ಆ್ಯಪ್ನಗರ

ಪ್ರತಾಪ್ ಸಿಂಹ ಪರ ಸ್ಮೃತಿ ಇರಾನಿ ಬಿರುಸಿನ ಪ್ರಚಾರ, ಕಾಂಗ್ರೆಸ್ ವಿರುದ್ಧ ಪ್ರಹಾರ

ಕಾಂಗ್ರೆಸ್ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದ ಇರಾನಿ, ರಾಹುಲ್ ಗಾಂಧಿ ಅವರನ್ನು ಮಾತಿನಲ್ಲೇ ತಿವಿದರು. 'ರಾಹುಲ್ ಗಾಂಧಿ ದೇಶದಲ್ಲಿ ಒಂದೇ ತೆರಿಗೆ ಜಾರಿ ಬಗ್ಗೆ ಹೇಳುತ್ತಾರೆ. ಇದು ಇವರ ವಿಚಿತ್ರ ಆರ್ಥಿಕ‌ ನೀತಿಯಾಗಿದೆ. ಇಂದು ಕಾಂಗ್ರೆಸ್ ಪಕ್ಷದ‌ ಯೋಗ್ಯತೆ ಏನು? ಕಾಂಗ್ರೆಸ್ ಭ್ರಷ್ಟರು ಮೋದಿಗೆ ಭಯಪಟ್ಟಿದ್ದಾರೆ. ದೇಶದಲ್ಲಿ ಒಂದು ಕೋಟಿ ನಕಲಿ ಖಾತೆಗಳಿದ್ದವು. ಕಾಂಗ್ರೆಸ್ ಈ ಖಾತೆಗಳ ಮೂಲಕ‌ ದೇಶ ಲೂಟಿ ಮಾಡುತ್ತಿತ್ತು' ಎಂದು ವಾಗ್ದಾಳಿ ನಡೆಸಿದರು.

Vijaya Karnataka Web 31 Mar 2019, 3:59 pm
ಮಡಿಕೇರಿ: ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಪರವಾಗಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಕೊಡಗು ಜಿಲ್ಲೆಯ ಹಲವೆಡೆ ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡರು.
Vijaya Karnataka Web Smriti Irani

ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪಲುವಿನಲ್ಲಿ ಮಾತನಾಡಿದ ಅವರು, ಸಂಸದ ಪ್ರತಾಪ್ ಸಿಂಹ ಪರ ಭಾಷಣ ಮಾಡಿದರು. 'ಈ ಕ್ಷೇತ್ರದುದ್ದಕ್ಕೂ
ಪ್ರತಾಪ್ ಅವರ ಪ್ರತಾಪ ಪ್ರಕಾಶಿಸುತ್ತಿದೆ. ದೇಶದ ಅಭಿವೃದ್ಧಿ ಬಯಸುವ ಪ್ರತಿಯೊಬ್ಬನೂ ನರೇಂದ್ರ ಮೋದಿ ಅವರು ಪ್ರಧಾನಿಯಾಗುವುದನ್ನು ಬಯಸುತ್ತಾನೆ' ಎಂದು ತಿಳಿಸಿದರು.

ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಅಭಿವೃದ್ಧಿಯಾಗಬೇಕು. ಅಲ್ಲಿಯವರೆಗೂ ಬಿಜೆಪಿ ಕಾರ್ಯಕರ್ತರು ನಿದ್ದೆಮಾಡದೆ ಕೆಲಸ‌ಮಾಡಬೇಕು. ಜನಧನ ಯೋಜನೆಯಡಿ 30 ಕೋಟಿ‌ ಜನರು ಬ್ಯಾಂಕ್ ಖಾತೆ ಹೊಂದಿದ್ದಾರೆ. ಅಭಿವೃದ್ಧಿ ಯೋಜನೆಗಳ ಲಾಭ ನೇರವಾಗಿ ಫಲಾನುಭವಿಗಳಿಗೆ ತಲುಪುತ್ತಿದೆ. ಈ ಹಿಂದೆ ಆಳ್ವಿಕೆ ಮಾಡಿದವರು ಯಾಕೆ ಈ ಯೋಜನೆ ಮಾಡಲಿಲ್ಲ ಎಂದು ಸ್ಮೃತಿ ಇರಾನಿ ಹೇಳಿದರು.

ಕಾಂಗ್ರೆಸ್ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದ ಇರಾನಿ, ರಾಹುಲ್ ಗಾಂಧಿ ಅವರನ್ನು ಮಾತಿನಲ್ಲೇ ತಿವಿದರು. 'ರಾಹುಲ್ ಗಾಂಧಿ ದೇಶದಲ್ಲಿ ಒಂದೇ ತೆರಿಗೆ ಜಾರಿ ಬಗ್ಗೆ ಹೇಳುತ್ತಾರೆ. ಇದು ಇವರ ವಿಚಿತ್ರ ಆರ್ಥಿಕ‌ ನೀತಿಯಾಗಿದೆ. ಇಂದು ಕಾಂಗ್ರೆಸ್ ಪಕ್ಷದ‌ ಯೋಗ್ಯತೆ ಏನು? ಕಾಂಗ್ರೆಸ್ ಭ್ರಷ್ಟರು ಮೋದಿಗೆ ಭಯಪಟ್ಟಿದ್ದಾರೆ. ದೇಶದಲ್ಲಿ ಒಂದು ಕೋಟಿ ನಕಲಿ ಖಾತೆಗಳಿದ್ದವು. ಕಾಂಗ್ರೆಸ್ ಈ ಖಾತೆಗಳ ಮೂಲಕ‌ ದೇಶ ಲೂಟಿ ಮಾಡುತ್ತಿತ್ತು' ಎಂದು ವಾಗ್ದಾಳಿ ನಡೆಸಿದರು.

'ಭ್ರಷ್ಟ ಕಾಂಟ್ರಾಕ್ಟರ್‌ಗಳ ಮೇಲೆ ಐಟಿ ದಾಳಿಯಾದಾಗ ಕಾಂಗ್ರೆಸ್‌ಗೆ ಇನ್ನಿಲ್ಲದ ಭೀತಿಯಾಗುತ್ತಿದೆ. ದೇಶವನ್ನು ಲೂಟಿ ಮಾಡಿದ ಹಣವನ್ನು ಕಾಂಗ್ರೆಸ್ ಪಕ್ಷ ತನ್ನ ಬೊಕ್ಕಸಕ್ಕೆ ಜಮಾ ಮಾಡುತ್ತಿತ್ತು. ಇಂದು ಕಾಂಗ್ರೆಸ್ ಭ್ರಷ್ಟ ಕಾಂಟ್ರಾಕ್ಟರ್‌ಗಳನ್ನು ಸಮರ್ಥಿಸಿ ಮಾತನಾಡುತ್ತಿದೆ' ಎಂದು ಸ್ಮೃತಿ ಇರಾನಿ ಟೀಕಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ