ಆ್ಯಪ್ನಗರ

'ಆಪರೇಶನ್ ಕಮಲಕ್ಕೆ' ತಾತ್ಕಾಲಿಕ ಲಗಾಮು; ದೋಸ್ತಿಗಳಿಗೆ ಸದ್ಯ ನಿರಾಳ

ಮಧ್ಯಪ್ರದೇಶ ಕಾಂಗ್ರೆಸ್ ಸರಕಾರವನ್ನು ಉರುಳಿಸುವ ಕಾರ್ಯಾಚರಣೆಯ ಫಲಿತಾಂಶ ದೊರೆಯುವ ವರೆಗೂ ಕಾಯುವಂತೆ ಪಕ್ಷದ ಕೇಂದ್ರ ನಾಯಕತ್ವ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರಿಗೆ ಸೂಚಿಸಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಮತಗಟ್ಟೆ ಸಮೀಕ್ಷೆಗಳ ಪೂರಕ ಭವಿಷ್ಯದಿಂದ ಉತ್ತೇಜಿತರಾದ ಯಡಿಯೂರಪ್ಪ, ರಾಜ್ಯದ ದೋಸ್ತಿ ಸರಕಾರವನ್ನು ಉರುಳಿಸುವ ನಿಟ್ಟಿನಲ್ಲಿ ಹೊಸದಾಗಿ ಪ್ರಯತ್ನಗಳನ್ನು ಆರಂಭಿಸಿದ್ದರು. ಸದ್ಯಕ್ಕೆ ಈ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವಂತೆ ಅವರಿಗೆ ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.

TIMESOFINDIA.COM 22 May 2019, 5:32 pm
ಬೆಂಗಳೂರು: ರಾಜ್ಯದ ದೋಸ್ತಿ ಸರಕಾರವನ್ನು ಉರುಳಿಸುವ 'ಆಪರೇಷನ್ ಕಮಲ' ಕಾರ್ಯಾಚರಣೆಯನ್ನು ಬಿಜೆಪಿ 'ತಾತ್ಕಾಲಿಕವಾಗಿ ಕೈಬಿಟ್ಟಿದ್ದು' ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ನಿಟ್ಟುಸಿರು ಬಿಡುವಂತಾಗಿದೆ.
Vijaya Karnataka Web BSY-HDK-Siddu


ಮಧ್ಯಪ್ರದೇಶ ಕಾಂಗ್ರೆಸ್ ಸರಕಾರವನ್ನು ಉರುಳಿಸುವ ಕಾರ್ಯಾಚರಣೆಯ ಫಲಿತಾಂಶ ದೊರೆಯುವ ವರೆಗೂ ಕಾಯುವಂತೆ ಪಕ್ಷದ ಕೇಂದ್ರ ನಾಯಕತ್ವ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರಿಗೆ ಸೂಚಿಸಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಮತಗಟ್ಟೆ ಸಮೀಕ್ಷೆಗಳ ಪೂರಕ ಭವಿಷ್ಯದಿಂದ ಉತ್ತೇಜಿತರಾದ ಯಡಿಯೂರಪ್ಪ, ರಾಜ್ಯದ ದೋಸ್ತಿ ಸರಕಾರವನ್ನು ಉರುಳಿಸುವ ನಿಟ್ಟಿನಲ್ಲಿ ಹೊಸದಾಗಿ ಪ್ರಯತ್ನಗಳನ್ನು ಆರಂಭಿಸಿದ್ದರು. ಸದ್ಯಕ್ಕೆ ಈ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವಂತೆ ಅವರಿಗೆ ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.

ಪಕ್ಷದ ಆಂತರಿಕ ಮೂಲಗಳ ಪ್ರಕಾರ, 10 ಶಾಸಕರು (ಕಾಂಗ್ರೆಸ್‌ನ 7 ಮತ್ತು ಜೆಡಿಎಸ್‌ನ 3) ಮೇ 23ರಂದು ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ರಾಜೀನಾಮೆ ನೀಡಿ ಬಿಜೆಪಿ ಸೇರಲು ಸಜ್ಜಾಗಿದ್ದರು. ವಿಳಂಬ ಮಾಡಿದಷ್ಟೂ ತಮ್ಮ ಗೆಲುವಿನ ಸಾಧ್ಯತೆ ಕ್ಷೀಣವಾಗುತ್ತದೆ ಎಂಬ ಆತಂಕ ಅವರದ್ದು ಎನ್ನಲಾಗಿದೆ.

ಕೇಂದ್ರದಲ್ಲಿ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಯಡಿಯೂರಪ್ಪ ಅವರ ಸ್ಥಾನಕ್ಕೆ ನೂತನ ಪಕ್ಷಾಧ್ಯಕ್ಷರನ್ನು ನೇಮಿಸಲಾಗುತ್ತದೆ ಎಂಬ ವದಂತಿಗಳೂ ಕೆಲವು ಶಾಕಸರಿಗೆ ಆತಂಕ ಮೂಡಿಸಿವೆ ಎನ್ನಲಾಗಿದೆ.

ಹಾಗಿದ್ದರೂ ಯಡಿಯೂರಪ್ಪ ಅವರ ಆಪ್ತ ಮೂಲಗಳು ಈ ವದಂತಿಗಳನ್ನು ನಿರಾಕರಿಸಿವೆ. 'ಫಲಿತಾಂಶ ಪ್ರಕಟವಾದ ಬಳಿಕ ಏನಾಗುತ್ತದೆ ಎಂಬುದನ್ನು ನೀವೇ ಕಾದು ನೋಡಿ' ಎಂದು ಆ ಮೂಲಗಳು ಹೇಳಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ