ಆ್ಯಪ್ನಗರ

ಮಂಡ್ಯದಲ್ಲಿ ಸುಮಾ ಸುನಾಮಿಗೆ ಬೆಂಬಲ: ಕಾಂಗ್ರೆಸ್‌ ವಿರುದ್ಧ ಕುಮಾರಸ್ವಾಮಿ ಕೆಂಡ

ಮಂಡ್ಯದಲ್ಲಿ ಕೆಲವು ಕಾಂಗ್ರೆಸ್‌ ನಾಯಕು ಮುಂದೆ ಹೋಗಿದ್ದಾರೆ. ಸ್ವಾಭಿಮಾನ ಕಳೆದುಕೊಂಡು ನಾನು ಹೋಗಿ ಅವರ ಮುಂದೆ ಕೈ ಚಾಚಲ್ಲ. ನನಗೆ ನನ್ನ ಕಾರ್ಯಕರ್ತರೇ ಬಲ ಎಂದು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ತಿಳಿಸಿದರು.

Vijaya Karnataka Web 21 Mar 2019, 9:52 pm
ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ನಾಮಪತ್ರ ಸಲ್ಲಿಸಿದ ವೇಳೆ ಕಾಂಗ್ರೆಸ್‌ ಬೆಂಬಲ ಹರಿದುಬಂದಿದ್ದು ಕಂಡು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Vijaya Karnataka Web ಕುಮಾರಸ್ವಾಮಿ
ಕುಮಾರಸ್ವಾಮಿ


ಈ ಕುರಿತು ಮಾತನಾಡಿದ ಕುಮಾರಸ್ವಾಮಿ ಮಂಡ್ಯದಲ್ಲಿ ಕೆಲವು ಕಾಂಗ್ರೆಸ್‌ ನಾಯಕು ಮುಂದೆ ಹೋಗಿದ್ದಾರೆ. ಸ್ವಾಭಿಮಾನ ಕಳೆದುಕೊಂಡು ನಾನು ಹೋಗಿ ಅವರ ಮುಂದೆ ಕೈ ಚಾಚಲ್ಲ. ನನಗೆ ನನ್ನ ಕಾರ್ಯಕರ್ತರೇ ಬಲ ಎಂದರು.

ಪುತ್ರ ನಿಖಿಲ್‌ನನ್ನು ಬೆಂಬಲಿಸುವಂತೆ ಕಾಂಗ್ರೆಸ್‌ ನಾಯಕರ ಮುಂದೆ ಅಂಗಾಲಾಚಲ್ಲ. ಮಂಡ್ಯದಲ್ಲಿರುವ ಜೆಡಿಎಸ್‌ ಕೋಟೆಯಲ್ಲಿ ಗೆಲುವು ನಮ್ಮದೇ ಎಂದರು.

ನಿಖಿಲ್‌ ಬೆಂಬಲಕ್ಕೆ ಇಲ್ಲಿನ ಶಾಸಕರು, ಕಾರ್ಯಕರ್ತರು, ಜನರು ಇದ್ದಾರೆ. ನಮ್ಮ ಕುಟುಂಬದ ಮೇಲೆ ಪ್ರೀತಿ ಹೊಂದಿರುವ ಮಂಡ್ಯ ನಾಗರಿಕರು ಕೈ ಬಿಡುವುದಿಲ್ಲ ಎಂಬ ನಂಬಿಕೆ ಇದೆ ಎಂದರು.

ಸುಮಲತಾ ನಾಮಪತ್ರ ವೇಳೆ ಹರಿದು ಬಂದ ಜನಸಾಗರ ಕುರಿತು ಹೆಚ್ಚು ಪ್ರತಿಕ್ರಿಯೆ ನೀಡಲ್ಲ, ಮಾರ್ಚ್‌ 25ರಂದು ನಿಖಿಲ್ ನಾಮಪತ್ರ ಸಲ್ಲಿಸುತ್ತಾನೆ. ಆಗ ನೀವೇ ನೋಡಿ ಎಂದು ಕುಮಾರಸ್ವಾಮಿ ತಿಳಿಸಿದರು.

ಕಾರ್ಯಕರ್ತರಲ್ಲಿ ಗೊಂದಲ ಉಂಟಾಗುತ್ತದೆ ಎಂಬ ಕಾರಣಕ್ಕೆ ಗುರುವಾರ ನಾಮಪತ್ರ ಸಲ್ಲಿಸುವುದನ್ನು ರದ್ದುಪಡಿಸಲಾಗಿದೆ. ನಿಖಿಲ್‌ 25ರಂದು ನಾಮಪತ್ರ ಸಲ್ಲಿಸುತ್ತಾನೆ ಎಂದು ಮುಖ್ಯಮಂತ್ರಿ ಎಚ್‌ಡಿಕೆ ಸ್ಪಷ್ಟಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ