ಆ್ಯಪ್ನಗರ

ವಿಜಯೇಂದ್ರಗೆ ಟಿಕೆಟ್ ಕೈತಪ್ಪಲು ಆರ್‌ಎಸ್‌ಎಸ್‌ ಕಾರಣವಲ್ಲ: ಬಿಎಸ್ ವೈ

ಯಡಿಯೂರಪ್ಪಗೆ ಮೈಸೂರಿನಲ್ಲಿ ಘೇರಾವ್‌

Vijaya Karnataka Web 23 Apr 2018, 7:31 pm
ಮೈಸೂರು: ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ವಿಜಯೇಂದ್ರಗೆ ಟಿಕೆಟ್ ಕೈ ತಪ್ಪಲು ಕೇಂದ್ರವಾಗಲಿ ಅಥವಾ ಆರ್ ಎಸ್ ಎಸ್ ಕೈವಾಡವಿಲ್ಲ. ನಾನೇ ಬೇಡ ಎಂದು ತೀರ್ಮಾನ ಕೈಗೊಂಡಿದ್ದೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.
Vijaya Karnataka Web varuna bsy clarifies on vijayendra ticket
ವಿಜಯೇಂದ್ರಗೆ ಟಿಕೆಟ್ ಕೈತಪ್ಪಲು ಆರ್‌ಎಸ್‌ಎಸ್‌ ಕಾರಣವಲ್ಲ: ಬಿಎಸ್ ವೈ


ಖಾಸಗಿ ಹೋಟೆಲ್ ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಿ.ಎಸ್.ವೈ, ಕಳೆದ 20 ದಿನಗಳ ಹಿಂದೆ ವರುಣಾ ಕ್ಷೇತ್ರಕ್ಕೆ ಕೆಲಸ ಮಾಡುವಂತೆ ನಾನೇ ನನ್ನ ಮಗ ವಿಜಯೇಂದ್ರನನ್ನ ಕಳುಹಿಸಿದೆ. ಆದರೆ ಈಗ ಟಿಕೆಟ್ ಬೇಡ ಸಾಮಾನ್ಯ ಕಾರ್ಯಕರ್ತನಾಗಿ ಮೈಸೂರು, ಚಾಮರಾಜನಗರ ಜಿಲ್ಲೆಯಲ್ಲಿ ಕೆಲಸ ಮಾಡುವಂತೆ ತಿಳಿಸಿದ್ದೇನೆ ಎಂದರು.

ನಾಮಾನ್ಯ ಕಾರ್ಯಕರ್ತನಿಗೆ ಚುನಾವಣೆಗೆ ನಿಲ್ಲಿಸಿ ಗೆಲ್ಲಿಸುವಂತೆ ಹೇಳಿದ್ದೇನೆ. ಟಿಕೆಟ್ ಕೈತಪ್ಪಲು ಕೇಂದ್ರವಾಗಲಿ ಅಥವಾ ಸಂಘ ಪರಿವಾರವಾದ ಕೈವಾಡವಿಲ್ಲ. ದಯವಿಟ್ಟು ನಾವು ಮಾಡಿದ ತಪ್ಪಿಗೆ ವರುಣಾ ಕ್ಷೇತ್ರದ ಜನರಲ್ಲಿ ಕ್ಷಮಿಸುವಂತೆ ಮನವಿ ಮಾಡುತ್ತೇನೆ ಎಂದರು.

ದಯವಿಟ್ಟು ಯಾವುದೇ ಗೊಂದಲ ಮಾಡಬೇಡಿ ಹೈಕಮಾಂಡ್ ನಾನು ಹೇಳಿದ 95 ಪರ್ಸೆಂಟ್‌ ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ಕೊಟ್ಟಿದೆ. ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ನಾನೇ ಮುಖ್ಯಮಂತ್ರಿಯಾಗುತ್ತೇನೆ. ವಿಜಯೇಂದ್ರನಿಗೆ ಬೇಸರವಾಗಿಲ್ಲ. ಆದರೆ ಎಲ್ಲವೂ ಸರಿ ಹೋಗುತ್ತದೆ ಎಂದರು.

ಬಿಎಸ್ ವೈಗೆ ಘೇರಾವ್

ಮಾಧ್ಯಮಗಳೊಂದಿಗೆ ಹೇಳಿಕೆ ನೀಡಿದ ಬಳಿಕ ರೂಂಗೆ ತೆರಳಲು ಸಿದ್ದವಾಗುತ್ತಿದ್ದ ಯಡಿಯೂರಪ್ಪನರಿಗೆ ವರುಣಾ ಕ್ಷೇತ್ರದ ಕಾರ್ಯಕರ್ತರು ಘೇರಾವ್ ಹಾಕಿ ಟಿಕೆಟ್ ಬೇಕೆ ಬೇಕೆಂದು ಪಟ್ಟು ಹಿಡಿದರು. ನಂತರ ಯಡಿಯೂರಪ್ಪನವರು ರೂಂಗೆ ನೇರವಾಗಿ ತೆರಳಿದರು. ಹೋಟೆಲ್ ಮುಂದೆ ಕಾರ್ಯಕರ್ತರು ಗಲಾಟೆ ನಡೆಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌