ಆ್ಯಪ್ನಗರ

ದುಡ್ಡು ತಗೊಂಡು ಮಜಾ ಮಾಡೋ ಸಂಸ್ಕೃತಿ ನಮ್ಮದ್ದಲ್ಲ, ಈ ರೀತಿ ಶೋಕಿ ಮಾಡೋರು ಅವರು: ಎಚ್‌ಡಿಕೆ

ಬಿಜೆಪಿ ಬೆಂಬಲಿತ ಅಭ್ಯರ್ಥಿ ಪಕ್ಷೇತರ ಅಭ್ಯರ್ಥಿ. ನಿನ್ನೆ ಹೇಳಿದ ಡೈಲಾಗ್ ನೋಡ್ದೆ, ಅವರ ಮುಖದಲ್ಲಿ ಜಿಲ್ಲೆಯ ರೈತರ ನೋವು ಕಾಣಿಸ್ತಿಲ್ಲ. ಜನರು ಮೈತ್ರಿ ಅಭ್ಯರ್ಥಿ ಯಿಂದ ಹಣ ಪಡೆದು ಮತ ನನಗೆ ಕೊಡಿ ಎಂದು ಹೇಳಿದ್ದಾರೆ. ಇಂಥವರಿಗೆ ನೀವು ವೋಟು ಹಾಕುತ್ತೀರಾ

Vijaya Karnataka Web 27 Mar 2019, 6:31 pm
ಮಂಡ್ಯ: ಜಿ.ಮಾದೇಗೌಡರು ನಮ್ಮ ತಂದೆಯ ಸಮಕಾಲೀನರು. ಅಂದಿನಿಂದಲೂ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ನನಗೆ ಹಲವಾರು ಸಲಹೆ ಕೊಟ್ಟದ್ದಾರೆ. ಮೈತ್ರಿ ಅಭ್ಯರ್ಥಿ ನಿಖಿಲ್ ಕೂಡ ಬಂದು ಹೋಗಿದ್ದಾರೆ. ಮೈತ್ರಿ ಅಭ್ಯರ್ಥಿಗೆ ಸಂಪೂರ್ಣ ಬೆಂಬಲವಿದೆ ಎಂದು ಜಿ. ಮಾದೇಗೌಡರು ತಿಳಿಸಿದ್ದಾರೆ. ನನಗೆ ಜಿಲ್ಲೆಯ ಅಭಿವೃದ್ಧಿ ಮುಖ್ಯ. ಜಿಲ್ಲೆಗೆ ಹಲವಾರು ಯೋಜನೆಗಳನ್ನು ಕೊಡಲಾಗಿದೆ ಎಂದು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
Vijaya Karnataka Web ಕುಮಾರಸ್ವಾಮಿ
ಕುಮಾರಸ್ವಾಮಿ


ಮಂಡ್ಯಕ್ಕೆ ಆಗಮಿಸಿದ ಕುಮಾರಸ್ವಾಮಿ ಕಾಂಗ್ರೆಸ್‌-ಜೆಡಿಎಸ್‌ ನಾಯಕರ ಮನೆಗಳಿಗೆ ಭೇಟಿ ನೀಡಿ ಮಾತುಕತೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಬಿಜೆಪಿ ಬೆಂಬಲಿತ ಅಭ್ಯರ್ಥಿ ಪಕ್ಷೇತರ ಅಭ್ಯರ್ಥಿ. ನಿನ್ನೆ ಹೇಳಿದ ಡೈಲಾಗ್ ನೋಡ್ದೆ, ಅವರ ಮುಖದಲ್ಲಿ ಜಿಲ್ಲೆಯ ರೈತರ ನೋವು ಕಾಣಿಸ್ತಿಲ್ಲ. ಜನರು ಮೈತ್ರಿ ಅಭ್ಯರ್ಥಿ ಯಿಂದ ಹಣ ಪಡೆದು ಮತ ನನಗೆ ಕೊಡಿ ಎಂದು ಹೇಳಿದ್ದಾರೆ. ಇಂಥವರಿಗೆ ನೀವು ವೋಟು ಹಾಕುತ್ತೀರಾ ಎಂದರು.

ಜಿಲ್ಲೆಯಲ್ಲಿ 200ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ ನಾನು ವೈಯುಕ್ತಿಕವಾಗಿ ಹಣ ಸಹಾಯ ಮಾಡಿದ್ದೆ. ಅವರಿಗೆ ಹಣ ನೀಡಿದ್ದು ಅವರ ಕಷ್ಟ ನೋಡಿ, ಶೋಕಿ ಮಾಡಲು ಅಲ್ಲ. ಜಿಲ್ಲೆಯ ಜನರಿಗೆ ಹಣ ತೆಗೆದುಕೊಂಡು ಮಜಾ ಮಾಡಿ ಎಂದಿದ್ದಾರೆ. ಬೇರೆಯವರ ಹಣದಲ್ಲಿ ಮಜಾ ಮಾಡೋರು ಜಿಲ್ಲೆಯ ಜನರಲ್ಲ, ಲಘುವಾಗಿ ಮಾತಾಡೋರು ಬೇರೆಯವರ ಹಣದಲ್ಲಿ ಮಜಾ ಮಾಡೋರು ಎಂದು ಮುಖ್ಯಮಂತ್ರಿ ತಿಳಿಸಿದರು.

ಕೆ.ಆರ್. ಪೇಟೆಯಲ್ಲಿ ಚುನಾವಣೆಗಾಗಿ ಹಣ ಹಂಚಿರೋರು ಪಕ್ಷೇತರ ಅಭ್ಯರ್ಥಿ, ಅವರು ಎಷ್ಟು ಹಣ ಕೊಟ್ಟರು, ಎಲ್ಲಿ ಹಣ ಕೊಟ್ಟರು ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌