ಆ್ಯಪ್ನಗರ

ಮೈತ್ರಿ ಸರಕಾರ, ನಾಯಕರ ಬಗ್ಗೆ ಯಾರೂ ಮಾತನಾಡಲ್ಲ, ಎಲ್ಲರಿಗೂ ಜ್ಞಾನೋದಯವಾಗಿದೆ: ಜಿಟಿಡಿ

ಮಂಡ್ಯದಲ್ಲಿ ಮೈತ್ರಿನಾಯಕರ ವಾಕ್ಸಮರ ವಿಚಾರ ಈಗ ಮುಗಿದ ಅಧ್ಯಾಯ. ಈಗಾಗಲೇ ಎಲ್ಲವೂ ಮುಗಿದು ಹೋಗಿವೆ. ಮೇ23ರ ಫಲಿತಾಂಶದವರೆಗೂ ಕಾಯಿರಿ. ಯಾರು ಪ್ರಧಾನಿಯಾಗ್ತಾರೆ ಅನ್ನೋದು ಗೊತ್ತಾಗುತ್ತೆ ಎಂದರು.

Vijaya Karnataka Web 14 May 2019, 7:19 pm
ಮಂಡ್ಯ: ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರಕಾರದ ಬಗ್ಗೆ ಹಾಗೂ ನಾಯಕರ ಬಗ್ಗೆ ಯಾವ ನಾಯಕರೂ ಇನ್ನು ಮಾತನಾಡುವುದಿಲ್ಲ. ಎಲ್ಲರಿಗೂ ಜ್ಞಾನೋದಯವಾಗಿದೆ ಎಂದು ಸಚಿವ ಜಿ.ಟಿ. ದೇವೇಗೌಡ ತಿಳಿಸಿದ್ದಾರೆ.
Vijaya Karnataka Web ಜಿಟಿ ದೇವೇಗೌಡ
ಜಿಟಿ ದೇವೇಗೌಡ


ಗಂಜಾಂನಲ್ಲಿ ಸುದ್ದಿಗಾರರೊಂದಿಗೆ ಸಚಿವ ಜಿಟಿ ದೇವೇಗೌಡ ಮಾತನಾಡಿದರು.

ಮೇ 23ರ ನಂತರ ರಾಜ್ಯ ರಾಜಕಾರಣದಲ್ಲಿ ಬದಲಾವಣೆ ಆಗಲ್ಲ. ದೇಶದ ಫಲಿತಾಂಶದ ಬಗ್ಗೆ ಎಲ್ಲರ ಗಮನ ಇರುತ್ತದೆ. ಈ ಫಲಿತಾಂಶದಿಂದ ಏನೂ ಆಗಲ್ಲ. ಕುಮಾರಸ್ವಾಮಿ ಅಧಿಕಾರಕ್ಕೆ ಬಂದಾಗಿನಿಂದಲೂ ಅಧಿಕಾರ ಹೋಗುತ್ತೆ ಅಂತಿದ್ರು. ಅದೆಲ್ಲಾ ಸುಳ್ಳಾಗಿದೆ. ಈಗಲೂ ಹಾಗೇ ಅಂತಿದ್ದಾರೆ ಅದೂ ಸುಳ್ಳಾಗುತ್ತೆ ಎಂದರು.

ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಇನ್ನು ನಾಲ್ಕು ವರ್ಷ ರಾಜ್ಯದ ಸರ್ವತೋಮುಖ ಅಭಿವೃದ್ಧಿ ಮಾಡ್ತಾರೆ. ಮೈತ್ರಿ ಪಕ್ಷದ ಎಲ್ಲಾ ನಾಯಕರು ಒಗ್ಗಟ್ಟಾಗಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಡಿಸಿಎಂ ಆಗಿ ಪರಮೇಶ್ವರ್ ಮಂತ್ರಿಮಂಡಲ ಇರುತ್ತೆ ಎಂದು ಜಿಟಿಡಿ ತಿಳಿಸಿದರು.

ಮಂಡ್ಯದಲ್ಲಿ ಮೈತ್ರಿನಾಯಕರ ವಾಕ್ಸಮರ ವಿಚಾರ ಈಗ ಮುಗಿದ ಅಧ್ಯಾಯ. ಈಗಾಗಲೇ ಎಲ್ಲವೂ ಮುಗಿದು ಹೋಗಿವೆ. ಮೇ23ರ ಫಲಿತಾಂಶದವರೆಗೂ ಕಾಯಿರಿ. ಯಾರು ಪ್ರಧಾನಿಯಾಗ್ತಾರೆ ಅನ್ನೋದು ಗೊತ್ತಾಗುತ್ತೆ ಎಂದರು.

ರಾಜ್ಯದಲ್ಲಿ ಹಾಗೂ ಮಂಡ್ಯದಲ್ಲಿ ನಡೆಯುತ್ತಿರುವ ಮೈತ್ರಿ ನಾಯಕರ ವಾಕ್ಸಮರ ಇಂದಿನಿಂದ ನಿಲ್ಲುತ್ತೆ. ಅವರೆಲ್ಲರಿಗೂ ಜ್ಞಾನೋದಯವಾಗಿದೆ. ಅವರ್ಯಾರು ಇನ್ಮುಂದೆ ಮಾತನಾಡಲ್ಲ. ಎಲ್ಲಾ ಹಿರಿಯುರು ಈಗಾಗಲೇ ಕುಳಿತು ಮಾತನಾಡಿದ್ದಾರೆ. ಎಲ್ಲರೂ ಒಗ್ಗಟ್ಟಾಗಿದ್ದು, ಒಂದೇ ತಟ್ಟೆಯಲ್ಲಿ ಊಟ ಮಾಡುವ ಸನ್ನಿವೇಶವಿದೆ. ಸಣ್ಣ ಪುಟ್ಟ ತಪ್ಪುಗಳನ್ನು ಸರಿಪಡಿಸಿಕೊಂಡುವ ಹೋಗಲಾಗುವುದು ಎಂದು ಜಿಟಿ ದೇವೇಗೌಡ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌