ಆ್ಯಪ್ನಗರ

ಜಿಗ್ನೇಶ್‌ ಮೇವಾನಿ ಟ್ವೀಟ್‌ಗೆ ಪೊಲೀಸರ ಖಡಕ್ ರಿಪ್ಲೈ

ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ಎಫ್‌ಐಆರ್‌ ದಾಖಲು

Vijaya Karnataka Web 4 May 2018, 10:37 pm
ಚಿಕ್ಕಮಗಳೂರು: ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ಎಫ್‌ಐಆರ್‌ ದಾಖಲಾದ ಕುರಿತು ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಚಿಕ್ಕಮಗಳೂರು ಪೊಲೀಸರನ್ನು ನಿಂದಿಸಿ ಮಾಡಿದ್ದ ಟ್ವೀಟ್‌ಗೆ ಪೊಲೀಸರು ಖಡಕ್ಕಾಗಿ ಪ್ರತಿಕ್ರಿಯಿಸಿದ್ದಾರೆ.
Vijaya Karnataka Web jignesh


ಗುರುವಾರ ಸಂಜೆ ಸಂವಿಧಾನ ಉಳಿವಿಗಾಗಿ ಕರ್ನಾಟಕ ಮತ್ತು ಹೋರಾಟ ಗೀತೆ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದ ಜಿಗ್ನೇಶ್ ಮೇವಾನಿ, ನಟ ಪ್ರಕಾಶ್‌ ರಾಜ್ ಮತ್ತು ಕಲ್ಕುಳಿ ವಿಠಲ್ ಹೆಗ್ಡೆ ಸಹಿತ 18 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಕಾರ್ಯಕ್ರಮ ಸಂಘಟಿಸಲು ಅನುಮತಿ ಕೋರಿ ಪತ್ರ ಬರೆದಿದ್ದರೂ, ಅನುಮತಿ ಲಭ್ಯವಾಗಿರಲಿಲ್ಲ. ಆದರೂ ಸುಮಾರು 200 ಜನರನ್ನು ಸೇರಿಸಿ ಕಾರ್ಯಕ್ರಮ ನಡೆಸಲಾಗಿತ್ತು.

ಈ ಬಗ್ಗೆ ಚುನಾವಣಾ ವೀಕ್ಷಕರಾದ ತುಷಾರಮಣಿ ಚಿಕ್ಕಮಗಳೂರು ಪೊಲೀಸರಿಗೆ ದೂರು ನೀಡಿದ್ದರು. ನೀತಿ ಸಂಹಿತೆ ಉಲ್ಲಂಘನೆ ಅಡಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ಆದರೆ ಈ ಬಗ್ಗೆ ಆಕ್ಷೇಪಿಸಿದ್ದ ಮೇವಾನಿ, ನಮ್ಮ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ. ನಾನು ಮತ್ತು ಪ್ರಕಾಶ್‌ ರಾಜ್‌ಗೆ ಮಾತನಾಡಲು ಪೊಲೀಸರು ಅವಕಾಶ ನೀಡಲಿಲ್ಲ. ಕರ್ನಾಟಕ ಪೊಲೀಸರು ಕೇಸರಿಕರಣಗೊಂಡಿದ್ದಾರೆ ಎಂದು ಟ್ವೀಟ್ ಮಾಡಿದ್ದರು.

ಈ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಚಿಕ್ಕಮಗಳೂರು ಪೊಲೀಸರು, ಕಾರ್ಯಕ್ರಮ ರದ್ದುಪಡಿಸುವಲ್ಲಿ ಪೊಲೀಸರದ್ದು ಯಾವುದೇ ಪಾತ್ರವಿಲ್ಲ. ಚುನಾವಣಾಧಿಕಾರಿ ದೂರಿನಂತೆ ಕ್ರಮ ಕೈಗೊಳ್ಳಲಾಗಿದೆ. ಕರ್ನಾಟಕ ಪೊಲೀಸರ ವೃತ್ತಿಧರ್ಮವನ್ನು ಪ್ರಶ್ನಿಸಬೇಡಿ.. ಮುಂದಿನ ಬಾರಿ ಈ ರೀತಿ ಬಾಲಿಶ ಹೇಳಿಕೆ ನೀಡಬೇಡಿ.. ಸ್ವಲ್ಪ ಪ್ರೌಢತೆಯಿಂದ ವರ್ತಿಸಿ ಎಂದಿದ್ದಾರೆ.

ಮೇವಾನಿ ಟ್ವೀಟ್ ಬಗ್ಗೆ ಪ್ರತಿಕ್ರಿಯಿಸಿರುವ ಚಿಕ್ಕಮಗಳೂರು ಎಸ್‌ಪಿ ಕೆ. ಅಣ್ಣಾಮಲೈ, ಪೊಲೀಸರ ಕರ್ತವ್ಯನಿಷ್ಠೆಯನ್ನು ಪ್ರಶ್ನಿಸುವುದು ನೋವುಂಟು ಮಾಡುತ್ತದೆ ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌