ಆ್ಯಪ್ನಗರ

ಒಂದೇ ಒಂದು ಸುಳ್ಳು ಹೇಳಿದ್ದೇನೆ ಎಂದು ಸಾಬೀತು ಪಡಿಸಿದರೆ ರಾಜಕೀಯ ನಿವೃತ್ತಿ: ಸಿದ್ದರಾಮಯ್ಯ

ಚಾಮುಂಡೇಶ್ವರಿ ಕ್ಷೇತ್ರದ ಕಡಕೊಳದಲ್ಲಿ ಸಚಿವ ಜಿ.ಟಿ.ದೇವೇಗೌಡ ಅವರೊಂದಿಗೆ ಜಂಟಿ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ''ಮೋದಿ, ಪ್ರತಾಪ್‌ ಸಿಂಹ ಬರೀ ಸುಳ್ಳು ಹೇಳುತ್ತಿದ್ದಾರೆ. ನಾನು ಯಾವುದೇ ಸುಳ್ಳು ಹೇಳಲಿಲ್ಲ. ಒಂದು ವೇಳೆ ಹೇಳಿದ್ದರೆ ಸಾಬೀತು ಪಡಿಸಲಿ,'' ಎಂದರು.

Vijaya Karnataka Web 15 Apr 2019, 11:02 am
ಮೈಸೂರು: ನಾನು ಒಂದೇ ಒಂದು ಸುಳ್ಳು ಹೇಳಿದ್ದೇನೆ ಎನ್ನುವುದನ್ನು ಸಾಬೀತುಪಡಿಸಿದರೆ ರಾಜಕೀಯದಲ್ಲೇ ಇರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.
Vijaya Karnataka Web Siddaramaiah


ಚಾಮುಂಡೇಶ್ವರಿ ಕ್ಷೇತ್ರದ ಕಡಕೊಳದಲ್ಲಿ ಸಚಿವ ಜಿ.ಟಿ.ದೇವೇಗೌಡ ಅವರೊಂದಿಗೆ ಜಂಟಿ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ''ಮೋದಿ, ಪ್ರತಾಪ್‌ ಸಿಂಹ ಬರೀ ಸುಳ್ಳು ಹೇಳುತ್ತಿದ್ದಾರೆ. ನಾನು ಯಾವುದೇ ಸುಳ್ಳು ಹೇಳಲಿಲ್ಲ. ಒಂದು ವೇಳೆ ಹೇಳಿದ್ದರೆ ಸಾಬೀತು ಪಡಿಸಲಿ,'' ಎಂದರು.

''ನಾನು ಸರ್ಜಿಕಲ್‌ ಸ್ಟ್ರೈಕ್‌ ಮಾಡಿದ್ದೇನೆ. ನಾನು ವಿಶ್ವದ ಬಲಿಷ್ಠ ನಾಯಕ. ನನ್ನದು 56 ಇಂಚಿನ ಎದೆ ಎಂದು ಮೋದಿ ಹೇಳುತ್ತಾರೆ. 56 ಇಂಚು ಎದೆ ಬಾಡಿಬಿಲ್ಡರ್‌ಗಳಿಗೆ, ಪೈಲ್ವಾನರಿಗೂ ಇರುತ್ತದೆ. ಅದಕ್ಕಿಂತ ಕರುಣೆಯ ಹೃದಯ ಇರುವುದು ಮುಖ್ಯ. ದಲಿತರು, ಬಡವರು, ಹಿಂದುಳಿದವರ ಪರ ಹೃದಯ ಇರಬೇಕು. ಕಳೆದ ಐದು ವರ್ಷ ಏನು ಮಾಡಿದ್ದೇನೆ ಎಂದು ಮೋದಿ ಹೇಳಲಿಲ್ಲ. ಒಮ್ಮೆಯೂ ಸುದ್ದಿಗೋಷ್ಠಿ ಮಾಡಲಿಲ್ಲ. ಅವರಿಗೆ ಪುಕ್ಕಲು ಇರಬೇಕು. ಏಕೆ ಸುದ್ದಿಗೋಷ್ಠಿ ಮಾಡುತ್ತಿಲ್ಲ ಎಂದು ಮಾಧ್ಯಮದವರೂ ಅವರನ್ನು ಕೇಳುವುದಿಲ್ಲ. ನಾವು ಸಿಕ್ಕಿದಾಗ ಹಿಡ್ಕೊಂಡು ತೊಂದರೆ ಕೊಡುತ್ತಾರೆ'' ಎಂದು ಹೇಳಿದರು.

''ಡಾ.ಅಂಬೇಡ್ಕರ್‌ ಪರಿನಿರ್ವಾಣ ಹೊಂದಿದ ದಿನದಂದೇ ಬಾಬರಿ ಮಸೀದಿ ಬೀಳಿಸಿದರು. ಅಲ್ಲಿಂದ 27 ವರ್ಷ ಕಳೆದರೂ ರಾಮ ಮಂದಿರ ಕಟ್ಟುತೇವೆ ಎಂದು ಹೇಳುತ್ತಲೇ ಬಂದಿದ್ದಾರೆ. ವಾಜಪೇಯಿ ಅವರಿಗೆ 6 ವರ್ಷ, ಮೋದಿಗೆ 5 ವರ್ಷ ಸಿಕ್ಕಿದರೂ ಏಕೆ ರಾಮಮಂದಿರ ಕಟ್ಟಲಿಲ್ಲ? ರಾಮಮಂದಿರ ಕಟ್ಟಲು ನಮ್ಮ ಆಕ್ಷೇಪ ಇಲ್ಲ. ಆದರೆ, ಏಕೆ ಕಟ್ಟಲಿಲ್ಲ ಅನ್ನುವುದೇ ನಮ್ಮ ಪ್ರಶ್ನೆ. ಅವರು ಮಂದಿರ ಕಟ್ಟಲು, ಇಟ್ಟಿಗೆ, ಕಬ್ಬಿಣ ಹಾಗೂ ಹಣ ತೆಗೆದುಕೊಂಡು ಹೋಗಿದ್ದಾರಲ್ಲ ಅದರ ಲೆಕ್ಕ ಕೊಡಬೇಕು'' ಎಂದು ಒತ್ತಾಯಿಸಿದರು.

ಚಾಮುಂಡೇಶ್ವರಿಯಲ್ಲಿ ಸ್ಪರ್ಧೆ ಇಲ್ಲ: ಸಿದ್ದು

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ತಾವು ಸ್ಪರ್ಧಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಚಾಮುಂಡೇಶ್ವರಿ ಕ್ಷೇತ್ರದ ಜಯಪುರದ ಪ್ರಚಾರ ಸಭೆಯಲ್ಲಿ ಈ ವಿಷಯ ತಿಳಿಸಿದರು. ''ಈಗಾಗಲೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದೇನೆ. ಈ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿಯಲ್ಲಿ ಸ್ಪರ್ಧೆ ಮಾಡುವ ಪ್ರಶ್ನೆ ಬರುವುದಿಲ್ಲ. ಈಗ ನಮ್ಮ ದೃಷ್ಟಿ ಮೈತ್ರಿ ಅಭ್ಯರ್ಥಿ ಸಿ.ಎಚ್‌. ವಿಜಯಶಂಕರ್‌ ಅವರನ್ನು ಗೆಲ್ಲಿಸುವುದರತ್ತ ಇರಬೇಕು'' ಎಂದು ಹೇಳಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿ ಜಿ.ಟಿ.ದೇವೇಗೌಡ ಅವರಿಂದ ಸೋಲು ಅನುಭವಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ