ಆ್ಯಪ್ನಗರ

ಸಿದ್ದು ಸಂಪುಟದ 16 ಸಚಿವರಿಗೆ ಮತದಾರರ ಗುದ್ದು

ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದ 16 ಜನ ಪ್ರಭಾವಿ ಸಚಿವರುಗಳು ತಮ್ಮ ಸ್ಥಾನ ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಚುನಾವಣೆಯಲ್ಲಿ ಹಾಲಿ ಸಚಿವರುಗಳು ಸೋಲುಂಡಿರುವುದು ಕಾಂಗ್ರೆಸ್‌ಗೂ ಹಿನ್ನಡೆ ತಂದಿದೆ.

Vijaya Karnataka Web 15 May 2018, 7:30 pm
ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದ 16 ಜನ ಪ್ರಭಾವಿ ಸಚಿವರುಗಳು ತಮ್ಮ ಸ್ಥಾನ ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಚುನಾವಣೆಯಲ್ಲಿ ಹಾಲಿ ಸಚಿವರುಗಳು ಸೋಲುಂಡಿರುವುದು ಕಾಂಗ್ರೆಸ್‌ಗೂ ಹಿನ್ನಡೆ ತಂದಿದೆ.
Vijaya Karnataka Web siddu


ಸೋತ ಪ್ರಮುಖ ಸಚಿವರ ವಿವರ ಇಲ್ಲಿದೆ:
ಸಿಎಂ ಸಿದ್ದರಾಮಯ್ಯ: ಹಣಕಾಸು, ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ, ಗೃಹ ಮತ್ತು ಬೆಂಗಳೂರು ನಗರಾಭಿವೃದ್ಧಿ ಖಾತೆ,
ರಮಾನಾಥ ರೈ: ಅರಣ್ಯ ಮತ್ತು ಪರಿಸರ ಖಾತೆ, ಬಂಟ್ವಾಳ ಕ್ಷೇತ್ರ,
ಬಸವರಾಜ ರಾಯರೆಡ್ಡಿ: ಉನ್ನತ ಶಿಕ್ಷಣ, ಯಲಬುರ್ಗಾ ಕ್ಷೇತ್ರ,
ಎಸ್‌. ಎಸ್‌. ಮಲ್ಲಿಕಾರ್ಜುನ: ತೋಟಗಾರಿಕೆ ಮತ್ತು ಕೃಷಿ ಮಾರುಕಟ್ಟೆ, ದಾವಣಗೆರೆ ಉತ್ತರ,
ಡಾ. ಎಚ್‌. ಸಿ. ಮಹದೇವಪ್ಪ: ಲೋಕೋಪಯೋಗಿ, ಬಂದರು ಮತ್ತು ಒಳನಾಡು ಸಾರಿಗೆ ಟಿ ನರಸೀಪುರ ಕ್ಷೇತ್ರ,
ಕಾಗೋಡು ತಿಮ್ಮಪ್ಪ: ಕಂದಾಯ ಸಚಿವ, ಸಾಗರ,
ಗೀತಾ ಮಹಾದೇವಪ್ರಸಾದ್: ಸಕ್ಕರೆ ಮತ್ತು ಸಣ್ಣ ಉದ್ಯಮ, ಕೈಗಾರಿಕೆ, ಗುಂಡ್ಲುಪೇಟೆ ಕ್ಷೇತ್ರ,
ಡಾ. ಶರಣ ಪ್ರಕಾಶ್ ಪಾಟೀಲ್: ವೈದ್ಯಕೀಯ ಶಿಕ್ಷಣ, ಸೇಡಂ ಕ್ಷೇತ್ರ,
ಎಚ್‌. ಆಂಜನೇಯ: ಸಮಾಜ ಕಲ್ಯಾಣ, ಹಿಂದುಳಿದ ವರ್ಗ ಖಾತೆ, ಹೊಳಲ್ಕೆರೆ ಕ್ಷೇತ್ರ,
ಸಂತೋಷ್ ಲಾಡ್: ಕಾರ್ಮಿಕ ಖಾತೆ, ಕಲಘಟಗಿ ಕ್ಷೇತ್ರ,
ರುದ್ರಪ್ಪ ಲಮಾಣಿ: ಜವಳಿ ಮತ್ತು ಮುಜರಾಯಿ, ಹಾವೇರಿ ಕ್ಷೇತ್ರ,
ಉಮಾಶ್ರೀ: ಮಹಿಳಾ & ಮಕ್ಕಳ ಕಲ್ಯಾಣ ಮತ್ತು ಕನ್ನಡ, ಸಂಸ್ಕೃತಿ ಖಾತೆ, ತೇರದಾಳ ಕ್ಷೇತ್ರ,
ಟಿ. ಬಿ. ಜಯಚಂದ್ರ: ಸಣ್ಣ ನೀರಾವರಿ, ಕಾನೂನು ಮತ್ತು ನ್ಯಾಯ, ಸಂಸದೀಯ ವ್ಯವಹಾರ, ಶಿರಾ ಕ್ಷೇತ್ರ,
ಪ್ರಮೋದ್ ಮಧ್ವರಾಜ್: ಮೀನುಗಾರಿಕೆ, ಯುವಜನ ಮತ್ತು ಕ್ರೀಡಾ ಸಚಿವ, ಉಡುಪಿ ವಿಧಾನಸಭಾ ಕ್ಷೇತ್ರ,
ವಿನಯ್ ಕುಲಕರ್ಣಿ: ಗಣಿ ಮತ್ತು ಭೂವಿಜ್ಞಾನ ಖಾತೆ, ಧಾರವಾಡ,
ಎ. ಮಂಜು: ಹೈನುಗಾರಿಕೆ ಮತ್ತು ರೇಷ್ಮೆ, ಅರಕಲಗೂಡು,
ಎಚ್. ಎಂ. ರೇವಣ್ಣ: ಸಾರಿಗೆ, ಹೆಬ್ಬಾಳ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌