ಆ್ಯಪ್ನಗರ

ಹೆಲಿಕಾಪ್ಟರ್‌ ಇಳಿಯುವಾಗ ಸ್ಲಿಪ್ ಆದ ಸ್ಮೃತಿ ಇರಾನಿ

ರಾಜ್ಯ ಸರ್ಕಾರ ಲೂಟಿ ಹೊಡೆದು, ಸಿದ್ದರಾಮಯ್ಯ ಈಗ ಸಿದ ರೂಪಯ್ಯ ಆಗಿದ್ದಾರೆ ಎಂದ ಸಿದ್ಧರಾಮಯ್ಯ

Vijaya Karnataka Web 4 May 2018, 4:15 pm
ಹುಬ್ಬಳ್ಳಿ:- ಅಣ್ಣಿಗೇರಿ ಪಟ್ಟಣದಲ್ಲಿ ಬಿಜೆಪಿ‌ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ 'ರಾಜ್ಯ ಸರ್ಕಾರ ಲೂಟಿ ಹೊಡೆದು, ಸಿದ್ದರಾಮಯ್ಯ ಈಗ ಸಿದ ರೂಪಯ್ಯ ಆಗಿದ್ದಾರೆ. ಕೇಂದ್ರ ಸರ್ಕಾರ ನೀಡಿದ‌ ಅನುಧಾನ ಜನರ ಕಲ್ಯಾಣಕ್ಕೆ‌ ಬಳಕೆಯಾಗಿಲ್ಲ. ಜನರ ಹಣವನ್ನು ಸಿದ್ದರಾಮಯ್ಯ ಲೂಟಿ ಹೊಡೆದಿದ್ದಾರೆ. ಸಿ‌ಎಂ ಸಿದ್ದರಾಮಯ್ಯ ಲೂಟಿ‌ ವಿಚಾರ ದೆಹಲಿಯ ರಾಜಕೀಯ ವಲಯದಲ್ಲಿ ಚೆರ್ಚೆ ಯಾಗುತ್ತಿದೆ. ಜಾತಿ, ಧರ್ಮ ಅಧಾರದ ಮೇಲೆ ಜನರನ್ನ ವಿಭಜಿಸಲಾಗುತ್ತಿದೆ. ವಂದೇ ಮಾತರಂ ಗೀತೆ ರಾಹುಲ್ ಅವಮಾನ ಮಾಡಿದ್ದಾರೆ' ಎಂದು ಕಾಂಗ್ರೆಸ್ ಸರಕಾರದ ವಿರುದ್ಧ ಹರಿಹಾಯ್ದರು.'

'ರಾಜ್ಯದಲ್ಲಿ ಮಹಿಳಾ ಅಧಿಕಾರಿಗಳಿಗೆ ಸುರಕ್ಷತೆ ಇಲ್ಲ. ಡಿವೈಎಸ್ಪಿ ಅನುಪಮಾ ಶಣೈ, ಐಎಎಸ್ ಅಧಿಕಾರಿ ಶಿಖಾ ಹೆಸರು‌ ಪ್ರಸ್ತಾಪಿಸಿದ ಸ್ಮೃತಿ ಇರಾನಿ. ಪ್ರಮಾಣಿಕ ಅಧಿಕಾರಿಗಳು ನಿತ್ಯ ಸರ್ಕಾರದಿಂದ‌ ಕಿರುಕುಳ ಅನುಭವಿಸುತ್ತಿದ್ದಾರೆ. ಐಎಎಸ್ ಐಪಿಎಸ್ ಅಧಿಕಾರಿಗಳ ಸ್ಥತಿ ಈ‌ ರೀತಿ ಇರುವಾಗ, ಸಾಮಾನ್ಯ ಮಹಿಳೆಯರ ಸ್ಥಿತಿ ಹೇಗಿರಬೇಡ' ಎಂದು ಸ್ಮೃತಿ ಇರಾನಿ ಹೇಳಿದರು.

'ಜನರ ಆರ್ಶೀವಾದದಿಂದ ಕಮಲ‌ ವಿಧಾನಸೌದ ತಲುಪಬೇಕು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದರಿಂದ ಕೇಂದ್ರ ಮತ್ತು ರಾಜ್ಯದ‌ ನಡುವೆ ವಿಕಾಸ್ ಸೇತುವೆ ನಿರ್ಮಣ ವಾಗಲಿದೆ' ಎಂದು ಪ್ರಚಾರದಲ್ಲಿ ಹೇಳಿದರು.

ಹೆಲಿಕಾಪ್ಟರ್‌ನಿಂದ ಕಾಲು ಜಾರಿಬೀಳುತ್ತಿದ್ದ ಕೇಂದ್ರ ಸಚಿವೆ ಸ್ಮೃತಿ ಇರಾನಿ

ಚುನಾವಣಾ ಪ್ರಚಾರ ನಿಮಿತ್ತ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಅಣ್ಣಿಗೇರಿ ಎಪಿಎಂಸಿ ಹೆಲಿಪ್ಯಾಡ್ ಗೆ ಹೆಲಿಕಾಪ್ಟರ್ ನಿಂದ ಕೆಳಗೆ ಇಳಿಯುವಾಗ ಕಾಲು ಜಾರಿದ ಸ್ಮೃತಿ ಇರಾನಿ ಅವರನ್ನು ನೆಲಕ್ಕೆ ಬೀಳದಂತೆ ಸಹ ಪೈಲಟ್ ತಡೆದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ