ಆ್ಯಪ್ನಗರ

ಸಾಲ ಮನ್ನಾ ಮಾಡಿಯೇ ಸಿದ್ದ ಎಂದ ಕುಮಾರಸ್ವಾಮಿ

ಹಿಂದಿನ ಸರಕಾರದ ಜನಪ್ರಿಯ ಯೋಜನೆ ಮುಂದುವರಿಸುವುದರ ಜತೆಗೆ, ಹೊಸ ಕಾರ್ಯಕ್ರಮ ಜಾರಿಗೊಳಿಸಲಾಗುವುದು, ಅಲ್ಲದೆ ಸಾಲ ಮನ್ನಾದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ರಾಜ್ಯದ ನೂತನ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.

Vijaya Karnataka Web 23 May 2018, 10:19 pm
ಬೆಂಗಳೂರು: ಮುಂದಿನ 5 ವರ್ಷಗಳ ಕಾಲ ದೇಶದಲ್ಲೆ ಮಾದರಿ ಆಡಳಿತವನ್ನು ಜೆಡಿಎಸ್‌-ಕಾಂಗ್ರೆಸ್‌ ಸರಕಾರ ನೀಡಲಿದೆ. ಹಿಂದಿನ ಸರಕಾರದ ಜನಪ್ರಿಯ ಯೋಜನೆ ಮುಂದುವರಿಸುವುದರ ಜತೆಗೆ, ಹೊಸ ಕಾರ್ಯಕ್ರಮ ಜಾರಿಗೊಳಿಸಲಾಗುವುದು, ಅಲ್ಲದೆ ಸಾಲ ಮನ್ನಾದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ರಾಜ್ಯದ ನೂತನ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.
Vijaya Karnataka Web kumarswami


ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ನೂತನ ಡಿಸಿಎಂ ಜಿ. ಪರಮೇಶ್ವರ ಅವರೊಂದಿಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಅವರು ರೈತರ ಸಾಲ ಮನ್ನಾ ವಿಚಾರದಲ್ಲಿ ಯೂಟರ್ನ್‌ ಹೊಡೆಯುವ ಪ್ರಶ್ನೆಯಿಲ್ಲ. ಸ್ವತಂತ್ರವಾಗಿ ಅಧಿಕಾರಕ್ಕೆ ಬಂದರೆ ರೈತರ 53 ಸಾವಿರ ಕೋಟಿ ರೂ. ಸಾಲವನ್ನು ಮನ್ನಾ ಮಾಡುವುದಾಗಿ ಹೇಳಿರುವುದು ನಿಜ. ಕೆಲವು ಆರ್ಥಿಕ ತಜ್ಞರು ಹಣಕಾಸಿನ ಪರಿಸ್ಥಿತಿ ಸರಿಯಿಲ್ಲವೆಂದು ಬರೆದಿರಬಹುದು.

ಆದರೆ, ಸಾಲ ಮನ್ನಾ ಸಂಬಂಧ ಈಗಾಗಲೇ ನೀಲನಕ್ಷೆ ಸಿದ್ಧವಾಗಿದೆ. ಇದರಿಂದ ಹಿಂದೆ ಸರಿಯುವ, ಪಲಾಯನವಾದದ ಪ್ರಶ್ನೆ ಇಲ್ಲ. ಬಹುಮತ ಸಾಬೀತು ಬಳಿಕ ಮುಂದಿನ ಪ್ರಕ್ರಿಯೆ ಆರಂಭವಾಗಲಿದೆ. ಜೆಡಿಎಸ್‌, ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಹಲವು ಭರವಸೆ ಕೊಡಲಾಗಿದೆ. ಅದರ ಬಗ್ಗೆ ಚರ್ಚಿಸಿ ತೀರ್ಮಾನಕ್ಕೆ ಬರಲು ಸಮನ್ವಯ ಸಮಿತಿ ರಚನೆಯಾಗಲಿದೆ. ನಂತರ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪಿಸಲಾಗುವುದು ಎಂದರು.

ಸರ್ವ ಜನಾಂಗದ ಶಾಂತಿಯ ತೋಟ: ಕುವೆಂಪು ಕವನದಂತೆ ಸರ್ವ ಜನಾಂಗದ ಶಾಂತಿಯ ತೋಟದ ಆಶಯವೇ ಸರಕಾರದ ಗುರಿ. ಯಾವುದೇ ಜಾತಿ, ವರ್ಗದ ವಿರೋಧ ಮಾಡುವುದಿಲ್ಲ. ಎಲ್ಲ ಜನಾಂಗದ ಬಡವರಿಗೂ ಅನುಕೂಲವಾಗಬೇಕು ಎನ್ನುವುದಕ್ಕೆ ಪ್ರಾಶಸ್ತ್ಯ. ಬಸವಣ್ಣನ ವಚನದಂತೆ 'ಇವ ನಮ್ಮವ' ಎಂದು ಎಲ್ಲರನ್ನೂ ಸ್ವೀಕರಿಸಲಾಗುವುದು ಎಂಬ ಕುಮಾರಸ್ವಾಮಿ ಭರವಸೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ