ಆ್ಯಪ್ನಗರ

ಹಿಂದೂ ಧರ್ಮ ಕಾಪಾಡುವವರು ಪ್ರಧಾನಿಯಾಗಲಿ: ಪೇಜಾವರ ಶ್ರೀ

ವ್ಯಾಸರಾಜ ಮಠದ ಪೀಠಾಧಿಪತಿ ವಿದ್ಯಾಶ್ರೀಶ ತೀರ್ಥರು, ಪೇಜಾವರ ಮಠದ ಕಿರಿಯ ಸ್ವಾಮಿ ವಿದ್ಯಾಪ್ರಸನ್ನ ತೀರ್ಥರು ಸೇರಿ ಇತರರು ಇದ್ದರು.

Vijaya Karnataka 25 Mar 2019, 9:38 am
ಗಂಗಾವತಿ: ದೇಶದ ರಕ್ಷಣೆ, ಅಭಿವೃದ್ಧಿಯ ಜತೆಗೆ ಹಿಂದೂ ಧರ್ಮಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವವರನ್ನು ಪ್ರಧಾನಿಯನ್ನಾಗಿ ಮಾಡಬೇಕು ಎಂದು ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥರು ಹೇಳಿದರು.
Vijaya Karnataka Web Pejavara


ತಾಲೂಕಿನ ಆನೆಗೊಂದಿ ಬಳಿಯ ನವಬೃಂದಾವನ ಗಡ್ಡೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕರ್ನಾಟಕ ಅಥವಾ ಬೇರೆ ರಾಜ್ಯ ಆಯ್ಕೆ ಮಾಡಿಕೊಳ್ಳುವುದು ಅವರಿಗೆ ಬಿಟ್ಟ ತೀರ್ಮಾನ. ನಾವು ಯಾವುದೇ ಪಕ್ಷ ಕ್ಕೆ ಸೀಮಿತವಲ್ಲ. ಮಠದ ಭಕ್ತರು, ನಮ್ಮ ಶಿಷ್ಯ ವೃಂದ ಎಲ್ಲ ಪಕ್ಷದಲ್ಲೂ ಇದ್ದಾರೆ. ಸಲಹೆ-ಸೂಚನೆ ಕೇಳಿದ ಶಿಷ್ಯರಿಗೆ ಮಾರ್ಗದರ್ಶನ ನೀಡುತ್ತೇವೆ. ಪ್ರಧಾನಮಂತ್ರಿ ಆಯ್ಕೆ ವಿಚಾರದಲ್ಲಿ ಜನರು ದೇಶದ ಅಭಿವೃದ್ಧಿ ದೃಷ್ಟಿಯಲ್ಲಿಟ್ಟುಕೊಂಡು ಸೂಕ್ತ ನಾಯಕರನ್ನು ಆಯ್ಕೆ ಮಾಡಬೇಕು. ರಾಜಕೀಯ ಮಾಡುವುದು ನನಗೆ ಇಷ್ಟವಿಲ್ಲ. ಚುನಾವಣೆಯಿಂದ ನಾವು ದೂರ. ಸದ್ಯ ಹಿಂದೂ ಧರ್ಮದ ಬಗ್ಗೆ ಪ್ರಚಾರ ಮಾಡುವುದಷ್ಟೇ ನನ್ನ ಕೆಲಸ ಎಂದರು.

ವ್ಯಾಸರಾಜ ಮಠದ ಪೀಠಾಧಿಪತಿ ವಿದ್ಯಾಶ್ರೀಶ ತೀರ್ಥರು, ಪೇಜಾವರ ಮಠದ ಕಿರಿಯ ಸ್ವಾಮಿ ವಿದ್ಯಾಪ್ರಸನ್ನ ತೀರ್ಥರು ಸೇರಿ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ