ಆ್ಯಪ್ನಗರ

ಅಂಬೇಡ್ಕರ್‌ ಜಯಂತಿ ಆಗಿರೋದ್ರಿಂದ ಒಳ್ಳೆ ವಿಚಾರ ಮಾತ್ರ ಮಾತಾಡೋಣ: ಸುಮಲತಾ

ಸಂವಿಧಾನ ನಿರ್ಮಾತೃ ಡಾ. ಬಿಆರ್ ಅಂಬೇಡ್ಕರ್ ಅವರ 128ನೇ ಜನ್ಮದಿನದ ಪ್ರಯುಕ್ತ ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರು ಜಿಲ್ಲಾಧಿಕಾರಿ ಕಚೇರಿ ಎದುರಿನ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಚುನಾವಣೆ ಪ್ರಚಾರ ಆರಂಭಿಸಿದರು.

Vijaya Karnataka Web 14 Apr 2019, 3:45 pm
ಮಂಡ್ಯ: ಇಂದು ಅಂಬೇಡ್ಕರ್ ಜಯಂತಿ ಹಿನ್ನೆಲೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರು ಜಿಲ್ಲಾಧಿಕಾರಿ ಕಚೇರಿ ಎದುರಿನ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
Vijaya Karnataka Web Sumalatha Ambareesh


ಈ ಸಂದರ್ಭದಲ್ಲಿ ಸುಮಲತಾ ಅವರಿಗೆ ಚಿತ್ರ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಜಿಲ್ಲೆಯ ದಲಿತ ಮುಖಂಡರು, ವಿವಿಧ ಪಕ್ಷಗಳ ಮುಖಂಡರು ಸಾಥ್ ನೀಡಿದರು.

ಬಳಿಕ ಮಂಡ್ಯ ನಗರದ ಸಾಡೆ ಚರ್ಚ್‌ನಲ್ಲಿ ಪಾಲ್ಗೊಂಡು ಸಾಮೂಹಿಕ ಪ್ರಾರ್ಥನೆ ಯಲ್ಲಿ ಭಾಗಿಯಾದರು. ನಂತರ ಕ್ರೈಸ್ತ ಬಾಂಧವರ ಮತಯಾಚಿಸಿದರು.

ಸಂಸದ ಶಿವರಾಮೇಗೌಡ ಹೇಳಿಕೆ ವಿಚಾರ ಕುರಿತು ಪ್ರಸ್ತಾಪಿಸಿದಾಗ, ಅಂಬೇಡ್ಕರ್ ಜಯಂತಿ ಆಗಿರುವುದರಿಂದ ಒಳ್ಳೆಯ ವಿಚಾರ ಮಾತ್ರ ಮಾತನಾಡೋಣ ಎಂದು ಸುಮಲತಾ ಹೇಳಿದರು.

ಜಿಲ್ಲೆಯಲ್ಲಿ ಭಯದ ವಾತಾವರಣ ಇದೆ. ಆ ಕಾರಣಕ್ಕೆ ನಾನು ಚುನಾವಣಾ ಆಯೋಗಕ್ಕೆ ದೂರು ಕೊಟ್ಟಿದ್ದೇನೆ. ಅಧಿಕಾರ ದುರುಪಯೋಗ ವ್ಯಾಪಕವಾಗಿ ನಡೆಯುತ್ತಿದೆ ಎಂದು ಸುಮಲತಾ ಮೈತ್ರಿ ಸರಕಾರದ ವಿರುದ್ದ ತಿರುಗೇಟು ಕೊಟ್ಟರು.

ಜೆಡಿಎಸ್ ಗೆ ಮುಸ್ಲಿಮರ ಬೆಂಬಲ ವಿಚಾರ ಪ್ರಸ್ತಾಪಿಸಿದಾಗ, ನನಗೂ ಸಹ ಮುಸ್ಲಿಮರ ಬೆಂಬಲ ಇದೆ. ನಿಮಗೆ ಗೊತ್ತಾಗಿಲ್ಲ ಅಷ್ಟೆ ಎಂದು ನುಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ