ಆ್ಯಪ್ನಗರ

ರಾಹುಲ್ ಗಾಂಧಿ - ದೇವೇಗೌಡ ಬೆಂಗಳೂರು ದೋಸ್ತಿ ಸಮಾವೇಶದಲ್ಲಿ 'ಕರ್ನಾTata' ಬ್ಯಾನರ್

ರಾಹುಲ್ ಗಾಂಧಿ, ದೇವೇಗೌಡ, ರಾಜ್ಯದ ಮುಖ್ಯಮಂತ್ರಿ, ಮಂತ್ರಿ ಮಾಗಧರು ನೆರೆದ ಸಮಾವೇಶದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಹೆಸರಿನಲ್ಲೇ ಅಕ್ಷರ ದೋಷ ನುಸುಳಿರುವುದು ಜನರ ಚರ್ಚೆಯ ವಿಷಯ.

Vijaya Karnataka Web 1 Apr 2019, 2:24 pm
ಬೆಂಗಳೂರು: ರಾಹುಲ್ ಗಾಂಧಿಯಂತಹಾ ರಾಷ್ಟ್ರೀಯ ನಾಯಕ ಹಾಗೂ ಮಾಜಿ ಪ್ರಧಾನಿ ದೇವೇಗೌಡರಂತಹಾ ಹಿರಿಯ ನೇತಾರರು ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯನ್ನು ಮತ್ತಷ್ಟು ಬಲಪಡಿಸಿ, ಬಿಜೆಪಿಗೆ ಸೆಡ್ಡು ಹೊಡೆಯಲು ಭಾನುವಾರ ಬೆಂಗಳೂರಲ್ಲಿ ನಡೆಸಿದ ದೋಸ್ತಿ ಸಮಾವೇಶದ ಬ್ಯಾನರ್ ಇದೀಗ ಎಲ್ಲರ ಚರ್ಚೆಯ ವಸ್ತುವಾಗಿದೆ.
Vijaya Karnataka Web Karnatata says Poster


ವೇದಿಕೆಯ ಹಿಂಭಾಗದ ಬ್ಯಾನರ್‌ನಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ ಎಂದು ಇಂಗ್ಲಿಷಿನಲ್ಲಿ ಬರೆಯುವ ಬದಲಾಗಿ, ಅಕ್ಷರ ದೋಷ ನುಸುಳಿದ್ದು, ಅದರಲ್ಲಿ ಕರ್ನಾಟಕ ಬದಲು ಕರ್ನಾಟಾಟಾ (KARNA'TATA' Pradesh Congress Committee) ಎಂದಾಗಿರುವುದು ಇದೀಗ ಸಾಮಾಜಿಕ ಜಾಲತಾಣದಲ್ಲಿಯೂ ಚರ್ಚೆಯ ವಿಷಯವಾಗಿದೆ.

2019ರ ಲೋಕಸಭಾ ಚುನಾವಣೆಯಲ್ಲಿ ಹೇಗಾದರೂ ಮಾಡಿ ನರೇಂದ್ರ ಮೋದಿ ಮತ್ತು ಬಿಜೆಪಿಯನ್ನು ಸೋಲಿಸಲು ಪಣತೊಟ್ಟಿರುವ ರಾಜ್ಯದ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು, ಇಷ್ಟು ದೊಡ್ಡ ಸಮಾವೇಶದಲ್ಲಿ ಇಂತಹಾ ತಪ್ಪು ನುಸುಳುವುದು ಹೇಗೆ ಸಾಧ್ಯವಾಯಿತು ಎಂಬುದು ಚರ್ಚೆಗೆ ಗ್ರಾಸವೊದಗಿಸಿದೆ.

ಸಂಖ್ಯಾಶಾಸ್ತ್ರದ ಪ್ರಕಾರ ಹೆಸರಿನ ಅಕ್ಷರದಲ್ಲಿ ಬದಲಾವಣೆ ಮಾಡಿಕೊಳ್ಳುವ ಒಲವು ಕೆಲವರಿಗಿರುತ್ತದೆ. ಆದರೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಹೆಸರಿನಲ್ಲಿಯೇ ಇದು ನುಸುಳಿದ್ದಕ್ಕೂ ಸಂಖ್ಯಾಶಾಸ್ತ್ರಕ್ಕೂ ಸಂಬಂಧವಿರಲಾರದು. ರಾಜ್ಯದ ಜನತೆ ಯಾರಿಗೆ ಟಾಟಾ ಹೇಳುತ್ತಾರೆ ಎಂಬುದು ಏಪ್ರಿಲ್ 23ರ ಕುತೂಹಲವಿರಬಹುದೇ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌