ಆ್ಯಪ್ನಗರ

ಸಮ್ಮಿಶ್ರ ಸರಕಾರ ಬೀಳಲ್ಲ, ಇನ್ನೂ 4 ವರ್ಷ ಉಳಿಯುತ್ತೆ: ಡಿಸಿಎಂ ಪರಮೇಶ್ವರ್‌

ಸಮ್ಮಿಶ್ರ ಸರಕಾರ ಅಭದ್ರವಾಗಿದೆ ಎಂಬ ಹೇಳಿಕೆಗಳು ವಿರೋಧ ಪಕ್ಷಗಳಿಂದ ಬರ್ತಿದೆ, ಈ ಬಗ್ಗೆ ಚರ್ಚೆ ಮಾಡಿದ್ದೇವೆ. ಸರಕಾರ ಮುಂದುವರಿಯುತ್ತದೆ. ಎಲ್ಲ ಶಾಸಕರೂ ನಮ್ಮ ಬೆಂಬಲಕ್ಕಿದ್ದಾರೆ. ಅಭದ್ರತೆ ಇಲ್ಲ. ಹೀಗಾಗಿ ಕುಮಾರಸ್ವಾಮಿ ನೇತೃತ್ವದ ಸರಕಾರ ಮುಂದುವರಿಯುತ್ತದೆ. ರಾಜ್ಯದ ಜನತೆಗೆ ನಿರಾಶೆ ಮಾಡಲ್ಲ ಎಂದು ತೀರ್ಮಾನ ಮಾಡಿದ್ದೇವೆ ಎಂದು ಪರಮೇಶ್ವರ್‌ ನುಡಿದರು.

Vijaya Karnataka Web 24 May 2019, 4:33 pm
ಬೆಂಗಳೂರು: ಈ ಜನಾದೇಶ ಲೋಕಸಭೆಗೆ ಹೊರತು ಇದು ರಾಜ್ಯ ಸರಕಾರದ ಬಗ್ಗೆ ಅಲ್ಲ. ಈ ಹಿನ್ನೆಲೆಯಲ್ಲಿ ನಮ್ಮ ಸರಕಾರ ಬಿದ್ದು ಹೋಗುತ್ತದೆ ಎಂಬ ಪ್ರತಿಪಕ್ಷದ ಹೇಳಿಕೆಗಳಿಗೆ ಅರ್ಥವಿಲ್ಲ ಎಂದು ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಹೇಳಿದರು.

ಲೋಕಸಭೆ ಚುನಾವಣೆ ಫಲಿತಾಂಶದ ಪರಾಮರ್ಶೆ ನಡೆಸಲು ಕರೆಯಲಾದ ಅನೌಪಚಾರಿಕ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಪರಮೇಶ್ವರ್‌ ಮಾತನಾಡಿದರು.

'ನಮ್ಮ ಜತೆಗಿರುವ ಶಾಸಕರೆಲ್ಲರೂ ನಮ್ಮ ಜತೆಗೇ ಇದ್ದಾರೆ. ಬೇರೆ ಪಕ್ಷಗಳಿಗೆ ಹೋಗುವ ಚಿಂತನೆ ಮಾಡಿಲ್ಲ. ಹೀಗಾಗಿ ಸರಕಾರಕ್ಕೆ ಯಾವುದೇ ಅಭದ್ರತೆ ಎದುರಾಗಿಲ್ಲ' ಎಂದು ಪರಮೇಶ್ವರ್‌ ಪ್ರತಿಪಾದಿಸಿದರು.

ಸಮ್ಮಿಶ್ರ ಸರಕಾರ ಸುಭದ್ರ: ಸಿದ್ದರಾಮಯ್ಯ
ಸಮ್ಮಿಶ್ರ ಸರಕಾರ ಅಭದ್ರವಾಗಿದೆ ಎಂಬ ಹೇಳಿಕೆಗಳು ವಿರೋಧ ಪಕ್ಷಗಳಿಂದ ಬರ್ತಿದೆ, ಈ ಬಗ್ಗೆ ಚರ್ಚೆ ಮಾಡಿದ್ದೇವೆ. ಸರಕಾರ ಮುಂದುವರಿಯುತ್ತದೆ. ಎಲ್ಲ ಶಾಸಕರೂ ನಮ್ಮ ಬೆಂಬಲಕ್ಕಿದ್ದಾರೆ. ಅಭದ್ರತೆ ಇಲ್ಲ. ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯ ಕೂಡ ಬೆಳಗಿನ ಸಭೆಯ ವೇಳೆ ಉಪಸ್ಥಿತರಿದ್ದರು. ಸರಕಾರ ಬೀಳೋಕೆ ಬಿಡಲ್ಲ. ಇದು ವಿಪಕ್ಷಗಳ ಷಡ್ಯಂತ್ರ. ಅದಕ್ಕೆ ವಾಕಾಶ ನೀಡಲ್ಲ ಎಂದು ಸಿದ್ದರಾಮಯ್ಯ ಕೂಡ ಹೇಳಿದ್ದಾರೆ. ಹೀಗಾಗಿ ಕುಮಾರಸ್ವಾಮಿ ನೇತೃತ್ವದ ಸರಕಾರ ಮುಂದುವರಿಯುತ್ತದೆ. ರಾಜ್ಯದ ಜನತೆಗೆ ನಿರಾಶೆ ಮಾಡಲ್ಲ ಎಂದು ತೀರ್ಮಾನ ಮಾಡಿದ್ದೇವೆ ಎಂದು ಪರಮೇಶ್ವರ್‌ ನುಡಿದರು.

ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಉಪಸ್ಥಿತರಿದ್ದರು. ಆದರೆ ಯಾವುದೇ ಹೇಳಿಕೆ ನೀಡಲಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ