ಆ್ಯಪ್ನಗರ

ನಿಖಿಲ್ ನಾಮಪತ್ರ ಸರಿಪಡಿಸಲು ಸಿಎಂ ಅಧಿಕಾರ ದುರ್ಬಳಕೆ: ಸುಮಲತಾ ಆರೋಪ

ಸಿಎಂ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನಿಖಿಲ್ ನಾಮಪತ್ರ ಕಾನೂನು ಬದ್ದವಾಗಿಲ್ಲ. ಅದನ್ನ ಸರಿಪಡಿಸಲು ಅಧಿಕಾರಿಗಳ ಮಟ್ಟದಲ್ಲಿ ಪ್ರಯತ್ನ ನಡೆದಿದೆ ಎಂದು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹೆಮ್ಮನಹಳ್ಳಿಯ ಚೌಡೇಶ್ವರಿ ದೇವಿಯ ದರ್ಶನ ಪಡೆದರು.

Vijaya Karnataka Web 29 Mar 2019, 2:17 pm
ಮದ್ದೂರು: ಮಂಡ್ಯ ಲೋಕಸಭೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಹೆಮ್ಮನಹಳ್ಳಿಯ ಚೌಡೇಶ್ವರಿ ದೇವಿಯ ದರ್ಶನ ಪಡೆದರು. ಈ ವೇಳೆ ಮಾತನಾಡಿದ ಸುಮಲತಾ, ''ನಿಖಿಲ್ ನಾಮಪತ್ರ ಗೊಂದಲ ವಿಚಾರದಲ್ಲಿ ಎಲ್ಲಾ ನಿಯಮಗಳನ್ನ ಗಾಳಿಗೆ ತೂರಲಾಗಿದೆ‌'' ಎಂದು ಸಿಎಂ ಕುಮಾರಸ್ವಾಮಿ ವಿರುದ್ಧ ಆರೋಪ ಮಾಡಿದರು.
Vijaya Karnataka Web sumalatha 1


ಐಟಿ ದಾಳಿ ವಿಚಾರವಾಗಿ ಮಾತನಾಡಿದ ಸುಮಲತಾ, ''ನಾನೇನು ಅಧಿಕಾರದಲ್ಲಿಲ್ಲ. ಐಟಿ ಇಲಾಖೆಯಲ್ಲಿ ನಾನೇನು ಆಗಿಲ್ಲ. ಅಂದು ನಾಮಪತ್ರ ಸಲ್ಲಿಕೆ ದಿನ ಅವರು ದುಡ್ಡು ಹಂಚುತ್ತಿದ್ದನ್ನ ನೋಡಿ ಐಟಿಯವರು ದಾಳಿ ಮಾಡಿದ್ದಾರೆ. ಅದಕ್ಕೆ ನಾನು ಹೇಗೆ ಕಾರಣವಾಗ್ತೀನಿ'' ಎಂದು ಕೇಳಿದರು.

ಇನ್ನೊಂದೆಡೆ, ನಿಖಿಲ್ ನಾಮಪತ್ರ ಗೊಂದಲ ಬಗ್ಗೆ ಮಾತನಾಡಿದ ಮಂಡ್ಯ ಲೋಕಸಭೆ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಸುಮಲತಾ, ''ಸಿಎಂ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನಿಖಿಲ್ ನಾಮಪತ್ರ ಕಾನೂನು ಬದ್ದವಾಗಿಲ್ಲ. ಅದನ್ನ ಸರಿಪಡಿಸಲು ಅಧಿಕಾರಿಗಳ ಮಟ್ಟದಲ್ಲಿ ಪ್ರಯತ್ನ ನಡೆದಿದೆ. ನನಗೆ ಬಂದ ಮಾಹಿತಿ ಪ್ರಕಾರ ಸಿ.ಎಂ. ಕುಮಾರಸ್ವಾಮಿ ಜಿಲ್ಲಾಧಿಕಾರಿಯನ್ನ ಮನೆಗೆ ಕರೆಯಿಸಿಕೊಂಡು ಖುದ್ದು ಅವರೇ ಮಾತನಾಡಿದ್ದಾರೆ ಎನ್ನಲಾಗಿದೆ. ಈ ವಿಚಾರದಲ್ಲಿ ನಾವು ನಮ್ಮ ಹೋರಾಟ ಮುಂದುವರೆಸುತ್ತೇವೆ'' ಎಂದು ಸುಮಲತಾ ಹೇಳಿದರು.

ಇನ್ನು, ''ಚುನಾವಣೆ ಅಂತ ಬಂದಮೇಲೆ ಒಬ್ಬರಿಗೊಬ್ಬರು ಮಾತನಾಡುವುದು ಮಾಮೂಲು. ಆದ್ರೆ ಮಹಿಳೆ ಅನ್ನೋದು ನೋಡದೆ ಟಾರ್ಗೆಟ್ ಮಾಡಲಾಗುತ್ತಿದೆ. ಐಟಿ ದಾಳಿ ನನ್ನ ನಿಯಂತ್ರಣದಲ್ಲಿಲ್ಲ‌. ಆ ಇಲಾಖೆಯನ್ನ ನಾನು‌ ಕಂಟ್ರೋಲ್ ಮಾಡ್ತಿದ್ದೀನಾ.? ಐಟಿ ರೇಡ್ ಮಾಡಲು ಮೂರು ತಿಂಗಳಿಂದ ಒಂದು ವರ್ಷದವರೆಗೂ ನಿಗಾ ಇಟ್ಟು ದಾಳಿ ಮಾಡಲಾಗುತ್ತದೆ. ಸಿನಿಮಾ ನಟರ ಮೇಲೆ ದಾಳಿಯಾದಾಗ ಅವರು ಸಹಕಾರ ನೀಡಲಿಲ್ಲವೆ. ನಿಮಗೆ ಮಾತ್ರ ಐಟಿ ರಿಯಾಯಿತಿ ಕೊಡಬೇಕೆ. ಆ ಮಟ್ಟಕ್ಕೆ ನಾನು ಹೋಗಲ್ಲ.
ಆ ದಾರಿಗೆ ನಾನು ಹೋಗಲ್ಲ. ಬೇಕಾದ್ರೆ ಅವರೇ ನನ್ನ‌ ದಾರಿಗೆ ಬರಲಿ'' ಎಂದು ಹೇಳಿದರು.

ಅಲ್ಲದೆ, ''ನಿಖಿಲ್ ನಾಮಪತ್ರ ಗೊಂದಲ ವಿಚಾರದಲ್ಲಿ ಎಲ್ಲಾ ನಿಯಮಗಳನ್ನ ಗಾಳಿಗೆ ತೂರಲಾಗಿದೆ‌. ಅಧಿಕಾರ ದುರುಪಯೋಗ ಪಡಿಸಿಕೊಂಡು ದಬ್ಬಾಳಿಕೆಯಿಂದ ಮುಚ್ಚಿಡುವ ಪ್ರಯತ್ನ ಮಾಡುತ್ತಿರುವ ಇವರು ಐಟಿ ದಾಳಿ ಬಗೆಗೆ ಹೇಗೆ ಮಾತನಾಡ್ತಾರೆ. ಅಭ್ಯರ್ಥಿಯ ನಾಮಪತ್ರವೇ ತಪ್ಪಾಗಿದೆ. ಇಲ್ಲೇ ಅನ್ಯಾಯ ನಡೀತಿದೆ ಎಂದ ಮೇಲೆ ಉಳಿದ ಚುನಾವಣೆ ಇವರು ಹೇಗೆ ಮಾಡ್ತಾರೆ ಅನ್ನೋದು ಊಹೆ ಮಾಡಿಕೊಳ್ಳಬೇಕು'' ಎಂದು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹೆಮ್ಮನಹಳ್ಳಿಯಲ್ಲಿ ಸುಮಲತಾ ಜೆಡಿಎಸ್ ವಿರುದ್ಧ ಆರೋಪ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ