ಆ್ಯಪ್ನಗರ

ಲೋಕ ಸಮರದ ಬಳಿಕ ಉಪಸಮರ: ಖಾಸಗಿ ಹೋಟೆಲ್‌ನಲ್ಲಿ 'ದೋಸ್ತಿ'ಗಳ ಮಹತ್ವದ ಸಭೆ

ಅತೃಪ್ತ ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ರಾಜೀನಾಮೆ, ಕೆಲವು ಶಾಸಕರ ಬಂಡಾಯ, ಬಿಜೆಪಿಯ ಆಪರೇಷನ್ ಕಮಲ, ಲೋಕಸಭಾ ಚುನಾವಣೆ ಕ್ಷೇತ್ರವಾರು ಫಲಿತಾಂಶ, ಆಪರೇಷನ್ ಕಮಲ ತಡೆಯಲು ಮಾಡಿಕೊಳ್ಳಬೇಕಾದ ತಂತ್ರಗಳು ಹಾಗೂ ಉಪ ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಮಾಡಿಕೊಳ್ಳಬೇಕಾದ ತಂತ್ರಗಳ ಬಗ್ಗೆ ಮಹತ್ವದ ಚರ್ಚೆ ನಡೆಯಿತು.

Vijaya Karnataka Web 28 Apr 2019, 4:04 pm
ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆ ಮುಗಿದ ಬಳಿಕ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರಕಾರದ ಮೈತ್ರಿ ಸಭೆ ಖಾಸಗಿ ಹೋಟೆಲ್‌ನಲ್ಲಿ ಇಂದು ನಡೆಯಿತು. ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್‌ ಭೇಟಿಯಾಗಿ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚಿಸಿದರು.
Vijaya Karnataka Web HDK-KCV


ಸಭೆಯಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೂಡ ಹಾಜರಿದ್ದರು.

ಅತೃಪ್ತ ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ರಾಜೀನಾಮೆ, ಕೆಲವು ಶಾಸಕರ ಬಂಡಾಯ, ಬಿಜೆಪಿಯ ಆಪರೇಷನ್ ಕಮಲ, ಲೋಕಸಭಾ ಚುನಾವಣೆ ಕ್ಷೇತ್ರವಾರು ಫಲಿತಾಂಶ, ಆಪರೇಷನ್ ಕಮಲ ತಡೆಯಲು ಮಾಡಿಕೊಳ್ಳಬೇಕಾದ ತಂತ್ರಗಳು ಹಾಗೂ ಉಪ ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಮಾಡಿಕೊಳ್ಳಬೇಕಾದ ತಂತ್ರಗಳ ಬಗ್ಗೆ ಮಹತ್ವದ ಚರ್ಚೆ ನಡೆಯಿತು.

ಅಂಡರ್ ಕರೆಂಟ್ ಕಾಂಗ್ರೆಸ್ ಪರವಿದೆ, 20 ಸೀಟು ಗ್ಯಾರಂಟಿ: ದಿನೇಶ್ ಗುಂಡೂರಾವ್


ಅಲ್ಲದೆ ಚಿಂಚೋಳಿ, ಕುಂದಗೋಳ ವಿಧಾನಸಭೆ ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆಯಲ್ಲಿ ದೋಸ್ತಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಕಾರ್ಯತಂತ್ರದ ಬಗ್ಗೆಯೂ ಚರ್ಚೆ ನಡೆಯಿತು.

ಸಚಿವರು, ಶಾಸಕರಿಗೆ ಹೊಣೆಗಾರಿಕೆ ಹಂಚಿದ ವೇಣುಗೋಪಾಲ್, ಜಾತಿವಾರು ಸಚಿವರು, ಶಾಸಕರಿಗೆ ಜವಾಬ್ದಾರಿ ವಹಿಸಿಕೊಟ್ಟರು.

ಕುಂದಗೋಳದಲ್ಲಿ ಕುರುಬ,ಲಿಂಗಾಯತರು ಹೆಚ್ಚಿದ್ದಾರೆ. ಹೀಗಾಗಿ ಲಿಂಗಾಯತ, ಕುರುಬ ಸಚಿವರಿಗೆ ಉಸ್ತುವಾರಿ ವಹಿಸಲಾಗಿದೆ. ಎಂ.ಟಿ.ಬಿ ನಾಗರಾಜು, ಶಿವಾನಂದ ಪಾಟೀಲ್, ಎಂ.ಬಿ. ಪಾಟೀಲರಿಗೆ ಕುಂದಗೋಳದ ಜವಾಬ್ದಾರಿ ವಹಿಸಲಾಗಿದೆ.

ಲಂಬಾಣಿ, ದಲಿತರು ಹೆಚ್ಚಿರುವ ಚಿಂಚೋಳಿಯಲ್ಲಿ ಅದೇ ಸಮುದಾಯದ ಪ್ರಿಯಾಂಕ್ ಖರ್ಗೆ, ರಾಜಶೇಖರ ಪಾಟೀಲ್‌ಗೆ ಜವಾಬ್ದಾರಿ ವಹಿಸಲಾಗಿದೆ.

ರಹೀಂಖಾನ್, ಪಿ.ಟಿ ಪರಮೇಶ್ವರ್ ನಾಯ್ಕಗೆ ಹೊಣೆ ವಹಿಸಲಾಗಿದ್ದು, ಜಿಲ್ಲಾ ಪಂಚಾಯತ್ ಗೆ ಒಬ್ಬ ಸಚಿವರಿಗೆ ಜವಾಬ್ದಾರಿ ನೀಡಲಾಗಿದೆ.

ಇಡೀ ಕುಂದಗೋಳದ ಜವಾಬ್ದಾರಿಯನ್ನು ಸಚಿವ ಡಿಕೆ ಶಿವಕುಮಾರ್ ಹೆಗಲಿಗೆ ಹಾಕಲಾಗಿದೆ. ಚಿಂಚೋಳಿಯ ಸಂಪೂರ್ಣ ಜವಾವ್ದಾರಿಯನ್ನು ಡಿಸಿಎಂ ಪರಮೇಶ್ವರ್‌ಗೆ ವಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ