ಆ್ಯಪ್ನಗರ

ಕಾರ್ಯಕರ್ತರು, ನಾಯಕರ ಶ್ರಮದಿಂದ ಗೆಲುವು: ದೇವೇಂದ್ರಪ್ಪ

ರೈತನ ಮಗ, ಜಿಲ್ಲೆಯ ಮಗನನ್ನು ಸಂಸತ್ ಪ್ರವೇಶಿಸಲು ಅವಕಾಶ ಮಾಡಿದ ಜನತೆಗೆ ಧನ್ಯವಾದಗಳು. ಶಾಸಕರಾದ ಶ್ರೀರಾಮುಲು, ಎನ್.ವೈ.ಗೋಪಾಲಕೃಷ್ಣ, ಸೋಮಶೇಖರ್ ರೆಡ್ಡಿ ಸೇರಿ ಅನೇಕ ಮುಖಂಡರು ಪಕ್ಷದ ಗೆಲುವಿಗೆ ಶ್ರಮಿಸಿದ್ದಾರೆ ಎಂದರು.

Vijaya Karnataka Web 23 May 2019, 2:36 pm
ಬಳ್ಳಾರಿ: ಜಿಲ್ಲೆಯ ಕಾರ್ಯಕರ್ತರು, ನಾಯಕರ ಶ್ರಮದಿಂದ ಗೆಲುವು ಸಾಧಿಸಲು ಸಾಧ್ಯವಾಗಿದೆ ಎಂದು ಬಳ್ಳಾರಿಯಲ್ಲಿ ವಿಜಯಮಾಲೆ ಧರಿಸಿರುವ ಬಿಜೆಪಿ ಅಭ್ಯರ್ಥಿ ದೇವೆಂದ್ರಪ್ಪ ಹೇಳಿದ್ದಾರೆ.
Vijaya Karnataka Web BJP- Flag


ರೈತನ ಮಗ, ಜಿಲ್ಲೆಯ ಮಗನನ್ನು ಸಂಸತ್ ಪ್ರವೇಶಿಸಲು ಅವಕಾಶ ಮಾಡಿದ ಜನತೆಗೆ ಧನ್ಯವಾದಗಳು. ಶಾಸಕರಾದ ಶ್ರೀರಾಮುಲು, ಎನ್.ವೈ.ಗೋಪಾಲಕೃಷ್ಣ, ಸೋಮಶೇಖರ್ ರೆಡ್ಡಿ ಸೇರಿ ಅನೇಕ ಮುಖಂಡರು ಪಕ್ಷದ ಗೆಲುವಿಗೆ ಶ್ರಮಿಸಿದ್ದಾರೆ ಎಂದರು.

ಈಗಾಗಲೇ ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿ ನೀರಿನ ತೊಂದರೆ ಉಂಟಾಗಿದೆ. ಮೊದಲ ಆದ್ಯತೆ ಕೆರೆ ತುಂಬಿಸುವ ಮೂಲಕ ಕುಡಿವ ನೀರು ಒದಗಿಸಲಾಗುವುದು. ಪ್ರಧಾನಿಯಾಗಿ ಮೋದಿ ಅಧಿಕಾರ ಸ್ವೀಕರಿಸಲಿದ್ದು, ಅವರ ಕೈ ಹಿಡಿದು ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ತರಲಾಗುವುದು. ದೇಶದಲ್ಲಿ ಮೋದಿ ಅಲೆ ಹಿನ್ನೆಲೆ ಸುಮಾರು 350 ಸ್ಥಾನ ಬಂದಿದೆ ಎಂದರು.

ಸೋಲನ್ನೊಪ್ಪಿಕೊಂಡ ಉಗ್ರಪ್ಪ


ರಾಜ್ಯದಲ್ಲಿ ಮೋದಿ ಅಲೆ ಕೆಲಸ ಮಾಡಿದೆ, ಜನಾದೇಶವನ್ನು ಒಪ್ಪಿಕೊಳ್ಳುತ್ತೇನೆ ಎಂದು ಬಳ್ಳಾರಿಯಲ್ಲಿ ಬಿಜೆಪಿಯಿಂದ ಸೋಲನ್ನುಂಡಿರುವ ಕೈ ಅಭ್ಯರ್ಥಿ ವಿ ಎಸ್ ಉಗ್ರಪ್ಪ ಹೇಳಿದ್ದಾರೆ.

ಉಪ ಚುನಾವಣೆಯಲ್ಲಿ ಗೆದ್ದಿದ್ದ ಉಗ್ರಪ್ಪ

2014ರಲ್ಲಿ ಬಿಜೆಪಿಯ ಶ್ರೀರಾಮುಲು , ಕಾಂಗ್ರೆಸ್‌ನ ಎನ್ ವೈ ಹನುಮಂತಪ್ಪ ಅವರನ್ನು 85, 144 ಮತಗಳ ಅಂತರದಿಂದ ಸೋಲಿಸಿದ್ದರು. ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಶ್ರೀರಾಮುಲು ರಾಜೀನಾಮೆ ನೀಡಿದ್ದರಿಂದ 2018ರಲ್ಲಿ ಉಪ ಚುನಾವಣೆ ನಡೆದಿತ್ತು. ಆಗ ಉಗ್ರಪ್ಪ ಗೆಲುವು ಸಾಧಿಸಿದ್ದರು.

2009

ವಿಜೇತರು ಜೆ - ಶಾಂತಾ ( ಬಿಜೆಪಿ) 4, 02, 215

ಗೆಲುವಿನ ಅಂತರ 2243
ಎಸ್. ಹನುಮಂತಪ್ಪ (ಕಾಂಗ್ರೆಸ್)

2018

ವಿ ಎಸ್ ಉಗ್ರಪ್ಪ (ಕಾಂಗ್ರೆಸ್) 6 28,365

ಗೆಲುವಿನ ಅಂತರ 2,43, 161

ಜೆ ಶಾಂತಾ 3,85, 204

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ