ಆ್ಯಪ್ನಗರ

ಢರ್‌ಪೋಕ್‌ ಮೋದಿ, ಢರ್‌ಪೋಕ್‌ ಬಿಜೆಪಿ: ಮತ್ತೆ ಮೋದಿ, ಬಿಜೆಪಿ ಕಾಲೆಳೆದ ರಮ್ಯಾ

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮಾಡಿರುವ ಸುದ್ದಿಗೋಷ್ಠಿಗಳ ಸಂಖ್ಯೆ, ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಸುದ್ದಿಗೋಷ್ಠಿಗಳ ಸಂಖ್ಯೆಯನ್ನು ಹಾಕಿ ಢರ್‌ಪೋಕ್‌ ಮೋದಿ, ಢರ್‌ಪೋಕ್‌ ಬಿಜೆಪಿ ಎಂದು ಕಾಲೆಳೆದಿದ್ದಾರೆ.

Vijaya Karnataka Web 22 Mar 2019, 6:29 pm
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ಟ್ವಿಟರ್ ಮೂಲಕ ಸಮರ ಸಾರಿರುವ ಚಿತ್ರನಟಿ, ಕಾಂಗ್ರೆಸ್‌ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ರಮ್ಯಾ ಮತ್ತೊಮ್ಮೆ ಕಾಲೆಳೆದಿದ್ದಾರೆ.
Vijaya Karnataka Web ರಮ್ಯಾ
ರಮ್ಯಾ


ಪ್ರಧಾನಿ ನರೇಂದ್ರ ಮೋದಿ, ಬಿಜೆಪಿಯನ್ನು ಲೇವಡಿ ಮಾಡಿ ರಮ್ಯಾ ಟ್ವೀಟಿಸಿದ್ದಾರೆ.

ಈಗ ಮತ್ತೆ ನಟಿ ರಮ್ಯಾ ಸುದ್ದಿಯಲ್ಲಿದ್ದಾರೆ.

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಬೇಕಾಗಿತ್ತು. ಆದರೆ ಅದರ ಸಮಯ ಬದಲಾವಣೆ ಮಾಡಲಾಯಿತು.



ಇದಕ್ಕೆ ಬಿಜೆಪಿ ಟ್ವೀಟ್‌ ಮಾಡಿ, ರಾಹುಲ್‌ ಗಾಂಧಿ ಕಾಲೆಳೆದಿತ್ತು. ಬಹುಶಃ ರಾಹುಲ್‌ ಗಾಂಧಿ ಬೆಳಗ್ಗೆ ಏಳುವುದು ತಡವಾಗಿರಬಹುದು ಎಂದು ಟ್ವೀಟಿಸಲಾಗಿತ್ತು.

ಇದಕ್ಕೆ ಉತ್ತರ ನೀಡಿರುವ ರಮ್ಯಾ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮಾಡಿರುವ ಸುದ್ದಿಗೋಷ್ಠಿಗಳ ಸಂಖ್ಯೆ, ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಸುದ್ದಿಗೋಷ್ಠಿಗಳ ಸಂಖ್ಯೆಯನ್ನು ಹಾಕಿ ಢರ್‌ಪೋಕ್‌ ಮೋದಿ, ಢರ್‌ಪೋಕ್‌ ಬಿಜೆಪಿ ಎಂದು ಕಾಲೆಳೆದಿದ್ದಾರೆ.


ಅಲ್ಲದೇ ಯಡಿಯೂರಪ್ಪ ಡೈರಿ ಕುರಿತು ಕಾಂಗ್ರೆಸ್‌ ಮಾಡಿರುವ ಆರೋಪಗಳ ಕುರಿತು ಟ್ವೀಟ್‌ ಮಾಡಿ ಎಲ್ಲರೂ ಕಳ್ಳರೇ ಎಂದು ರಮ್ಯಾ ಟ್ವೀಟ್‌ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌