ಆ್ಯಪ್ನಗರ

ನಾನು ಎನ್ನುವುದನ್ನು ಬಿಟ್ಟು ನಾವು ಎನ್ನುವಂತಾಗಲಿ ರಾಜಕಾರಣಿಗಳು: ಮುನಿರತ್ನ

ನಾಯಕರು ನಾನು ಎನ್ನುವುದರ ಬದಲು ನಾವು, ನಮ್ಮದು, ನಮ್ಮ ಕ್ಷೇತ್ರ, ಅಭಿವೃದ್ಧಿ ಎನ್ನುವುದನ್ನು ಜಪ ಮಾಡಿದರೆ ನಿಜಕ್ಕೂ ಜನರ ಮನಸ್ಸಿನಲ್ಲಿ ಉಳಿಯಬಹುದು ಎಂದು ಹೇಳಿದರು.

Vijaya Karnataka Web 23 May 2019, 9:09 pm
ಬೆಂಗಳೂರು: ಇದು ರಾಜಕಾರಣಿಗಳು ಪಾಠ ಕಲಿತುಕೊಳ್ಳುವ ಸಮಯ, ಯಾವುದೇ ನಾಯಕ ನಾನು, ನಾನು ಎಂದುಕೊಂಡಿದ್ದರೆ, ಅವರಿಗೆ ಮತದಾರರೇ ತಕ್ಕ ಪಾಠ ಕಲಿಸುತ್ತಾರೆ ಎಂದು ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ತಿಳಿಸಿದ್ದಾರೆ.
Vijaya Karnataka Web ಮುನಿರತ್ನ
ಮುನಿರತ್ನ


ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟಗೊಂಡ ನಂತರ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮುನಿರತ್ನ ತಮ್ಮ ಅನಿಸಿಕೆ ಹಂಚಿಕೊಂಡರು.

ಈಗಿನ ರಾಜಕೀಯ ಪರಿಸ್ಥಿತಿ ಬೇರೆಯದಾಗಿದೆ. ನಾನು ನಾನು ಎಂದು ಅಂದುಕೊಂಡಿದ್ದರೆ ಅವರಿಗೆ ಜನರೇ ದಾರಿ ತೋರಿಸುತ್ತಾರೆ ಎಂದರು.

ನಾಯಕರು ನಾನು ಎನ್ನುವುದರ ಬದಲು ನಾವು, ನಮ್ಮದು, ನಮ್ಮ ಕ್ಷೇತ್ರ, ಅಭಿವೃದ್ಧಿ ಎನ್ನುವುದನ್ನು ಜಪ ಮಾಡಿದರೆ ನಿಜಕ್ಕೂ ಜನರ ಮನಸ್ಸಿನಲ್ಲಿ ಉಳಿಯಬಹುದು ಎಂದು ಹೇಳಿದರು.

ಇದು ಯಾರಿಗೆ ಅನ್ವಯಿಸುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಮುನಿರತ್ನ, ಈ ರೀತಿಯ ಧೋರಣೆ ಯಾರು ಯಾರು ಅನುಸರಿಸುತ್ತಾರೋ ಅವರಿಗೆ ಗೊತ್ತಾಗುತ್ತದೆ ಬಿಡಿ ಎಂದರು.

ಮಂಡ್ಯದಲ್ಲಿ ನಿಖಿಲ್‌ ಕುಮಾರಸ್ವಾಮಿ ವಿರುದ್ಧವಾಗಿ ಹಲವಾರು ಶಕ್ತಿಗಳು ಕೆಲಸ ಮಾಡಿವೆ. ಅಂತರಂಗ, ಬಹಿರಂಗ ಹಾಗೂ ಹಿತ ಶತ್ರುಗಳು ನಿಖಿಲ್‌ ವಿರುದ್ಧ ಕಾರ್ಯಾಚರಣೆ ನಡೆಸಿರಬಹುದು ಎಂದು ಶಾಸಕ ಮನಿರತ್ನ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌