ಆ್ಯಪ್ನಗರ

ಗೌರಮ್ಮನ ಹಾಗಿದ್ದೋಳು ಈಗ ಬಂದವ್ಳೆ: ಏಕವಚನದಲ್ಲಿ ಟೀಕಿಸಿದ ಜೆಡಿಎಸ್ ಸಂಸದ ಶಿವರಾಮೇಗೌಡ

ದರ್ಶನ್ ಬಂದವನಲ್ಲ, ಅವನೂ ನಾಯ್ಡು, ಸುಮಲತಾ ನಾಯ್ಡು, ರಾಕ್ ಲೈನ್​ ವೆಂಕಟೇಶ್​ ಕೂಡ ನಾಯ್ಡು. ಮಂಡ್ಯವನ್ನು ನಾಯ್ಡುಗಳ ಮಯವಾಗಿ ಮಾಡಲು ಬಿಡಬಾರದು ಎಂದು ಸಂಸದ ಎಲ್​.ಆರ್​. ಶಿವರಾಮೇಗೌಡ ಟೀಕಿಸಿದರು. ಅಂಬರೀಶ್​ ಅವರನ್ನು ನಂಬಿಕೊಂಡೆ 20 ವರ್ಷ ಹಾಳು ಮಾಡ್ಕೊಂಡೆ ನಾನು. 20 ವರ್ಷ ಅಧಿಕಾರ ವಂಚಿತರಾಗಿ ಕೂರಲು ಈ ಪುಣ್ಯಾತ್ಮನ ಪಾರ್ಟಿಗೆ ಕರೆತಂದದ್ದೇ ಕಾರಣ ಎಂದು ಆರೋಪಿಸಿದರು.

Vijaya Karnataka Web 2 Apr 2019, 12:53 pm
ಮಂಡ್ಯ: ಗೌರಮ್ಮನ ಹಾಗಿದ್ದವಳು ಈಗ ಬಂದವ್ಳೆ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಅವರನ್ನು ಏಕವಚನದಲ್ಲಿ ಜೆಡಿಎಸ್‌ ಸಂಸದ ಶಿವರಾಮೇಗೌಡ ಟೀಕಿಸಿದರು.
Vijaya Karnataka Web RL Shivaramegowda


ದರ್ಶನ್ ಬಂದವನಲ್ಲ, ಅವನೂ ನಾಯ್ಡು, ಸುಮಲತಾ ನಾಯ್ಡು, ರಾಕ್ ಲೈನ್ ವೆಂಕಟೇಶ್ ಕೂಡ ನಾಯ್ಡು. ಮಂಡ್ಯವನ್ನು ನಾಯ್ಡುಗಳ ಮಯವಾಗಿ ಮಾಡಲು ಬಿಡಬಾರದು ಎಂದು ಸಂಸದ ಎಲ್.ಆರ್. ಶಿವರಾಮೇಗೌಡ ಟೀಕಿಸಿದರು. ಅಂಬರೀಶ್ ಅವರನ್ನು ನಂಬಿಕೊಂಡೆ 20 ವರ್ಷ ಹಾಳು ಮಾಡ್ಕೊಂಡೆ ನಾನು. 20 ವರ್ಷ ಅಧಿಕಾರ ವಂಚಿತರಾಗಿ ಕೂರಲು ಈ ಪುಣ್ಯಾತ್ಮನ ಪಾರ್ಟಿಗೆ ಕರೆತಂದದ್ದೇ ಕಾರಣ ಎಂದು ಆರೋಪಿಸಿದರು.

ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಷ್ ಜಾತಿ ಕೆಣಕಿದ್ದ ಸಂಸದ ಎಲ್.ಆರ್. ಶಿವರಾಮೇಗೌಡ, ಈಗ ಮತ್ತೆ ನಾಲಿಗೆ ಹರಿಬಿಟ್ಟಿದ್ದು, 'ಆಗ ಗೌರಮ್ಮನ ಹಾಗೆ ಮನೆಯಲ್ಲಿದ್ದು, ಈಗ ಬಂದವಳೆ ಈಯಮ್ಮ' ಎನ್ನುವ ಮೂಲಕ ಮತ್ತೊಂದು ವಿವಾದ ಮೈ ಮೇಲೆ ಎಳೆದುಕೊಂಡಿದ್ದಾರೆ.

ಮದ್ದೂರು ತಾಲೂಕಿನ ಕೊಪ್ಪದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಅಂಬರೀಷ್ ವಸತಿ ಸಚಿವರಾಗಿದ್ದಾಗ ಬಡವರಿಗೆ ಯಾಕೆ ಮನೆ ಕೊಡಿಸಲಿಲ್ಲ ಎಂದು ಪ್ರಶ್ನಿಸಿದರು.

ಸುಮಲತಾರ ಅವರನ್ನು ಏಕವಚನದಲ್ಲಿ ಟೀಕಿಸಿದ ಶಿವರಾಮೇಗೌಡ, 'ಅವನಾರೋ ರಾಕ್ಲೈನ್ ಅಂತೆ. ಆಮೇಲೆ ಅವರನ್ನ ನೋಡಲು ಗಾಂಧಿನಗರಕ್ಕೆ ಹೋಗಬೇಕಾಗುತ್ತೆ. ಹುಡುಕಲು ನೀವೆಲ್ಲಾ ಅಲ್ಲಿಗೆ ಹೋಗ್ತಿರಾ ಹೇಳಿ ಎಂದು ಪ್ರಶ್ನಿಸಿದರು. ಈ ಟೂರಿಂಗ್ ಟಾಕೀಸ್ ಅವರನ್ನು 18ನೇ ತಾರೀಕಿನಂದು ಪ್ಯಾಕ್ ಮಾಡಿಸಿ ಕಳಿಸಬೇಕು. ಶೂಟಿಂಗ್ ಮಾಡಿದ ಎಲ್ಲ ಸಿನಿಮಾಗಳು ಬಿಡುಗಡೆ ಆಗಲ್ಲ. ಇದೂ ಹಾಗೆಯೇ' ಎಂದು ಲೇವಡಿ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ