ಆ್ಯಪ್ನಗರ

ರೈತರನ್ನು ಜೈಲಿಗೆ ಕಳುಹಿಸುವ ಕಾನೂನು ರದ್ದು: ರಾಹುಲ್‌ಗಾಂಧಿ ಭರವಸೆ

ದೇಶದಲ್ಲಿ ನಿರುದ್ಯೋಗ ಸಮಸ್ಯೆ ಪ್ರಮಾಣ ಹಿಂದೆಂದಿಗಿಂತ ಹೆಚ್ಚಳವಾಗಿದೆ. ಕಾಂಗ್ರೆಸ್ ಅಧಿಕಾರ ನಡೆಸಿದ ರಾಜ್ಯಗಳಲ್ಲಿ ರೈತರ ಸಾಲ ಮನ್ನಾ ಮಾಡದಾಗಲೆಲ್ಲ ಮೋದಿ ಹಣ ಎಲ್ಲಿಂದ ಹೊಂದಾಣಿಕೆ ಮಾಡ್ತೀರಿ ಎಂದು ಪ್ರಶ್ನಿಸುತ್ತಾರೆ.

Vijaya Karnataka Web 19 Apr 2019, 5:37 pm
ರಾಯಚೂರು: ದೇಶದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ ರೈತರ ಪಡೆದ ಸಾಲ ವಸೂಲಾತಿಯಾಗದಿದ್ದರೆ ಅವರನ್ನು ಜೈಲಿಗೆ ಕಳಿಸುವ ಕಾನೂನು ತೆಗೆದು ಹಾಕಲಾಗುವುದು ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಭರವಸೆ ನೀಡಿದ್ದಾರೆ.
Vijaya Karnataka Web ರಾಹುಲ್‌ ಗಾಂಧಿ
ರಾಹುಲ್ ಗಾಂಧಿ


ರಾಯಚೂರಿನಲ್ಲಿ ನಡೆದ ಚುನಾವಣೆ ಪ್ರಚಾರ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭಾಷಣ ಮಾಡಿದರು.

ಪ್ರಧಾನಿ ವಿರುದ್ಧ ರಾಹುಲ್ ವಾಗ್ದಾಳಿ ನಡೆಸಿದರು.

ಚೌಕಿದಾರ್ ಚೋರ್ ಹೈ ಎಂದು ಪುನರುಚ್ಚರಿಸಿದ ರಾಹುಲ್‌, ರಫೆಲ್ ಯುದ್ಧ ವಿಮಾನ ಖರೀದಿ ಅಕ್ರಮದಲ್ಲಿ ಮೋದಿ ಶಾಮೀಲಾಗಿದೆ ಎಂದರು.

ದೇಶದಲ್ಲಿ ನಿರುದ್ಯೋಗ ಸಮಸ್ಯೆ ಪ್ರಮಾಣ ಹಿಂದೆಂದಿಗಿಂತ ಹೆಚ್ಚಳವಾಗಿದೆ. ಕಾಂಗ್ರೆಸ್ ಅಧಿಕಾರ ನಡೆಸಿದ ರಾಜ್ಯಗಳಲ್ಲಿ ರೈತರ ಸಾಲ ಮನ್ನಾ ಮಾಡದಾಗಲೆಲ್ಲ ಮೋದಿ ಹಣ ಎಲ್ಲಿಂದ ಹೊಂದಾಣಿಕೆ ಮಾಡ್ತೀರಿ ಎಂದು ಪ್ರಶ್ನಿಸ್ತಾರೆ. ಕಾಂಗ್ರೆಸ್ ಪಕ್ಷವು ಮಧ್ಯಮ ವರ್ಗದವರಿಗೆ ತೆರಿಗೆ ಹೊರಿಸಲ್ಲ. ಆದರೆ ಶ್ರೀಮಂತರಿಂದ ಹಣ ವಸೂಲು ಮಾಡಿ ರೈತರ ಸಾಲದ ಮನ್ನಾಕ್ಕೆ ಹಣ ಹೊಂದಿಸಲಾಗುತ್ತದೆ ಎಂದು ರಾಹುಲ್‌ ಗಾಂಧಿ ಸ್ಪಷ್ಟಪಡಿಸಿದರು.

ಎಲ್ಲಿಯೇ ಹೋಗಿ ಭಾಷಣ ಮಾಡಿದರೂ ನರೇಂದ್ರ ಮೋದಿ ಸುಳ್ಳಿನ ಸರಮಾಲೆ ಪೋಣಿಸುತ್ತಿದ್ದಾರೆ. ದೇಶದಲ್ಲಿ ಉದ್ಯೋಗ ಸೃಷ್ಟಿಯಾಗಿಲ್ಲ, ಜಿಎಸ್‌ಟಿ, ನೋಟ್‌ ಬ್ಯಾನ್‌ನಿಂದ ತೊಂದರೆಯಾಗಿದೆ. ಇದನ್ನು ಪ್ರಶ್ನಿಸಿದೆ ಮೋದಿ ಬಳಿ ಉತ್ತರವೇ ಇಲ್ಲ ಎಂದರು.

ಈ ಚುನಾವಣೆಯಲ್ಲಿ ಮೋದಿ ಭಾಷಣದಲ್ಲಿ ಸರ್ಜಿಕಲ್‌ ಸ್ಟ್ರೈಕ್‌, ಬಾಲಕೋಟ್‌ ವಿಷಯವಿದೆ ಹೊರತು ಬೇರೆ ಯಾವುದೇ ವಿಷಯಗಳಿಲ್ಲ ಎಂದು ರಾಹುಲ್‌ ಗಾಂಧಿ ತಿರುಗೇಟು ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌