ಆ್ಯಪ್ನಗರ

ಪಡುವಲಹಿಪ್ಪೆ ಚುನಾವಣೆ ಅಕ್ರಮ ದೂರು: ಜಿಲ್ಲಾಧಿಕಾರಿ ವಿರುದ್ಧ ಎಚ್‌.ಡಿ ರೇವಣ್ಣ ಸಿಡಿಮಿಡಿ

ಚುನಾವಣೆ ನಡೆದು ಒಂದು ವಾರದ ಬಳಿಕ ಅಧಿಕಾರಿಗಳೇ ಹೇಳಿ ದೂರು ಕೊಡಿಸಿದ್ದಾರೆ. ಎರಡೂ ಪಕ್ಷಗಳ ಏಜೆಂಟರನ್ನು ಕರೆಸಿ ಹೇಳಿಕೆ ಪಡೆಯಬೇಕು, ಆದರೆ ಬಿಜೆಪಿ ಏಜೆಂಟರನ್ನು ಮಾತ್ರ ಕರೆಸಿ ವಿಚಾರಣೆ ಮಾಡಿದ್ದಾರೆ ಎಂದು ರೇವಣ್ಣ ಆರೋಪಿಸಿದರು.

Vijaya Karnataka Web 29 Apr 2019, 6:20 pm
ಹಾಸನ: ಹಾಸನ ಲೋಕಸಭಾ ಕ್ಷೇತ್ರದ ಪಡುವಲಹಿಪ್ಪೆಯಲ್ಲಿ ಅಕ್ರಮ ಮತದಾನ ನಡೆದಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಚುನಾವಣೆ ಆಯೋಗಕ್ಕೆ ಬಿಜೆಪಿ ನೀಡಿದ ದೂರಿಗೆ ಸಚಿವ ಎಚ್‌.ಡಿ ರೇವಣ್ಣ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Vijaya Karnataka Web HD Revanna


ಚುನಾವಣೆ ನಡೆದು ಒಂದು ವಾರದ ಬಳಿಕ ಅಧಿಕಾರಿಗಳೇ ಹೇಳಿ ದೂರು ಕೊಡಿಸಿದ್ದಾರೆ. ಎರಡೂ ಪಕ್ಷಗಳ ಏಜೆಂಟರನ್ನು ಕರೆಸಿ ಹೇಳಿಕೆ ಪಡೆಯಬೇಕು, ಆದರೆ ಬಿಜೆಪಿ ಏಜೆಂಟರನ್ನು ಮಾತ್ರ ಕರೆಸಿ ವಿಚಾರಣೆ ಮಾಡಿದ್ದಾರೆ ಎಂದು ರೇವಣ್ಣ ಆರೋಪಿಸಿದರು.

'ನನ್ನ ಮಗ ಸೂರಜ್‌ಗೆ ಮಗಳು ಇದ್ದಾಳೇನ್ರೀ, ನನ್ನ ಮಗನಿಗೆ ಮಕ್ಕಳೇ ಆಗಿಲ್ಲ; ಯಾವುದೋ ಒಂದು ಅಳುವ ಮಗುವನ್ನು ಕರೆಸಿ ಇದು ಸೂರಜ್ ಮಗಳು ಅಂತ ಹೇಳ್ತಾರೆ' ಎಂದು ರೇವಣ್ಣ ಲೇವಡಿ ಮಾಡಿದರು.

'ನಾನು ಕಳ್ಳ ವೋಟು ಹಾಕಿಸಿದ್ದರೆ ಶೇ 86ರಷ್ಟು ಮತದಾನವಾಗಿದ್ದು ಹೇಗೆ? ನಾನ್ಯಾಕೆ ಕಳ್ಳ ವೋಟು ಹಾಕಿಸಲಿ?' ಎಂದು ರೇವಣ್ಣ ಪ್ರಶ್ನಿಸಿದರು.

'ಜಿಲ್ಲಾಧಿಕಾರಿ ವರ್ಗಾವಣೆ ಮಾಡುವಂತೆ ರಾಜ್ಯ ಮುಖ್ಯ ಚುನಾವಣಾ ಆಯೋಗಕ್ಕೆ ಮನವಿ ಮಾಡುತ್ತೇನೆ. ಮತಯಂತ್ರಗಳು ಸ್ಟ್ರಾಂಗ್ ರೂಮಿಗೆ ಹೋದ ಬಳಿಕ ಅಕ್ರಮ ಮತದಾನ ಅಂತ ಹೇಗೆ ಹೇಳುತ್ತಾರೆ? ಎಲ್ಲಾ ಮಾಧ್ಯಮದವರೂ ಮತಗಟ್ಟೆ ಸಮೀಪವೇ ಇದ್ದರು. ನಾನು ಯಾರನ್ನು ದಂಡು ಕಟ್ಟಿಕೊಂಡು ಬಂದಿದ್ದೆ ಸ್ವಾಮೀ?' ಎಂದು ರೇವಣ್ಣ ಪ್ರಶ್ನಿಸಿದರು.

'ಚುನಾವಣೆ ಮುಕ್ತವಾಗಿ ನಡೆದಿದೆ ಎಂದು ಡಿಸಿ ಹೇಳಿದ ಬಳಿಕ ಮತ್ತೆ ಏಕೆ ತನಿಖೆ ಮಾಡಿದರು? ಎರಡು ದಿನ ಯಾಕೆ ಈಗಿನ ಡಿಸಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ರವರು ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಅವರನ್ನು ಮನೆಯಲ್ಲಿಟ್ಟುಕೊಂಡಿದ್ದರು? ಡಿಸಿ ಸರ್ಕಾರಿ ಮನೆಯಲ್ಲಿ ಹಿಂದಿನ ಡಿಸಿಯನ್ನ ಇಟ್ಟುಕೊಂಡಿದ್ದ ಬಗ್ಗೆ ತನಿಖೆಯಾಗಬೇಕು ಎಂದು ರೇವಣ್ಣ ಆಗ್ರಹಿಸಿದರು.

'ಈಗಿನ ಡಿಸಿ ಹಿಂದಿನ ಡಿಸಿಗೆ ಮನೆ ಇಲ್ಲಾ ನಮ್ ಮನೆಯಲ್ಲಿ ಮಲಗಿಸಿಕೊಳ್ಳುತ್ತೀನಿ ಅಂತಾ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ರಾ?' ಎಂದು ಕಿಡಿ ಕಾರಿದ ರೇವಣ್ಣ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ವಿರುದ್ದ ರೇವಣ್ಣ ವಾಗ್ದಾಳಿ ನಡೆಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ