ಆ್ಯಪ್ನಗರ

Kerala Assembly election 2021: ಕೇರಳ ವಿಧಾನಸಭಾ ಚುನಾವಣೆಯ ವೇಳಾಪಟ್ಟಿ ಹೀಗಿದೆ

ಒಟ್ಟು 140 ವಿಧಾನಸಭಾ ಕ್ಷೇತ್ರಗಳು ಇರುವ ಕೇರಳದಲ್ಲಿ ಸರಳ ಬಹುಮತಕ್ಕೆ 71 ಸ್ಥಾನಗಳನ್ನು ಗೆಲ್ಲಬೇಕು. ಕಳೆದ ಚುನಾವಣೆಯಲ್ಲಿ ಎಲ್‌ಡಿಎಫ್‌ 91 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಅಧಿಕಾರ ಪಡೆದಿತ್ತು. ಈ ಬಾರಿ ಜಿದ್ದಾ ಜಿದ್ದಿನ ಕಣ ಏರ್ಪಟ್ಟಿದ್ದು, ಮಲಯಾಳಿ ಮತದಾರ ಯಾರ ಪರ ವಾಲುತ್ತಾನೆ ಎಂದು ಕಾದು ನೋಡಬೇಕು.​​

Vijaya Karnataka Web 12 Mar 2021, 10:23 pm
ತಿರುವನಂತಪುರಂ: ಕೇರಳ ವಿಧಾನಭೆಗೆ ಚುನಾವಣೆ ನಿಗದಿಯಾಗಿದ್ದು ಏಪ್ರಿಲ್‌ ತಿಂಗಳಿನಲ್ಲಿ ಮತದಾನ ನಡೆಯಲಿದೆ. ಎಡಪಕ್ಷಗಳು ಹಾಗೂ ಕಾಂಗ್ರೆಸ್‌ ನೇತೃತ್ವದ ಮೈತ್ರಿಕೂಟ ಇಲ್ಲಿ ಪ್ರಬಲವಾಗಿದ್ದು, ಈ ಬಾರಿ ಬೇರೂರಲು ಬಿಜೆಪಿ ಅವಿರತ ಪ್ರಯತ್ನ ನಡೆಸುತ್ತಿದೆ.
Vijaya Karnataka Web Kerala minister regrets Sabarimala incidents


ಒಟ್ಟು 140 ವಿಧಾನಸಭಾ ಕ್ಷೇತ್ರಗಳು ಇರುವ ಕೇರಳದಲ್ಲಿ ಸರಳ ಬಹುಮತಕ್ಕೆ 71 ಸ್ಥಾನಗಳನ್ನು ಗೆಲ್ಲಬೇಕು. ಕಳೆದ ಚುನಾವಣೆಯಲ್ಲಿ ಎಲ್‌ಡಿಎಫ್‌ 91 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಅಧಿಕಾರ ಪಡೆದಿತ್ತು. ಈ ಬಾರಿ ಜಿದ್ದಾ ಜಿದ್ದಿನ ಕಣ ಏರ್ಪಟ್ಟಿದ್ದು, ಮಲಯಾಳಿ ಮತದಾರ ಯಾರ ಪರ ವಾಲುತ್ತಾನೆ ಎಂದು ಕಾದು ನೋಡಬೇಕು.

ಕೇರಳ ವಿಧಾನಸಭೆ ಚುನಾವಣೆಗೆ ಮಾರ್ಚ್‌ 12 ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಮಾರ್ಚ್‌ 19 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ.

ಮಾರ್ಚ್‌ 20 ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನಾಮಪತ್ರ ವಾಪಸ್‌ ಪಡೆಯಲು ಮಾರ್ಚ್‌ 22 ಕೊನೆಯ ದಿನ.

ಏಪ್ರಿಲ್‌ 6 ರಂದು ಎಲ್ಲಾ ವಿಧಾನಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಮೇ 2 ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ.

ಕೇರಳ ವಿಧಾನಸಭೆ ಚುನಾವಣೆ ವೇಳಾಪಟ್ಟಿ

ನಾಮಪತ್ರ ಸಲ್ಲಿಕೆ ಆರಂಭ
ಮಾರ್ಚ್‌ 12
ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ
ಮಾರ್ಚ್‌ 19
ನಾಮಪತ್ರ ಪರಿಶೀಲನೆ
ಮಾರ್ಚ್‌ 20
ನಾಮಪತ್ರ ವಾಪಸ್‌ ಪಡೆಯಲು ಕೊನೆಯ ದಿನ
ಮಾರ್ಚ್‌ 22
ಮತದಾನ ನಡೆಯುವ ದಿನ
ಏಪ್ರಿಲ್‌ 6
ಮತ ಎಣಿಕೆ ನಡೆಯುವ ದಿನಮೇ 2

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ