ಆ್ಯಪ್ನಗರ

ವೋಟರ್‌ ಐಡಿ ಹಗರಣ: ಕೇಂದ್ರ ಚುನಾವಣೆ ಆಯೋಗಕ್ಕೆ ಮಧ್ಯಾಹ್ನದೊಳಗೆ ವರದಿ

ಜಾಲಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ಸಿಕ್ಕಿದ ರಾಶಿ ರಾಶಿ ವೋಟರ್ ಐಡಿ ಕಾರ್ಡ್ ಪ್ರಕರಣದ ಕುರಿತು ಚುನಾವಣಾಧಿಕಾರಿಗಳು ಸತತ 12 ತಾಸುಗಳ ಕಾಲ ವಿಚಾರಣೆ ಮತ್ತು ಪರಿಶೀಲನೆ ನಡೆಸಿದರು.

Vijaya Karnataka Web 9 May 2018, 11:40 am
ಬೆಂಗಳೂರು: ಜಾಲಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ಸಿಕ್ಕಿದ ರಾಶಿ ರಾಶಿ ವೋಟರ್ ಐಡಿ ಕಾರ್ಡ್ ಪ್ರಕರಣದ ಕುರಿತು ಚುನಾವಣಾಧಿಕಾರಿಗಳು ಸತತ 12 ತಾಸುಗಳ ಕಾಲ ವಿಚಾರಣೆ ಮತ್ತು ಪರಿಶೀಲನೆ ನಡೆಸಿದರು.
Vijaya Karnataka Web Fake Voter ID- Apartment


ಈ ಕುರಿತು ಕೇಂದ್ರ ಚುನಾವಣೆ ಆಯೋಗಕ್ಕೆ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳು ಮಧ್ಯಾಹ್ನದೊಳಗೆ ವರದಿ ಸಲ್ಲಿಸಲಿದ್ದಾರೆ.

ಈ ಫ್ಲ್ಯಾಟ್‌ಗೂ ನಮಗೂ ಯಾವುದೇ ಸಂಬಂಧವಿಲ್ಲ. ಅಲ್ಲಿ ನಡೆಯುತ್ತಿದ್ದ ಅಕ್ರಮವನ್ನು ನಾನೇ ಬಯಲಿಗೆ ಎಳೆದಿದ್ದು ಎಂದು ರಾಕೇಶ್ ಎಂಬುವರು ಹೇಳಿಕೆ ನೀಡಿದ್ದಾರೆ.

ವೀಡಿಯೋ: ನಕಲಿ ವೋಟರ್‌ ಐಡಿ ಹಗರಣ: ಸಂಬಂಧವಿಲ್ಲ ಎಂದ ಬಿಜೆಪಿ ನಾಯಕ
ನಾನು ಈ ಫ್ಲ್ಯಾಟ್‌ನಲ್ಲಿ ಬಾಡಿಗೆಗೆ ಇಲ್ಲ. ನನ್ನ ಮನೆ ಒಂದು ಕಿ.ಮೀ. ದೂರದಲ್ಲಿ ವಾಸ ಇದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಇದು ಮಂಜುಳಾ ನಂಜಮರಿ ಅವರಿಗೆ ಸೇರಿದ ಫ್ಲ್ಯಾಟ್ ಎಂದು ರಾಕೇಶ್ ಹೇಳಿಕೊಂಡಿದ್ದಾರೆ.

ಚುನಾವಣೆ ಅಧಿಕಾರಿಗಳಿಗೆ ಎಲ್ಲ ಮಾಹಿತಿ ನೀಡಿದ್ದೇನೆ. ವೀಡಿಯೊ ರೆಕಾರ್ಡ್ ಮಾಡಿದ್ದಾರೆ. ಅಪಾರ್ಟ್‌ಮೆಂಟ್ ನಲ್ಲಿ ಇದ್ದ ಸಿಸಿಟಿವಿ ದೃಶಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಆತ ಹೇಳಿಕೆ ನೀಡಿದ್ದಾರೆ.

ಮಂಜುಳಾ ಅವರು ಹತ್ತು ವರ್ಷಗಳ ಹಿಂದೆ ಬಿಜೆಪಿ ಕಾರ್ಪೋರೇಟ್ ಆಗಿದ್ದರು. ಈಗ ಅವರು ಬಿಜೆಪಿಯಲ್ಲಿ ಇಲ್ಲ ಎಂದು ರಾಕೇಶ್ ಹೇಳಿಕೊಂಡಿದ್ದಾರೆ.

ವೋಟರ್‌ ಐಡಿ ಹಗರಣ: ಆರ್‌.ಆರ್‌. ನಗರ ಚುನಾವಣೆ ಮುಂದೂಡಲು ಬಿಜೆಪಿ ಆಗ್ರಹ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌