ಆ್ಯಪ್ನಗರ

ಹಲವು ಗೊಂದಲಗಳ ಮಧ್ಯೆ ಹೈದರಾಬಾದ್‌ ತಲುಪಿದ ಕಾಂಗ್ರೆಸ್‌-ಜೆಡಿಎಸ್ ಶಾಸಕರು

ರಾಜ್ಯದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರು ಹೈದರಾಬಾದ್‌ ತಲುಪಿದ್ದಾರೆ. ಅವರು ಪ್ರಯಾಣಿಸಬೇಕಿದ್ದ ವಿಮಾನಕ್ಕೆ ಅನುಮತಿ ರದ್ದಾದ ಬಳಿಕ ಹಲವು ಗೊಂದಲಗಳ ಮಧ್ಯೆಯೇ ಪ್ರತ್ಯೇಕ ಬಸ್ಸುಗಳಲ್ಲಿ ಈ ಶಾಸಕರು ಪ್ರಯಾಣಿಸಿದರು.

Vijaya Karnataka Web 18 May 2018, 11:01 am
ಬೆಂಗಳೂರು: ರಾಜ್ಯದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರು ಹೈದರಾಬಾದ್‌ ತಲುಪಿದ್ದಾರೆ. ಅವರು ಪ್ರಯಾಣಿಸಬೇಕಿದ್ದ ವಿಮಾನಕ್ಕೆ ಅನುಮತಿ ರದ್ದಾದ ಬಳಿಕ ಹಲವು ಗೊಂದಲಗಳ ಮಧ್ಯೆಯೇ ಪ್ರತ್ಯೇಕ ಬಸ್ಸುಗಳಲ್ಲಿ ಈ ಶಾಸಕರು ಪ್ರಯಾಣಿಸಿದರು.
Vijaya Karnataka Web Congress bus


ಮೊದಲು, ಕಾಂಗ್ರೆಸ್ ಶಾಸಕರನ್ನು ಪುದುಚೇರಿಗೆ ಹಾಗೂ ಜೆಡಿಎಸ್ ಶಾಸಕರನ್ನು ಕೊಚ್ಚಿಗೆ ಕರೆದೊಯ್ಯಲು ಪ್ಲಾನ್ ಸಿದ್ಧವಾಗಿತ್ತು. ಆದರೆ ಕಾಂಗ್ರೆಸಿಗರು ಬುಕ್‌ ಮಾಡಿದ ಬಸ್ಸುಗಳಿಗೆ ಕೊಚ್ಚಿಗೆ ಪ್ರಯಾಣಿಸಲು ಪರ್ಮಿಟ್‌ ಇರಲಿಲ್ಲ ಎಂದು ಮೂಲಗಳು ಹೇಳಿವೆ.

ಅನಂತರ ಕಾಂಗ್ರೆಸ್‌ ಶಾಸಕರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯಿಂದ ಬಸ್ಸುಗಳನ್ನು ಬದಲಾಯಿಸಿ ಹೈದರಾಬಾದ್‌ಗೆ ಪ್ರಯಾಣಿಸಿದರು.

ಸದ್ಯ ಕಾಂಗ್ರೆಸ್‌ ಶಾಸಕರು ಹೈದರಾಬಾದ್‌ನ ಹೋಟೆಲ್‌ ತಾಜ್‌ ಕೃಷ್ಣದಲ್ಲಿ ವಾಸ್ತವ್ಯ ಹೂಡಿದ್ದರೆ, ಜೆಡಿಎಸ್‌ ಶಾಸಕರು ಹೋಟೆಲ್‌ ನೊವೊಟೆಲ್‌ನಲ್ಲಿ ಉಳಿದುಕೊಂಡಿದ್ದಾರೆ.

ಹೈದರಾಬಾದ್‌ ತಲುಪಿದವರಲ್ಲಿ ಕಾಂಗ್ರೆಸ್‌ನ 70 ಶಾಸಕರು ಹಾಗೂ ಜೆಡಿಎಸ್‌ನ 36 ಶಾಸಕರಿದ್ದಾರೆ. ಇನ್ನೂ ಮೂವರು ಶಾಸಕರು ವಿಶೇಷ ವಿಮಾನದಲ್ಲಿ ಹೈದರಾಬಾದ್‌ಗೆ ಹಾರಲಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿರಿಯ ಮುಖಂಡರಾದ ಆರ್‌.ವಿ ದೇಶಪಾಂಡೆ ಮತ್ತು ರಾಮಲಿಂಗಾ ರೆಡ್ಡಿ ಬೆಂಗಳೂರಿನಲ್ಲೇ ಉಳಿದುಕೊಳ್ಳಲಿದ್ದಾರೆ.

ತಮ್ಮ ತಂದೆ ಎಚ್.ಡಿ ದೇವೇಗೌಡರ ಹುಟ್ಟಹಬ್ಬವನ್ನು ಆಚರಿಸಲು ಜೆಡಿಎಸ್‌ನ ಎಚ್‌.ಡಿ ಕುಮಾರಸ್ವಾಮಿ ಮತ್ತು ಎಚ್‌.ಡಿ ರೇವಣ್ಣ ಬೆಂಗಳೂರಿನಲ್ಲೇ ಉಳಿದುಕೊಂಡಿದ್ದಾರೆ. ತಿರುಪತಿಗೆ ತೆರಳಿದ್ದ ದೇವೇಗೌಡರು ಈ ಮಧ್ಯಾಹ್ನ ಬೆಂಗಳೂರಿಗೆ ವಾಪಸಾಗುತ್ತಿದ್ದಾರೆ. ನಾಲ್ವರು ಎಂಎಲ್‌ಸಿಗಳನ್ನು ಹೈದರಾಬಾದ್‌ಗೆ ಕಳುಹಿಸಲಾಗಿದ್ದು, ಅವರು ಜೆಡಿಎಸ್‌ ಶಾಸಕರ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ