ಆ್ಯಪ್ನಗರ

ಮಾಧ್ಯಮಗಳಿಗೆ ಬಹಿಷ್ಕಾರ ಹಾಕಿದ ಸಿಎಂ ಕುಮಾರಸ್ವಾಮಿ

ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಲು ನಿರಾಕರಿಸಿದ ಕುಮಾರಸ್ವಾಮಿ, ಮಾಧ್ಯಮಗಳ ಮೇಲೆ ಗರಂ ಆದರು. 'ನಿಮ್ಮಲ್ಲಿನ ಚರ್ಚೆ, ಸುದ್ದಿಗಳಿಂದ ನಾನು ನಿಮಗೆ ಬಹಿಷ್ಕಾರ ಹಾಕಿದ್ದೇನೆ. ಮಾಧ್ಯಮಗಳನ್ನು ಬಹಿಷ್ಕರಿಸುತ್ತೇನೆ (ಐಯಾಮ್ ಬಾಯ್ಕಾಟಿಂಗ್ ಯುವರ್ ಸೆಲ್ಫ್ )' ಎಂದು ಕೋಪದಿಂದ ಸಿಡಿಮಿಡಿಗುಟ್ಟುತ್ತಲೇ ಕುಮಾರಸ್ವಾಮಿ ತೆರಳಿದರು.

Vijaya Karnataka Web 28 Apr 2019, 4:45 pm
ಬೆಂಗಳೂರು: ಲೋಕಸಭೆ ಚುನಾವಣೆ ಬಳಿಕ ವಿಧಾನಸಭೆಯ ಎರಡು ಸ್ಥಾನಗಳಿಗೆ ನಡೆಯಲಿರುವ ಉಪ ಚುನಾವಣೆಗೆ ಕಾರ್ಯತಂತ್ರ ರೂಪಿಸಲು ಕಾಂಗ್ರೆಸ್-ಜೆಡಿಎಸ್ ದೋಸ್ತಿ ಪ್ರಮುಖ ಸಭೆ ಖಾಸಗಿ ಹೋಟೆಲ್‌ನಲ್ಲಿ ಇಂದು ನಡೆಯಿತು. ಸಭೆಯಲ್ಲಿ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಮತ್ತು ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.
Vijaya Karnataka Web HDK new


ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಲು ನಿರಾಕರಿಸಿದ ಕುಮಾರಸ್ವಾಮಿ, ಮಾಧ್ಯಮಗಳ ಮೇಲೆ ಗರಂ ಆದರು. 'ನಿಮ್ಮಲ್ಲಿನ ಚರ್ಚೆ, ಸುದ್ದಿಗಳಿಂದ ನಾನು ನಿಮಗೆ ಬಹಿಷ್ಕಾರ ಹಾಕಿದ್ದೇನೆ. ಮಾಧ್ಯಮಗಳನ್ನು ಬಹಿಷ್ಕರಿಸುತ್ತೇನೆ (ಐಯಾಮ್ ಬಾಯ್ಕಾಟಿಂಗ್ ಯುವರ್ ಸೆಲ್ಫ್ )' ಎಂದು ಕೋಪದಿಂದ ಸಿಡಿಮಿಡಿಯಾಗುತ್ತಲೇ ಕುಮಾರಸ್ವಾಮಿ ತೆರಳಿದರು.

ಅದೇನು ಸ್ಟೋರಿನೋ, ಅದೇನು ಚರ್ಚೆ ಮಾಡ್ತೀರೋ ಮಾಡಿಕೊಳ್ಳಿ. ನಾನು ನಿಮ್ಮ ಜೊತೆ ಮಾತನಾಡಬಾರದು ಎಂದು ತೀರ್ಮಾನ ಮಾಡಿದ್ದೇನೆ. ಏನೇನು ಚರ್ಚೆ ಮಾಡ್ತಿರೋ , ಮಾಡ್ಕೊಳ್ಳಿ ಮಜಾ ಮಾಡಿ ಎಂದು ಹೇಳಿ ಸಿಎಂ ಕುಮಾರಸ್ವಾಮಿ ಹೊರಟು ಹೋದರು.

ಅಂಡರ್ ಕರೆಂಟ್ ಕಾಂಗ್ರೆಸ್ ಪರವಿದೆ, 20 ಸೀಟು ಗ್ಯಾರಂಟಿ: ದಿನೇಶ್ ಗುಂಡೂರಾವ್
ಲೋಕ ಸಮರದ ಬಳಿಕ ಉಪಸಮರ: ಖಾಸಗಿ ಹೋಟೆಲ್‌ನಲ್ಲಿ 'ದೋಸ್ತಿ'ಗಳ ಮಹತ್ವದ ಸಭೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ