ಆ್ಯಪ್ನಗರ

ಬಂಡಾಯಗಾರರಿಗೆ ಬಿಜೆಪಿ ಗೇಟ್‌ಪಾಸ್‌

ಶ್ರೀರಾಮುಲು ವಿರುದ್ಧ ಸ್ಪರ್ಧಿಸಿರುವ ಶಾಸಕ ತಿಪ್ಪೇಸ್ವಾಮಿ ಸೇರಿದಂತೆ ತನ್ನೆಲ್ಲ ಬಂಡಾಯ ಅಭ್ಯರ್ಥಿಗಳನ್ನು ಪಕ್ಷದ ಎಲ್ಲ ಜವಾಬ್ದಾರಿಗಳಿಂದ ಬಿಜೆಪಿ ಆರು ವರ್ಷಗಳ ಕಾಲ ಉಚ್ಛಾಟನೆ ಮಾಡಿದೆ.

Vijaya Karnataka 1 May 2018, 10:26 pm
ಬೆಂಗಳೂರು: ಶ್ರೀರಾಮುಲು ವಿರುದ್ಧ ಸ್ಪರ್ಧಿಸಿರುವ ಶಾಸಕ ತಿಪ್ಪೇಸ್ವಾಮಿ ಸೇರಿದಂತೆ ತನ್ನೆಲ್ಲ ಬಂಡಾಯ ಅಭ್ಯರ್ಥಿಗಳನ್ನು ಪಕ್ಷದ ಎಲ್ಲ ಜವಾಬ್ದಾರಿಗಳಿಂದ ಬಿಜೆಪಿ ಆರು ವರ್ಷಗಳ ಕಾಲ ಉಚ್ಛಾಟನೆ ಮಾಡಿದೆ. ಮಂಗಳವಾರ ಸಂಜೆ ಬಂಡಾಯ ಅಭ್ಯರ್ಥಿಗಳ ಉಚ್ಛಾಟನೆ ನಿರ್ಣಯ ತೆಗೆದುಕೊಳ್ಳಲಾಗಿದೆ, ಆಂತರಿಕ ಹಾಗೂ ಬಹಿರಂಗ ಅಸಮಾಧಾನದ ವಿರುದ್ಧ ರಾಜ್ಯಾಧ್ಯಕ್ಷ ಯಡಿಯೂರಪ್ಪ ಎಚ್ಚರಿಕೆ ಸಂದೇಶ ರವಾನೆ ಮಾಡಿದ್ದಾರೆ.
Vijaya Karnataka Web bjp kar


ಕಳೆದ ನಾಲ್ಕು ದಿನಗಳಿಂದ ರಾಜ್ಯದಲ್ಲೇ ಬೀಡು ಬಿಟ್ಟು ರಣತಂತ್ರ ರೂಪಿಸುತ್ತಿರುವ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಸೂಚನೆ ಮೇರೆಗೆ ಈ ಕ್ರಮ ತೆಗೆದುಕೊಳ್ಳಲಾಗಿದ್ದು, ಮುಂದಿನ ಎರಡು ದಿನಗಳೊಳಗಾಗಿ ಎಲ್ಲ ರೀತಿಯ ಅಪಸ್ವರಗಳನ್ನು ಹತ್ತಿಕ್ಕಲು ಬಿಜೆಪಿ ನಿರ್ಧರಿಸಿದೆ.

ಯಾರ‍್ಯಾರು?: ಮೊಳಕಾಲ್ಮೂರು ಕ್ಷೇತ್ರದ ಶಾಸಕ ತಿಪ್ಪೇಸ್ವಾಮಿ, ಖಾನಾಪುರ ವಿಧಾನಸಭಾ ಕ್ಷೇತ್ರದಿಂದ ಗಜಾನನ ರೆಹಮಾನಿ, ಬೈಲಹೊಂಗಲದಿಂದ ಜಗದೀಶ್‌ ಮೆಟಗುಡ್ಡ , ಕುಮಟಾ ಕ್ಷೇತ್ರದಿಂದ ಕಳೆದ ಭಾರಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿದ್ದ ಸೂರಜ್‌ ನಾಯ್ಕ್‌ ಸೋನಿ, ರಾಮದುರ್ಗ ಕ್ಷೇತ್ರದಿಂದ ರಮೇಶ್‌ ಪಂಚಗಟ್ಟಿ, ಮಳವಳ್ಳಿಯಿಂದ ಮಹಾದೇವ, ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದ ವಿ.ಸಿ.ಪಾಟೀಲ್‌, ಹೂವಿನಹಡಗಲಿಯಿಂದ ಓದೋಗಂಗಪ್ಪ, ಸಂಡೂರು ಕ್ಷೇತ್ರದ ಬಂಗಾರಿ ಹನುಮಂತ, ಶಿಗ್ಗಾವಿ ಕ್ಷೇತ್ರದ ಸೋಮಣ್ಣ ಬೇವಿನಮರದ್‌, ತರಿಕೆರೆಯ ಗೋಪಿಕೃಷ್ಣ, ಹೊಳಲ್ಕೆರೆಯ ಹನುಮಕ್ಕ, ಗುಬ್ಬಿಯ ದಿಲೀಪ್‌ ಕುಮಾರ್‌, ಹುನಗುಂದದ ನವಲಗಿ ಹಿರೇಮಠ್‌, ಜಮಖಂಡಿಯ ಸಂಗಮೇಶ್‌ ನಿರಾಣಿ ಅವರನ್ನು ಪಕ್ಷದ ಎಲ್ಲ ಜವಾಬ್ದಾರಿಗಳಿಂದ ಬಿಡುಗಡೆಗೊಳಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌