ಆ್ಯಪ್ನಗರ

ಕಾಂಗ್ರೆಸ್‌ ಕಡೆ ವಾಲಿದ ಜೆಡಿಎಸ್‌ ಕಾರ್ಪೊರೇಟರ್‌

ತನ್ನ ವಿರೋಧಿಗೆ ಪಕ್ಷ ಟಿಕೆಟ್‌ ನೀಡಿರುವುದರಿಂದ ಮುನಿಸಿಕೊಂಡಿರುವ ಜೆಡಿಎಸ್‌ ಬಿಬಿಎಂಪಿ ಸದಸ್ಯ ಇಮ್ರಾನ್‌ ಪಾಷಾ, ಕಾಂಗ್ರೆಸ್‌ ಅಭ್ಯರ್ಥಿ ಜಮೀರ್‌ ಅಹಮದ್‌ ಅವರಿಗೆ ಬೆಂಬಲ ಸೂಚಿಸಿದ್ದಾರೆ.

Vijaya Karnataka Web 28 Apr 2018, 10:29 am
ಬೆಂಗಳೂರು : ತನ್ನ ವಿರೋಧಿಗೆ ಪಕ್ಷ ಟಿಕೆಟ್‌ ನೀಡಿರುವುದರಿಂದ ಮುನಿಸಿಕೊಂಡಿರುವ ಜೆಡಿಎಸ್‌ ಬಿಬಿಎಂಪಿ ಸದಸ್ಯ ಇಮ್ರಾನ್‌ ಪಾಷಾ, ಕಾಂಗ್ರೆಸ್‌ ಅಭ್ಯರ್ಥಿ ಜಮೀರ್‌ ಅಹಮದ್‌ ಅವರಿಗೆ ಬೆಂಬಲ ಸೂಚಿಸಿದ್ದಾರೆ.
Vijaya Karnataka Web jds


ಕಾಂಗ್ರೆಸ್‌ನಿಂದ ಜಿಗಿದು ಜೆಡಿಎಸ್‌ ಸೇರಿ ವಿಧಾನಸಭಾ ಚುನಾವಣೆಗೆ ಟಿಕೆಟ್‌ ಗಿಟ್ಟಿಸುವಲ್ಲಿಯಶಸ್ವಿ ಆಗಿರುವ ಅಲ್ತಾಫ್‌ ಮತ್ತು ಇಮ್ರಾನ್‌ಪಾಷಾ ನಡುವೆ ಹತ್ತು ವರ್ಷಗಳಿಂದ ವೈರತ್ವ ಇದೆ. ಇಮ್ರಾನ್‌ ಜೆಡಿಎಸ್‌ ನಿಂದ ಬಿಬಿಎಂಪಿ ಸದಸ್ಯರಾಗಿದ್ದರೆ, ಅಲ್ತಾಫ್‌ ಅವರ ಪತ್ನಿ ಸೀಮಾ ಕಾಂಗ್ರೆಸ್‌ ಪ್ರತಿನಿಧಿಸಿ ಆಯ್ಕೆಯಾದವರು. ಸದ್ಯ ಸೀಮಾ ಅವರು ಕಾಂಗ್ರೆಸ್‌ನಲ್ಲೇ ಇದ್ದು, ಇವರ ಪತಿ ಅಲ್ತಾಫ್‌ ಮಾತ್ರ ಜೆಡಿಎಸ್‌ ಟಿಕೆಟ್‌ ಪಡೆದು ಬಿರುಸಿನ ಪ್ರಚಾರದಲ್ಲಿದ್ದಾರೆ. ಇದೇ ತಂತ್ರವನ್ನು ಪ್ರಯೋಗಿಸಿರುವ ಇಮ್ರಾನ್‌ ಪಾಷಾ, ತನ್ನ ಪತ್ನಿ , ತಂದೆ ತಾಯಿ ಸಹೋದರರೆಲ್ಲರನ್ನೂ ಕಾಂಗ್ರೆಸ್‌ಗೆ ಸೇರ್ಪಡೆಗೊಳಿಸಿದ್ದು, ತಾವು ಮಾತ್ರ ಜೆಡಿಎಸ್‌ನಲ್ಲೇ ಇದ್ದಾರೆ. ಈ ಬಾರಿಯ ಜೆಡಿಎಸ್‌ ಅಭ್ಯರ್ಥಿಯ ಬದಲಾಗಿ ಜಮೀರ್‌ ಅಹಮದ್‌ ಅವರಿಗೇ ಬಾಹ್ಯ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ.

'ಪ್ರಚಾರದ ವೇಳೆ ತಮ್ಮ ವಾರ್ಡ್‌ಗೆ ಬಂದರೂ ಅಲ್ತಾಫ್‌ ನಮ್ಮ ಮನೆಗೆ ಬರಲಿಲ್ಲ. ಬೆಂಬಲ ಕೇಳಲಿಲ್ಲ' ಎನ್ನುವುದು ಇಮ್ರಾನ್‌ ಈಗ ನೀಡುತ್ತಿರುವ ನೆಪ. ಆದರೆ, ಜೆಡಿಎಸ್‌ ವರಿಷ್ಠರು ಇವರಿಬ್ಬರ ನಡುವಿನ ವೈಮನಸ್ಸನ್ನು ಬಗೆಹರಿಸುವ ಭರವಸೆ ನೀಡಿದ್ದರಾದರೂ ಇದುವರೆಗೂ ಆ ಕಡೆ ಗಮನ ಕೊಟ್ಟಿಲ್ಲ.

ಜಮೀರ್‌ ಅಹಮದ್‌ ಅವರ ನೆರವಿನಿಂದಲೇ ಇದುವರೆಗೂ ರಾಜಕೀಯವಾಗಿ ನೆಲೆ ಕಂಡುಕೊಳ್ಳುತ್ತಾ ಬಂದಿದ್ದು ಇಮ್ರಾನ್‌ ಕುಟುಂಬ. ಹೀಗಾಗಿ ಏನೇ ಮನವೊಲಿಸಿದರೂ ಇಮ್ರಾನ್‌ ಒಲವು ಜಮೀರ್‌ ಅವರ ಪರವಾಗಿಯೇ ಇರುತ್ತದೆ ಎನ್ನುವ ಕಾರಣದಿಂದ ಜೆಡಿಎಸ್‌ ವರಿಷ್ಠರೂ ಇವರಿಬ್ಬರ ನಡುವೆ ರಾಜಿ ಸಂದಾನ ಮಾಡಿಸುವ ತಲೆನೋವಿಗೆ ಮುಂದಾಗಿಲ್ಲ ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌