಧತೆ ನಡೆದಿದ್ದು, ಇದೀಗ ಮಾದರಿ ಮತಗಟ್ಟೆಗಳ ಆಯ್ಕೆ ಮತ್ತು ಅವುಗಳಿಗೆ ವರ್ಲಿ ಕಲೆಯ ಟಚ್‌ ನೀಡಲಾಗುತ್ತಿದೆ.
ವರ್ಲಿ ಕಲೆಗೆ ಈ ಬಾರಿ ಚುನಾವಣಾ ಆಯೋಗವೂ ಸಹಮತ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿಆಯೋಗದ ನಿರ್ದೇಶನದಂತೆ ಇದೀಗ ಮಾದರಿ ಮತಗಟ್ಟೆಗಳಿಗೆ ವರ್ಲಿ ಕಲೆಯ ಸ್ಪರ್ಶ ನೀಡುವಂತೆ ಕಲಾವಿದರಿಗೆ ಚುನಾವಣಾ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಇದರಿಂದಾಗಿ ಇದೇ ಮೊಟ್ಟ ಮೊದಲ ಬಾರಿಗೆ ಚುನಾವಣೆಯಲ್ಲಿ ಕಲಾವಿದರಿಗೆ ರಾಜ್ಯದೆಲ್ಲೆಡೆಯಲ್ಲೂಉದ್ಯೋಗ ಒದಗಿದಂತಾಗಿದೆ. ಫ್ಲೆಕ್ಸ್‌ಗಳ ಹಾವಳಿಗೆ ಮೂಲೆಸೇರಿದ್ದ ಚಿತ್ರಬರಹಗಾರರು ಇದೀಗ ಪುನಃ ಒಂದಷ್ಟು ಉದ್ಯೋಗ ಕಂಡುಕೊಳ್ಳುವಂತಾಗಿರುವುದು ಈ ಭಾರಿಯ ಚುನಾವಣೆ ವಿಶೇಷ.

ಮಾದರಿ, ಮಹಿಳಾ ಮತಗಟ್ಟೆ
ವಿಶೇಷವಾಗಿ ಕ್ಷೇತ್ರದಲ್ಲಿಇದೇ ಮೊದಲ ಬಾರಿಗೆ 5 ಯುವ ಮತಗಟ್ಟೆ, 5 ಮಾದರಿ ಮತಗಟ್ಟೆ ಮತ್ತು 5 ಮಹಿಳಾ ಮತ್ತು ಒಂದು ವಿಕಲಚೇತನರ ವಿಶೇಷ ಮತಗಟ್ಟೆ ಸ್ಥಾಪಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಾದರಿ ಮತಗಟ್ಟೆಗಳಿಗೆ ಮೂಲ ಸೌಲಭ್ಯ, ಅಲಂಕಾರಿಕ ಕಾರ್ಯ ಸೇರಿ ನಾನಾ ಬಗೆಯ ವೈಶಿಷ್ಟ್ಯಗಳನ್ನು ಕಲ್ಪಿಸಲಾಗುತ್ತಿದೆ. ಪಟ್ಟಣದ ಜಿಲ್ಲಾ ಪಂ.ಚಾಯತ್ ಕಚೇರಿ, ಲೋಕೋಪಯೋಗಿ ಇಲಾಖೆ ಕಚೇರಿ ಮತ್ತು ರಾಮನಗರ ಪ್ರಾಥಮಿಕ ಶಾಲೆಯನ್ನು ಮಾದರಿ ಮತಗಟ್ಟೆಗಳನ್ನಾಗಿ ಅಭಿವೃದ್ಧಿಪಡಿಸಲು ಆಯ್ಕೆ ಮಾಡಿಕೊಳ್ಳಲಾಗಿದೆ. ಮೂರೂ ಮತಗಟ್ಟೆಗಳಿಗೆ ಕಲಾವಿದ ಆನಂದ್‌ ಕಡ್ಲಿ ಮತ್ತು ತಂಡದಿಂದ ವರ್ಲಿಕಲೆಯಿಂದ ಹಲವು ಚಿತ್ತಾರಗಳನ್ನು ರಚಿಸಲಾಗುತ್ತಿದೆ. ಪ್ರಮುಖವಾಗ ಮಾದರಿ ಮತಗಟ್ಟೆಯ ಪ್ರವೇಶದ್ವಾರದಲ್ಲಿ ವರ್ಲಿ ಕಲೆಯ ಕಮಾನುಗಳ ಆಕರ್ಷಕ ಚಿತ್ರಗಳ ಮೂಲಕ ಮತದಾರರನ್ನು ಸ್ವಾಗತಿಸುವಂತಿದೆ. ಈ ಮೂಲಕ ಮತದಾರರನ್ನು ಮತಗಟ್ಟೆಗೆ ಸೆಳೆಯುವುದು ಮತ್ತು ಮತದಾನದಲ್ಲಿ ಸಕ್ರೀಯಗೊಳಿಸುವುದು ಮತ್ತು ಭಯಮುಕ್ತ ಸಂತಸದಾಯಕ ಮತದಾನಕ್ಕೆ ಉತ್ತೇಜನ ನೀಡುವುದು ಮಾದರಿ ಮತಗಟ್ಟೆ ಉದ್ದೇಶವಾಗಿದೆ. ಈ ಉದ್ದೇಶದ ಭಾಗವಾಗಿಯೆ ವರ್ಲಿಕಲೆ ಸ್ಪರ್ಶ ನೀಡಲಾಗುತ್ತಿದೆ.
Voting Awareness: ಮತದಾನ ಜಾಗೃತಿ, ಮಾದರಿ ಮತಗಟ್ಟೆಗಳಿಗೆ ಕಂಬಳ, ಯಕ್ಷಗಾನ, ಸಖಿ ಅಲಂಕಾರ
ಈ ಮೊದಲು ಶಾಲೆಗಳ ಗೋಡೆಗಳಿಗೆ ಉಚಿತವಾಗಿ ವರ್ಲಿ ಕಲೆ ಚಿತ್ರ ರಚಿಸಲಾಗುತ್ತಿತ್ತು. ಇದೀಗ ಚುನಾವಣೆ ಅಧಿಕಾರಿಗಳು, ಪುರಸಭೆ ಅಧಿಕಾರಿಗಳು ಕಲೆಗೆ ಒಂದಷ್ಟು ಸಂಭಾವನೆ ನೀಡುತ್ತಿರುವುದು ಕಲಾವಿದರನ್ನು ಪ್ರೋತ್ಸಾಹಿಸಿದಂತಾಗಿದೆ ಎಂದು ಹಗರಿಬೊಮ್ಮನಹಳ್ಳಿ ಚಿತ್ರಕಲಾವಿದ ಆನಂದ್‌ ಕಡ್ಲಿ ಹೇಳಿದ್ದಾರೆ.

ಮತದಾರರ ಪಟ್ಟಿಯಲ್ಲಿರಬೇಕು ನಿಮ್ಮ ಹೆಸರು
18 ವರ್ಷ ಮೇಲ್ಪಟ್ಟವರಿಗೆ ಮತದಾನದ ಹಕ್ಕಿದೆ. ಆದರೆ, ಕಡ್ಡಾಯವಾಗಿ ಅವರ ಹೆಸರು ಮತದಾರರ ಪಟ್ಟಿಯಲ್ಲಿರಬೇಕು. ಚುನಾವಣೆ ಘೋಷಣೆಯ ಪೂರ್ವದಲ್ಲೇ ಮತದಾರರ ಪಟ್ಟಿ ಸಿದ್ಧವಾಗಿರುತ್ತದೆ. ಮೃತರ ಹೆಸರುಗಳನ್ನು ಪಟ್ಟಿಯಿಂದ ತೆಗೆಯುವುದು, ಹೊಸ ಮತದಾರರ ಸೇರ್ಪಡೆಯಾಗಿ ಪರಿಷ್ಕೃತ ಪಟ್ಟಿ ಸಿದ್ಧವಾಗಿದೆ. ಏಪ್ರಿಲ್‌ 1ರಂದು 18 ವರ್ಷ ತುಂಬುವ ಎಲ್ಲರಿಗೂ ಮತದಾನದ ಹಕ್ಕು ಕಲ್ಪಿಸಲಾಗಿದೆ. ಏಪ್ರಿಲ್‌ 11ರೊಳಗೆ ತಮ್ಮ ಹೆಸರನ್ನು ಸೇರಿಸಲು ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ. ಮತದಾರರ ಸೇವಾ ಪೋರ್ಟಲ್‌ ಮೂಲಕ ಮತಪಟ್ಟಿಗೆ ಹೆಸರು ಸೇರ್ಪಡೆ ಮಾಡಿಕೊಳ್ಳಬಹುದು. 1950 ಟೋಲ್‌ ಫ್ರೀ ನಂಬರ್‌ ಮೂಲಕವೂ ಸೇರಿಸಿಕೊಳ್ಳುವ ಅವಕಾಶವಿದೆ.
Postal Voting- ಅಂಚೆ ಮತದಾನ: ಮೈಸೂರಿನಲ್ಲಿ 1.16 ಲಕ್ಷ ಮಂದಿ ಮನೆಯಿಂದಲೇ ಮತ ಚಲಾವಣೆ
ನಿಮ್ಮ ಹೆಸರು ಪಟ್ಟಿಯಲ್ಲಿದೆಯೇ?
ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿರದಿದ್ದರೆ ಮತಚಲಾಯಿಸಲು ಅವಕಾಶವಿರುವುದಿಲ್ಲ. ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿದೆಯೇ ಎಂಬುದನ್ನು
ವೆಬ್‌ಸೈಟ್‌ನಲ್ಲಿ ನೋಡಬಹುದು. ಇಲ್ಲಿನಿಮ್ಮ ಕ್ಷೇತ್ರದ ವಿವರ ಹಾಗೂ ನಿಮ ಎಪಿಕ್‌ ಸಂಖ್ಯೆ ನಮೂದಿಸಿ ಅಥವಾ ನಿಮ್ಮ ಹುಟ್ಟಿದ ದಿನಾಂಕ ನಮೂದು ಮಾಡಿಯೂ ತಿಳಿದುಕೊಳ್ಳಬಹುದು. ಜತೆಗೆ ವೋಟರ್‌ ಹೆಲ್ಪ್‌ ಲೈನ್‌ಗೆ ಕರೆ ಮಾಡಿ ಅಥವಾ 9211728082 ಅಥವಾ 1950ಕ್ಕೆ ಎಪಿಕ್‌ ಸಂಖ್ಯೆ ಟೈಪ್‌ ಮಾಡಿ ಮೆಸೇಜ್‌ ಮಾಡುವ ಮೂಲಕವೂ ತಿಳಿದುಕೊಳ್ಳುವ ಅವಕಾಶವಿದೆ. ಪಟ್ಟಿಯಲ್ಲಿದ್ದರೆ ನಿಮ್ಮ ಹೆಸರು ಮತ್ತು ಮತಗಟ್ಟೆ ಸಂಖ್ಯೆ ಕಾಣಿಸುತ್ತದೆ. ಇಲ್ಲವಾದರೆ ನೋ ರೆಕಾರ್ಡ್‌ ಎಂದು ತೋರಿಸುತ್ತದೆ.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ