ಆ್ಯಪ್ನಗರ

ತಾಯಿ ಚೆನ್ನಮ್ಮ ರಾಜ್ಯಸಭೆಗೆ: ಶೆಟ್ಟರ್ ಹೇಳಿಕೆಗೆ ಸಿಎಂ ಕುಮಾರಸ್ವಾಮಿ ಕಿಡಿಕಿಡಿ

ಪಾಕಿಸ್ತಾನ ಮೇಲೆ‌ ದಾಳಿಯಾದಾಗ ನಾನು ಕಣ್ಣೀರು ಹಾಕಿರಲಿಲ್ಲ. ದೇಶದ ಯುವಕರಿಗೆ ಉದ್ಯೋಗ ಕೊಡುವ ಯೋಗ್ಯತೆ ಇಲ್ಲ. ಸೇನೆಗೆ ಬದುಕು ಕಟ್ಟಿಕೊಳ್ಳಲು ಹೋಗುತ್ತಿದ್ದಾರೆ ಎಂದಿದ್ದೆ ಎಂದು ಕುಮಾರಸ್ವಾಮಿ ವಿವರಣೆ ನೀಡಿದರು.

Vijaya Karnataka Web 19 Apr 2019, 3:49 pm
ಹುಬ್ಬಳ್ಳಿ: ಎಲ್ಲವನ್ನೂ ನಾನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ನನ್ನ ಕುಟುಂಬದ ಬಗ್ಗೆ ಲಘವಾಗಿ ಮಾತನಾಡುತ್ತಿದ್ದಾರೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸಹ ನನ್ನ ತಾಯಿ ಬಗ್ಗೆ ಮಾತನಾಡಿದ್ದಾರೆ. ನನ್ನ ತಾಯಿಯನ್ನ ರಾಜ್ಯಸಭೆಗೆ ಆಯ್ಕೆ ಮಾಡಿ ಎಂದಿದ್ದಾರೆ. ನನ್ನ ತಾಯಿ ವ್ಯಕ್ತಿತ್ವದ ಬಗ್ಗೆ ಶೆಟ್ಟರ್ ತಿಳಿದುಕೊಂಡು ಮಾತನಾಡಲಿ ಎಂದು ಸಿಎಂ ಎಚ್‌ಡಿ ಕುಮಾರಸ್ವಾಮಿ ಮಾರ್ಮಿಕವಾಗಿ ಹೇಳಿದ್ದಾರೆ.
Vijaya Karnataka Web H D Kumaraswamy


ಹುಬ್ಬಳ್ಳಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಇಂದಿನಿಂದ ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಸ ಕೈಗೊಳ್ಳುತ್ತಿದ್ದೇನೆ. ಉತ್ತರ ಕನ್ನಡ, ವಿಜಯಪುರ ಜಿಲ್ಲೆಗಳಲ್ಲಿ ಪ್ರಚಾರ ಮಾಡುತ್ತಿದ್ದೇನೆ ಎಂದು ಮಾಹಿತಿ ನೀಡಿದರು.

ಮೋದಿ ಭಾಷಣದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕುಮಾರಸ್ವಾಮಿ ಪ್ರಧಾನಿ ಹುದ್ದೆಯ ಘನತೆಗೆ ತಕ್ಕನಾಗಿ ಮಾತನಾಡುತ್ತಿಲ್ಲ. ಕರ್ನಾಟಕ ಸರಕಾರ ಅಸಮರ್ಥ ಎಂದು ಕರೆದಿದ್ದಾರೆ. ನಮ್ಮದು ಸಮರ್ಥ ಸರಕಾರ, ಮೋದಿ ಅವರದ್ದು ಅಸಮರ್ಥ ಸರಕಾರ. ರಾಜ್ಯದಲ್ಲಿ ಬರಗಾಲದ ಇದೆ. ಆದರೆ ಕೇಂದ್ರ ಉದ್ಯೋಗ ಖಾತ್ರಿ ಯೋಜನೆಯ ಹಣ ನೀಡಿಲ್ಲ. ರಾಜ್ಯ ಸರಕಾರದ ಉದ್ಯೋಗ ಖಾತ್ರಿಗೆ ಹಣ ನೀಡಿ ಜನರನ್ನು ಗುಳೆ ಹೋಗುವುದುದನ್ನು ತಪ್ಪಿಸಿದ್ದೇನೆ ಎಂದರು.

ಕೇಂದ್ರ ಸರಕಾರ ದಿವಾಳಿ ಸರಕಾರ ಎಂದು ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ಆಯೂಷ್ಮಾನ್‌ ಯೋಜನೆಗೆ ರಾಜ್ಯ ಸರಕಾರದ 9೦೦ ಕೋಟಿ ರೂ. ಖರ್ಚು ಮಾಡುತ್ತಿದೆ. ರಾಜ್ಯ ಸರಕಾರದ ಹಣದಲ್ಲಿ ಕೇಂದ್ರ ಸರಕಾರ ಹೆಸರು ತೆಗೆದುಕೊಳ್ಳುತ್ತಿದೆ ಎಂದು ಆರೋಪಿಸಿದರು.

ಕೃಷ್ಣ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿ ಎಂದು ಸಾಕಷ್ಟು ಸಾರಿ ಮನವಿ ಮಾಡಿದ್ದೆ. ಚುನಾವಣೆ ಬಂದಿರುವುದರಿಂದ ಕೃಷ್ಣ ಮೇಲ್ದಂಡೆ ಯೋಜನೆ ನೆನಪಿಗೆ ಬಂದಿದೆ. ನಾವು ಬಾಲಕೋಟ್ ನೋಡಿಲ್ಲ, ನಾವು ನೋಡಿದ್ದು ಬಾಗಲಕೋಟೆ. ಪಾಕಿಸ್ತಾನಕ್ಕೆ ಹೋದಾಗ ನಿವು ಉಡುಗೊರೆ ತೆಗೆದುಕೊಂಡು ಬಂದ್ರಿ. ಉಡುಗೊರೆ ಕೊಟ್ಟವರಿಗೆ ನಿವು ಏನು ಕೊಟ್ರಿ? ಪಾಕಿಸ್ತಾನ ಮೇಲೆ‌ ದಾಳಿಯಾದಾಗ ನಾನು ಕಣ್ಣೀರು ಹಾಕಿರಲಿಲ್ಲ. ದೇಶದ ಯುವಕರಿಗೆ ಉದ್ಯೋಗ ಕೊಡುವ ಯೋಗ್ಯತೆ ಇಲ್ಲ. ಸೇನೆಗೆ ಬದುಕು ಕಟ್ಟಿಕೊಳ್ಳಲು ಹೋಗುತ್ತಿದ್ದಾರೆ ಎಂದಿದ್ದೆ ಎಂದು ವಿವರಣೆ ನೀಡಿದರು.

ಮೋದಿ, ರಾಜ್ಯ ಸರ್ಕಾರ ಮೇ23 ಪತನವಾಗಲಿದೆ ಎಂದಿದ್ದಾರೆ. ಈ ಹಿಂದೆ ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಗಡುವು ನೀಡಿದ್ದರು. ಈಗ ಪ್ರಧಾನಿಗಳು ಸರ್ಕಾರಕ್ಕೆ ಗಡುವು ನೀಡಿದ್ದಾರೆ. ಪ್ರಧಾನಮಂತ್ರಿಗಳ ತರಹ ನಾನು ಬೊಗಳೆ ಮಾತನಾಡುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ