ಆ್ಯಪ್ನಗರ

ಮಂಡ್ಯ ಜೆಡಿಎಸ್‌ ನಾಯಕರ ಕಿರುಕುಳ ಸಹಿಸಲಸಾಧ್ಯ, ಬೀದಿಗಿಳಿದು ಪ್ರತಿಭಟನೆ ಮಾಡ್ತೀವಿ: ಚಲುವರಾಯಸ್ವಾಮಿ

ಸಿಎಂ ಬಳಿ ನಾವೇನು ಕೆಲಸ ಆಗಬೇಕೆಂದು ಕೇಳಲ್ಲ. ಸ್ಥಳೀಯ ಸಂಸ್ಥೆ ಚುನಾವಣೆ ಮುಗಿದ ಬಳಿಕ ಮಂಡ್ಯ ಕಾಂಗ್ರೆಸ್ಸಿಗರು ಸಭೆ ನಡೆಸ್ತೀವಿ. ಗುಂಡೂರಾವ್, ಸಿದ್ದರಾಮಯ್ಯ, ಪರಮೇಶ್ವರ್ ಜತೆ ಮಾತನಾಡಿ ಮಂಡ್ಯದ ಜೆಡಿಎಸ್‌ನವರು ನೀಡುತ್ತಿರುವ ಕಿರುಕುಳದ ಬಗ್ಗೆ ದೂರು ಸಲ್ಲಿಸುತ್ತೇವೆ

Vijaya Karnataka Web 27 May 2019, 1:38 pm
ಮಂಡ್ಯ: ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿ ಮುಂದುವರಿಯಲಿ ಎಂದು ಕಾಂಗ್ರೆಸ್ ವರಿಷ್ಠ ನಾಯಕರು ಹೇಳಿದ್ದಾರೆ
Vijaya Karnataka Web ಚಲುವರಾಯಸ್ವಾಮಿ
ಚಲುವರಾಯಸ್ವಾಮಿ


. ಆದರೆ ಇಲ್ಲಿ ಪೊಲೀಸ್‌ ವರಿಷ್ಠಾಧಿಕಾರಿಗಳಿಂದ ನಿರಂತರವಾಗಿ ಕಾಂಗ್ರೆಸ್ಸಿಗರನ್ನು ಟಾರ್ಗೆಟ್ ಮಾಡಲಾಗುತ್ತಿದೆ.

ಇದು ಹೀಗೆ ಮುಂದುವರಿದರೆ ನಾವು ಬೀದಿಗಿಳಿದು ಹೋರಾಟ ಮಾಡ್ತೀವಿ ಎಂದು ಮಾಜಿ ಸಚಿವ ಎನ್‌ ಚಲುವರಾಯಸ್ವಾಮಿ ನೇರವಾಗಿ ಎಚ್ಚರಿಕೆ ನೀಡಿದ್ದಾರೆ.

ಮಂಡ್ಯದಲ್ಲಿ ಮಾಜಿ ಸಚಿವ ಚಲುವರಾಯಸ್ವಾಮಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಕುಮಾರಸ್ವಾಮಿ ಮುಂದುವರೆಯಲಿ ಎಂದು ಕಾಂಗ್ರೆಸ್ ಹೇಳಿರಬಹುದು. ಆದರೆ ಸಿಎಂ ಬಳಿ ನಾವೇನು ಕೆಲಸ ಆಗಬೇಕೆಂದು ಕೇಳಲ್ಲ. ಸ್ಥಳೀಯ ಸಂಸ್ಥೆ ಚುನಾವಣೆ ಮುಗಿದ ಬಳಿಕ ಮಂಡ್ಯ ಕಾಂಗ್ರೆಸ್ಸಿಗರು ಸಭೆ ನಡೆಸ್ತೀವಿ. ಗುಂಡೂರಾವ್, ಸಿದ್ದರಾಮಯ್ಯ, ಪರಮೇಶ್ವರ್ ಜತೆ ಮಾತನಾಡಿ ಮಂಡ್ಯದ ಜೆಡಿಎಸ್‌ನವರು ನೀಡುತ್ತಿರುವ ಕಿರುಕುಳದ ಬಗ್ಗೆ ದೂರು ಸಲ್ಲಿಸುತ್ತೇವೆ ಎಂದರು.

ಜೆಡಿಎಸ್ ಶಾಸಕ ಗೌರಿಶಂಕರ್, ಆನಂದ್ ಆಸ್ನೋಟಿಕರ್ ಮೈತ್ರಿ ಬೇಡ ಎಂದಿದ್ದಾರೆ. ಅವರಿಗೆ ಮೈತ್ರಿ ಬೇಕಾಗಿಲ್ಲ ಎಂದು ಚಲುವರಾಯಸ್ವಾಮಿ ಹೇಳಿದರು.

ಕಾಂಗ್ರೆಸ್ ಮುಖಂಡರ ಉಚ್ಚಾಟನೆಯನ್ನು ವಾಪಸ್ ಪಡೆಯಬೇಕೆಂದು ಸಿದ್ದರಾಮಯ್ಯರನ್ನು ಮನವಿ ಮಾಡ್ತೀನಿ. ಮೋದಿ ಪ್ರಧಾನಿ ಅದ್ರೆ ರಾಜಕೀಯ ನಿವೃತ್ತಿ ಪಡೀತಿನಿ ಅಂತ ಸಚಿವ ರೇವಣ್ಣ ಹೇಳಿದ್ರು. ರಾಜೀನಾಮೆ ಕೊಟ್ಟಿದ್ದಾರಾ ಎಂದು ವ್ಯಂಗ್ಯವಾಡಿದರು.

ನಮ್ಮ ಜಿಲ್ಲೆಯ ಮಂತ್ರಿಗಳು ಎತ್ತರದಲ್ಲಿರೋರು. 40-50 ಸಾವಿರ ಅಂತರದಿಂದ ಗೆದ್ದಿರೋರು. ಅವರ ಬಗ್ಗೆ ಮಾತನಾಡಲು ಆಗಲ್ಲ. ಮೈತ್ರಿ ಅಭ್ಯರ್ಥಿಯನ್ನು ಅವರು ಗೆಲ್ಲಿಸಿಕೊಂಡು ಬರಲು ಆಗಲಿಲ್ಲ ಎಂದು ಚಲುವರಾಯಸ್ವಾಮಿ ಕುಹಕವಾಡಿದರು.

ಸುಮಲತಾ ಬಿಜೆಪಿ ಗೆ ಹೋಗೋದು ಊಹಾಪೋಹ. ಕಾಂಗ್ರೆಸ್‌ಗೆ ಬರುವ ಬಗ್ಗೆ ಗೊತ್ತಿಲ್ಲ. ಅವರೇ ತೀರ್ಮಾನ ಕೈಗೊಳ್ತಾರೆ. ಆದರೆ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯಲ್ಲ ಎಂದು ಚಲುವರಾಯಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ