ಆ್ಯಪ್ನಗರ

ಬಿಜೆಪಿಗೆ ಜೆಡಿಎಸ್‌ ಕಾರ್ಯಕರ್ತರ ಮತ: ಜಿ.ಟಿ‌‌. ದೇವೇಗೌಡರ ಹೇಳಿಕೆ ತಳ್ಳಿ ಹಾಕಿದ ಜಮೀರ್‌ ಅಹ್ಮದ್‌ ಖಾನ್

ಮಂಡ್ಯದಲ್ಲಿ ಕೆಲ ಗೊಂದಲಗಳು ಸೃಷ್ಟಿಯಾಗಿದ್ದವು. ಕಾಂಗ್ರೆಸ್‌ ಕಾರ್ಯಕರ್ತರು ಮನೆ ಬಿಟ್ಟು ಬಂದಿಲ್ಲ. ಮಂಡ್ಯದಲ್ಲಿ ಜೆಡಿಎಸ್‌ನವರ ವರ್ತನೆಯಿಂದ ನಮ್ಮ ಕಾರ್ಯಕರ್ತರು ಬೇಜಾರಾಗಿ ಮನೆಯಲ್ಲಿ ಕುಳಿತಿದ್ದರು ಎಂದು ಸಚಿವ ಜಮೀರ್‌ ಅಹ್ಮದ್ ಖಾನ್ ಹೇಳಿದರು.

Vijaya Karnataka Web 1 May 2019, 3:51 pm
ಹುಬ್ಬಳ್ಳಿ: ಜೆಡಿಎಸ್‌ನವರು ಬಿಜೆಪಿಗೆ ಮತ ಹಾಕಿದ್ದಾರೆ ಎಂದು ಜಿ.ಟಿ‌‌. ದೇವೇಗೌಡ ಹೇಳಿಕೆಯನ್ನು ತಳ್ಳಿಹಾಕಿರುವ ನಾಗರಿಕ ಮತ್ತು ಆಹಾರ ಸರಬರಾಜು ಖಾತೆ ಸಚಿವ ಜಮೀರ್‌ ಅಹ್ಮದ ಖಾನ್‌ ಅವರು, ಆ ರೀತಿಯಲ್ಲಿ ಎಲೆಕ್ಷನ್‌ ಆಗಿಲ್ಲ. ಬಹುಶಃ ಮಂಡ್ಯ ಬಿಟ್ಟರೆ ಬೇರೆಲ್ಲೂ ಈ ತೆರನಾಗಿ ಆಗಿಲ್ಲ ಎಂದು ಸಚಿವ ಜಮೀರ್‌ಅಹ್ಮದ್ ಖಾನ್ ಹೇಳಿಕೆ ನೀಡಿದ್ದಾರೆ.
Vijaya Karnataka Web zameer ahmed khan


ಇನ್ನು, ಮಂಡ್ಯದಲ್ಲಿ ಕೆಲ ಗೊಂದಲಗಳು ಸೃಷ್ಟಿಯಾಗಿದ್ದವು. ಕಾಂಗ್ರೆಸ್‌ ಕಾರ್ಯಕರ್ತರು ಮನೆ ಬಿಟ್ಟು ಬಂದಿಲ್ಲ. ಮಂಡ್ಯದಲ್ಲಿ ಜೆಡಿಎಸ್‌ನವರ ವರ್ತನೆಯಿಂದ ನಮ್ಮ ಕಾರ್ಯಕರ್ತರು ಬೇಜಾರಾಗಿ ಮನೆಯಲ್ಲಿ ಕುಳಿತಿದ್ದರು. ಆದರೆ ಸುಮಲತಾಗೆ ಮತ ಹಾಕಿಲ್ಲ‌ ಎಂದು ಹುಬ್ಬಳ್ಳಿಯಲ್ಲಿ ಸಚಿವ ಜಮೀರ್‌ ಅಹ್ಮದ್ ಖಾನ್ ಹೇಳಿದರು.

ಮಂಡ್ಯ ಹೊರತುಪಡಿಸಿ ಬೇರೆ ಜಿಲ್ಲೆಗಳಲ್ಲಿ ಎಲ್ಲಿಯೂ ಅಂತಹ ಸಮಸ್ಯೆ ಆಗಿಲ್ಲ. ಮಂಡ್ಯದಲ್ಲಿ ಸಿಎಂ ಕುಮಾರಸ್ವಾಮಿಯವರು ಕಾಂಗ್ರೆಸ್‌ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು. ಹಾಗಾಗಿ ಕಾಂಗ್ರೆಸ್‌ನವರು ಬೇಜಾರಾಗಿ ಮನೆಯಲ್ಲಿ ಕುಳಿತಿದ್ದರು. ಈ ಮಧ್ಯೆಯೂ ನಿಖಿಲ್ ಕುಮಾರಸ್ವಾಮಿ ಮೂರು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ಹುಬ್ಬಳ್ಳಿಯಲ್ಲಿ ಸಚಿವ ಜಮೀರ್‌ ಅಹ್ಮದ್ ಖಾನ್ ಹೇಳಿಕೊಂಡಿದ್ದು, ಮೈತ್ರಿಕೂಟವನ್ನು ಸಮರ್ಥಿಸಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌