ಆ್ಯಪ್ನಗರ

ಬಿಜೆಪಿ ಕಂಪನಿಯಾಗಿರುವ ಆದಾಯ ತೆರಿಗೆ ಇಲಾಖೆ: ಸಿಎಸ್‌ ಪುಟ್ಟರಾಜು

ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಕಳ್ಳರಂತೆ ಗಡಿಯಲ್ಲಿ ನಿಂತು ಪ್ರಚಾರ ಮಾಡಿದ್ದಾರೆ. ನಾವು ಹಾಗಲ್ಲ ನಮ್ಮ ಅಭ್ಯರ್ಥಿ ಪರ ಮತ ಕೇಳಲು ಬಂದಿದ್ದೇವೆ. ಶಿವಮೊಗ್ಗ ಜನ ಬಿಜೆಪಿಯನ್ನು ಬುಡಸಮೇತ ಕಿತ್ತೊಗೆಯ ನಿರ್ಧಾರ ಮಾಡಿದ್ದಾರೆ

Vijaya Karnataka Web 21 Apr 2019, 2:56 pm
ಶಿವಮೊಗ್ಗ: ನಾವು ಅಂದುಕೊಂಡಷ್ಟು ಅಂತರದಲ್ಲಿ ನಿಖಿಲ್‌ ಕುಮಾರಸ್ವಾಮಿ ಗೆಲ್ಲದಿದ್ದರೆ ರಾಜಕೀಯ ಸನ್ಯಾಸತ್ವ ಸ್ವೀಕರಿಸುತ್ತೇನೆ ಎಂದು ಸಚಿವ ಸಿ.ಎಸ್‌. ಪುಟ್ಟರಾಜು ತಿಳಿಸಿದ್ದಾರೆ.
Vijaya Karnataka Web ಸಿಎಸ್‌ ಪುಟ್ಟರಾಜು
ಸಿಎಸ್‌ ಪುಟ್ಟರಾಜು


ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಸಿ.ಎಸ್‌. ಪುಟ್ಟರಾಜು ಮಾತನಾಡಿದರು.

ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಕನಿಷ್ಠ ಎರಡೂವರೆ ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ. ಒಂದುವೇಳೆ, ಅಂತರ ಕಡಿಮೆಯಾದ್ದಲ್ಲಿ ನಾನು ರಾಜಕೀಯ ಸನ್ಯಾಸತ್ವ ಸ್ವೀಕರಿಸುವೆ ಎಂದರು.

ಎಚ್ಎಂಟಿ (ಹಾಸನ, ಮಂಡ್ಯ, ತುಮಕೂರು) ಬಂದ್ ಆಗುವುದಾಗಿ ಹೇಳಿರುವ ಮಾಜಿ ಸಚಿವ ಬಿ.ಸೋಮಶೇಖರ್‌ಗೆ ರಾಜಕೀಯ ನೆಲೆ ಇಲ್ಲ ಎಂದರು.

ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಕಳ್ಳರಂತೆ ಗಡಿಯಲ್ಲಿ ನಿಂತು ಪ್ರಚಾರ ಮಾಡಿದ್ದಾರೆ. ನಾವು ಹಾಗಲ್ಲ ನಮ್ಮ ಅಭ್ಯರ್ಥಿ ಪರ ಮತ ಕೇಳಲು ಬಂದಿದ್ದೇವೆ. ಶಿವಮೊಗ್ಗ ಜನ ಬಿಜೆಪಿಯನ್ನು ಬುಡಸಮೇತ ಕಿತ್ತೊಗೆಯ ನಿರ್ಧಾರ ಮಾಡಿದ್ದಾರೆ ಎಂದರು.

ಎಸ್.ಎಂ.ಕೃಷ್ಣ ಗೆ ಪಾಪ ರಾಜಕೀಯವಾಗಿ ಇಂತಹ ಸ್ಥಿತಿ ಬರಬಾರದಿತ್ತು‌. ಎಲ್ಲವನ್ನು ಕಾಂಗ್ರೆಸ್ ನಲ್ಲಿ ಅನುಭವಿಸಿ ಈಗ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಬಂದಿರುವ ಅವರನ್ನು ಯಾರು ತಾನೇ ನಂಬಲು ಸಾಧ್ಯ? ಐಟಿ ಈಗ ಬಿಜೆಪಿ ಕಂಪನಿಯಾಗಿದೆ. ಇನ್ನೆರಡು ತಿಂಗಳಲ್ಲಿ ನಿವೃತ್ತರಾಗಲಿರುವ ಐಟಿ ಮುಖ್ಯಸ್ಥರಿಗೆ ಬಿಜೆಪಿಯಲ್ಲಿ ಸ್ಥಾನ ನೀಡುವ ಒಪ್ಪಂದವಾಗಿರಬೇಕು. ಅದಕ್ಕೆ ಈ ರೀತಿ ರೇಡ್ ಮಾಡಲಾಗುತ್ತಿದೆ ಎಂದು ಸಚಿವ ಪುಟ್ಟರಾಜು ಆರೋಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ