ಆ್ಯಪ್ನಗರ

ದೇವೇಗೌಡರಿಗೆ 28 ಮಕ್ಕಳಿದ್ದರೆ ಎಲ್ಲರಿಗೂ ಟಿಕೆಟ್‌ ಕೊಡುತ್ತಿದ್ದರು: ಈಶ್ವರಪ್ಪ

ದೇವೇಗೌಡರು ತಮ್ಮ ಮೊಮ್ಮಗನಿಗೆ ಕ್ಷೇತ್ರ ಬಿಟ್ಟು ಅಳುತ್ತಾರೆ. ದೇಶಕ್ಕೆ ಏನೋ ತ್ಯಾಗ ಮಾಡಿದ್ದಾರೆ ಎನ್ನುವಂತೆ ಅಳುತ್ತಾರೆ. ಮೂರು ಅಂಶದೊಂದಿಗೆ ಬಿಜೆಪಿ ಚುನಾವಣೆ ಎದುರಿಸುತ್ತಿದೆ.

Vijaya Karnataka Web 1 Apr 2019, 5:26 pm
ಕೊಪ್ಪಳ: ಮಾಜಿ ಪ್ರಧಾನಿ ದೇವೇಗೌಡರಿಗೆ 28 ಮಕ್ಕಳಿದ್ದರೆ ಎಲ್ಲ ಕ್ಷೇತ್ರಕ್ಕೂ ಟಿಕೆಟ್ ನೀಡುತ್ತಿದ್ದರು. 14 ಮಕ್ಕಳಿದ್ದರೂ 14 ಸೊಸೆಯಂದಿರು ಸೇರಿ 28 ಕ್ಷೇತ್ರಕ್ಕೆ ಟಿಕೆಟ್ ವಿತರಿಸುತ್ತಿದ್ದರು. ಆದರೆ ಪಾಪ ದೇವೇಗೌಡರಿಗೆ 14 ಮಕ್ಕಳಿಲ್ಲ ಎಂದು ನನಗೆ ನೋವಾಗುತ್ತಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದರು.
Vijaya Karnataka Web ಕೆಎಸ್‌ ಈಶ್ವರಪ್ಪ
ಕೆಎಸ್‌ ಈಶ್ವರಪ್ಪ


ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದರು.

ದೇವೇಗೌಡರು ತಮ್ಮ ಮೊಮ್ಮಗನಿಗೆ ಕ್ಷೇತ್ರ ಬಿಟ್ಟು ಅಳುತ್ತಾರೆ. ದೇಶಕ್ಕೆ ಏನೋ ತ್ಯಾಗ ಮಾಡಿದ್ದಾರೆ ಎನ್ನುವಂತೆ ಅಳುತ್ತಾರೆ. ಮೂರು ಅಂಶದೊಂದಿಗೆ ಬಿಜೆಪಿ ಚುನಾವಣೆ ಎದುರಿಸುತ್ತಿದೆ. ಸಂಘಟನೆ, ರಾಷ್ಟ್ರೀಯತೆ, ಪ್ರಧಾನಿ ನೇತೃತ್ವದಲ್ಲಿ ಚುನಾವಣೆ ಎದರಿಸುತ್ತೇವೆ ಎಂದು ಈಶ್ವರಪ್ಪ ತಿಳಿಸಿದರು.

ನಾನೇನು ಕುರುಬ ಅಲ್ಲವೇ ಅಲ್ಲ, ನಾ‌ನೊಬ್ಬ ಹಿಂದು, ನಾನೊಬ್ಬ ರಾಷ್ಟ್ರೀಯವಾದಿ. ಸಿದ್ದರಾಮಯ್ಯ ಒಬ್ಬ ಜಾತಿವಾದಿಯಾಗಿ ನಮಗೆ ಹೇಳುತ್ತಾರೆ ಎಂದರು.

ನಾನು ಡಿಸಿಎಂ ಆಗಿದ್ದ ವೇಳೆ ಹಿಂದುಳಿದ ವರ್ಗಕ್ಕೆ ಅನುದಾನ ಬಿಡುಗಡೆ ಮಾಡಿದಷ್ಟು ಸಿದ್ದರಾಮಯ್ಯ ಮಾಡಿಲ್ಲ. ಸಿದ್ದರಾಮಯ್ಯ ಕುರುಬರಿಗೆ ಏನು ಮಾಡಿದ್ದಾರೆ. 125 ಕೋಟಿ ಖರ್ಚು ಮಾಡಿ, ಸಿದ್ದರಾಮಯ್ಯ ಜಾತಿ ಗಣತಿ ಮಾಡಿದ್ದು, ವರದಿ ರೆಡಿ ಇದ್ದರೂ ಬಿಡುಗಡೆ ಮಾಡುತ್ತಿಲ್ಲ ಎಂದು ಕೆಎಸ್‌ ಈಶ್ವರಪ್ಪ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ