ಆ್ಯಪ್ನಗರ

ಇದು ಕೇವಲ ಎಕ್ಸಿಟ್‌ ಪೋಲ್‌, ಎಕ್ಸಾಕ್ಟ್‌ ಪೋಲ್‌ ಅಲ್ಲ: ಸಿಎಂ ಕುಮಾರಸ್ವಾಮಿ

ರಾಷ್ಟ್ರದಲ್ಲಿ ಇನ್ನೂ ಮೋದಿ ಅಲೆ ಇದೆ ಎಂಬುದನ್ನು ತೋರ್ಪಡಿಸಲು ಎಕ್ಸಿಟ್‌ ಪೋಲ್‌ ಅನ್ನು ಬಳಕೆ ಮಾಡಲಾಗುತ್ತಿದೆ. ಮೇ 23ರಂದು ಬಿಜೆಪಿಗೆ ಹಿನ್ನಡೆಯಾಗಲಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

Vijaya Karnataka Web 20 May 2019, 1:49 pm
ಬೆಂಗಳೂರು: ಎಕ್ಸಿಟ್‌ ಪೋಲ್‌ ಸಮೀಕ್ಷೆ ಬಗ್ಗೆ ಸರಣಿ ಟ್ವೀಟ್‌ ಮೂಲಕ ಅಭಿಪ್ರಾಯ ವ್ಯಕ್ತ ಪಡಿಸಿರುವ ಸಿಎಂ ಎಚ್‌ಡಿ ಕುಮಾರಸ್ವಾಮಿ, ಇದು ಕೇವಲ ಎಕ್ಸಿಟ್‌ ಪೋಲ್‌, ಎಕ್ಸಾಕ್ಟ್‌ ಪೋಲ್‌ ಅಲ್ಲ. ಮೇ 23ರಂದು ಬಿಜೆಪಿಗೆ ಹಿನ್ನಡೆ ಆಗಲಿದೆ ಎಂದಿದ್ದಾರೆ.
Vijaya Karnataka Web HD Kumaraswamy


ಇವಿಎಂ ಬಗ್ಗೆ ವಿಪಕ್ಷಗಳ ಅನುಮಾನವನ್ನು ಬೆಂಬಲಿಸಿರುವ ಸಿಎಂ ಕುಮಾರಸ್ವಾಮಿ, ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದ ಅಡಿಯಲ್ಲಿ ಇವಿಎಂಗಳ ಕಾರ್ಯದಕ್ಷತೆ ಕುರಿತು ಎಲ್ಲಾ ಪ್ರತಿಪಕ್ಷಗಳು ಕಾಳಜಿ ವ್ಯಕ್ತ ಪಡಿಸುತ್ತಿವೆ. ಸಂಭವನೀಯ ದೋಷಗಳನ್ನು ದೂರ ಮಾಡುವ ಉದ್ದೇಶದಿಂದ ಸಾಂಪ್ರದಾಯಿಕ ಬ್ಯಾಲೆಟ್‌ ಪೇಪರ್‌ ಮತದಾನಕ್ಕಾಗಿ ವಿಪಕ್ಷಗಳು ಸುಪ್ರೀಂ ಕೋರ್ಟ್‌ ಕದವನ್ನು ತಟ್ಟಿವೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಸೇರಿದಂತೆ ವಿಶ್ವದಾದ್ಯಂತ ಸಾಂಪ್ರದಾಯಿಕ ಬ್ಯಾಲೆಟ್‌ ಪೇಪರ್‌ಗಳನ್ನು ಚುನಾವಣೆಗೆ ಅಯ್ಕೆ ಮಾಡಿವೆ ಎಂದು ಟ್ವೀಟ್‌ ಮೂಲಕ ಪ್ರತಿಪಾದಿಸಿದ್ದಾರೆ.

ಮೇ 19ರಂದು ಬಹಿರಂಗಗೊಂಡ ಎಕ್ಸಿಟ್‌ ಪೋಲ್‌ ಸಮೀಕ್ಷೆಗಳು, ಆಡಳಿತ ಪಕ್ಷದಿಂದ ರಾಜಕೀಯ ಲಾಭಕ್ಕಾಗಿ ಇವಿಎಂಗಳ ದುರ್ಬಳ ಮಾಡಿಕೊಂಡಿರುವ ಬಗ್ಗೆ ವಿಪಕ್ಷಗಳು ಗಂಭೀರವಾಗಿ ಚಿಂತಿಸುವಂತೆ ಮಾಡಿವೆ. ರಾಷ್ಟ್ರದಲ್ಲಿ ಇನ್ನೂ ಮೋದಿ ಅಲೆ ಇದೆ ಎಂಬುದನ್ನು ತೋರ್ಪಡಿಸಲು ಎಕ್ಸಿಟ್‌ ಪೋಲ್‌ ಅನ್ನು ಬಳಕೆ ಮಾಡಲಾಗುತ್ತಿದೆ. ಮೇ 23ರಂದು ಬಿಜೆಪಿಗೆ ಹಿನ್ನಡೆಯಾಗಲಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಒಬ್ಬ ನಾಯಕನ ಅಥವಾ ಒಂದು ಪಕ್ಷದ ಓಲೈಕೆಗಾಗಿ ಎಲ್ಲಾ ಎಕ್ಸಿಟ್‌ ಪೋಲ್‌ಗಳು ನಕಲಿ ಸಮೀಕ್ಷೆಗಳನ್ನು ಸೃಷ್ಟಿ ಮಾಡಿವೆ. ಅವುಗಳೇ ಹೇಳುವಂತೆ ಇದು ಕೇವಲ ಎಕ್ಸಿಟ್‌ ಪೋಲ್‌, ಎಕ್ಸಾಕ್ಟ್‌ ಪೋಲ್‌ ಅಲ್ಲ ಎಂದು ಕುಮಾರಸ್ವಾಮಿ ಬಿಜೆಪಿ ಗೆಲುವಿನ ಸಮೀಕ್ಷೆಯನ್ನು ಅಲ್ಲಗಳೆದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ