ಆ್ಯಪ್ನಗರ

ಮಂಡ್ಯ: ಪರಸ್ಪರ ಟೀಕಾಸ್ತ್ರ ಆಯ್ತು, ಇದೀಗ ಚಪ್ಪಲಿ ಪಾಲಿಟಿಕ್ಸ್ ಆರಂಭ

ಮಾತಿನ ರಾಜಕೀಯದ ಬೆನ್ನಲ್ಲೇ ಚಪ್ಪಲಿ ರಾಜಕೀಯವೂ ಶುರುವಾಗಿದೆ. ಹೌದು, ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ತಮ್ಮ ಗನ್ ಮ್ಯಾನ್‌ನಿಂದ ಕಾಲಿಗೆ ಚಪ್ಪಲಿ ಹಾಕಿಸಿಕೊಂಡರೆ, ಇತ್ತ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಚಪ್ಪಲಿ ಹಾಕಲು ಬಂದವರನ್ನು ತಡೆದಿದ್ದಾರೆ.

Vijaya Karnataka Web 31 Mar 2019, 6:57 pm
ಮಂಡ್ಯ: ಪರಸ್ಪರ ಟೀಕಾಸ್ತ್ರಗಳನ್ನು ಪ್ರಯೋಗಿಸುತ್ತಿದ್ದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲೀಗ ಚಪ್ಪಲಿ ಪಾಲಿಟಿಕ್ಸ್ ಪ್ರಬಲ ಅಭ್ಯರ್ಥಿಗಳ ವಿರುದ್ಧ ಚಪ್ಪಲಿ ಪಾಲಿಟಿಕ್ಸ್ ಪ್ರಯೋಗ ಮಾಡಲಾಗುತ್ತಿದೆ.

ಸಾವಿನ ರಾಜಕೀಯ, ಮಾತಿನ ರಾಜಕೀಯದ ಬೆನ್ನಲ್ಲೇ ಚಪ್ಪಲಿ ರಾಜಕೀಯವೂ ಶುರುವಾಗಿದೆ. ಹೌದು, ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ತಮ್ಮ ಗನ್ ಮ್ಯಾನ್‌ನಿಂದ ಕಾಲಿಗೆ ಚಪ್ಪಲಿ ಹಾಕಿಸಿಕೊಂಡರೆ, ಇತ್ತ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಚಪ್ಪಲಿ ಹಾಕಲು ಬಂದವರನ್ನು ತಡೆದಿದ್ದಾರೆ.
ಈ ಎರಡೂ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

ವಿಡಿಯೋದಲ್ಲೇನಿದೆ..?

ಮನೆಯಿಂದ ಹೊರಬರುತ್ತಿದ್ದಂತೆಯೇ ಸುಮಲತಾ ಅವರು ತಮ್ಮ ಗನ್ ಮ್ಯಾನ್‌ಗೆ ಕೆಳಗೆ ಏನೋ ತೋರಿಸುವ ಮೂಲಕ ಸೂಚಿಸುತ್ತಾರೆ. ಆಗ ಗನ್ ಮ್ಯಾನ್ ಕೆಳಗೆ ಬಗ್ಗಿ ಸುಮಲತಾ ಕಾಲಿಗೆ ಚಪ್ಪಲಿ ತೊಡಿಸಿದ್ದಾರೆ.

ಇತ್ತ ತನ್ನ ಕಾಲಿಗೆ ಚಪ್ಪಲಿ ತೊಡಿಸಲು ಬಂದ ಕಾರ್ಯಕರ್ತನನ್ನು ಜೆಡಿಎಸ್ ನಿಖಿಲ್ ಕುಮಾರಸ್ವಾಮಿ ತಡೆದಿದ್ದಾರೆ. ಇವರಿಬ್ಬರ ವರ್ತನೆ ಸಾರ್ವಜನಿಕ ವಲಯದಲ್ಲಿ ಚರ್ಚಿತವಾಗುತ್ತಿದೆ. ಕಾಲಿಗೆ ಚಪ್ಪಲಿ ಹಾಕಿಸಿಕೊಂಡ ಸುಮಲತಾ ಬಗ್ಗೆ ಆಕ್ಷೇಪದ ಮಾತುಗಳಿ ಕೇಳಿಬರುತ್ತಿವೆ.

ಕಳೆದ ಮಾರ್ಚ್ 20ರಂದು ಸುಮಲತಾ ತಮ್ಮ ಬೆಂಬಲಿಗ ಸಚ್ಚಿದಾನಂದರ ಮನೆಗೆ ಹೋಗಿದ್ದಾರೆ. ಮಾತುಕತೆ ನಡೆಸಿ ಮನೆಯಿಂದ ಹೊರ ಬಂದ ಸಂದರ್ಭದಲ್ಲಿ ಸುಮಲತಾ ತಮ್ಮ ಗನ್ ಮ್ಯಾನ್ ಕೈಯಲ್ಲಿ ಚಪ್ಪಲಿ ತೊಡಿಸಿಕೊಂಡಿದ್ದಾರೆ.

ಆದರೆ, ವೀಡಿಯದಲ್ಲಿ ಚಪ್ಪಲಿ ತೊಡಿಸುವ ದೃಶ್ಯ ಸೆರೆಯಾಗಿಲ್ಲ. ಆದ್ರೆ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಟ್ರೋಲ್ ಆಗುತ್ತಿದ್ದು, ಸುಮಲತಾ ಅವರು ಚಪ್ಪಲಿಯನ್ನೇ ತೆಗೆಸಿ ಹಾಕಿಸಿಕೊಂಡಿದ್ದಾರೆ. ಇದು ಎಷ್ಟರಮಟ್ಟಿಗೆ ಸ್ವಾಭಿಮಾನ ಎಂದು ಪ್ರಶ್ನೆ ಮಾಡಲಾಗಿದೆ.

ಇನ್ನೊಂದೆಡೆ ಶನಿವಾರ ನಿಖಿಲ್ ಅವರು ಮದ್ದೂರು ಭಾಗದಲ್ಲಿ ಪ್ರಚಾರ ನಡೆಸಿದ ವೇಳೆ ನಡೆದುಕೊಂಡು ಬರುತ್ತಿದ್ದಾಗ ಕಾರ್ಯಕರ್ತರೊಬ್ಬರು ಚಪ್ಪಲಿಯನ್ನು ಹಾಕಲು ಬಂದಿದ್ದಾರೆ. ಆಗ ನಿಖಿಲ್ ಅವರನ್ನು ತಡೆದು ತಾನೇ ಚಪ್ಪಲಿಕೊಂಡು ಅವರನ್ನು ಮುಟ್ಟಿ ನಮಸ್ಕರಿಸಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ